Actress Ramya| ರಾಹುಲ್ ಗಾಂಧಿ ನನ್ನ ತಪ್ಪಿನಿಂದಾಗಿಯೇ ಟ್ರೋಲ್​ಗೆ ಒಳಗಾಗಿದ್ದರು; ಕೊನೆಗೂ ರಹಸ್ಯ ಬಿಚ್ಚಿಟ್ಟ ನಟಿ ರಮ್ಯಾ

ನಟಿ ರಾಜಕಾರಣಿ ರಮ್ಯಾ ಇನ್ಸ್ಟಾಗ್ರಾಂ ಬರಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಕೊನೆಗೂ ರಮ್ಯಾ ರಾಜೀನಾಮೆಯ ಅಸಲಿಯತ್ತು ಬಯಲಾಗಿದೆ.

ನಟಿ ರಾಜಕಾರಣಿ ರಮ್ಯಾ.

ನಟಿ ರಾಜಕಾರಣಿ ರಮ್ಯಾ.

 • Share this:
  ರಾಜಕಾರಣಿ ಹಾಗೂ ನಟಿ ರಮ್ಯಾ 2013 ಮಂಡ್ಯ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ 6 ತಿಂಗಳು ಸಂಸದೆಯಾಗಿದ್ದವರು. ಆದರೆ, 2014ರಲ್ಲಿ ಮೋದಿ ಅಲೆಯ ಪರಿಣಾಮ ಸೋಲನುಭವಿಸಿದ್ದರು. ಕಾಂಗ್ರೆಸ್​ ಒಳಗಿನ ಒಳ ಜಗಳವೂ ಅವರ ಸೋಲಿಗೆ ಕಾರಣವಾಗಿತ್ತು. ಆದರೆ, ಈ ಸೋಲಿನ ನಂತರ 2019 ರ ಲೋಕಸಭಾ ಚುನಾವಣೆಯ ವೇಳೆಗೆ ರಮ್ಯಾ ಅವರನ್ನು ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆಯನ್ನಾಗಿ ನೇಮಕ ಮಾಡಲಾಗಿತ್ತು. ಈ ವೇಳೆಯೂ ಸಹ ನಟಿ, ರಾಜಕಾರಣಿ ರಮ್ಯಾ ಸಾಕಷ್ಟು ಸುದ್ದಿಯಾಗಿದ್ದರು. ಆದರೆ, ಈ ಹುದ್ದೆಯಿಂದ ಅವರ ಹಠಾತ್ ನಿರ್ಗಮನ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಅವರು ಈ ಎಲ್ಲಾ ಪ್ರಶ್ನೆಗಳಿಗೆ ಎರಡು ವರ್ಷಗಳ ಬಳಿಕ ಉತ್ತರ ನೀಡಿದ್ದಾರೆ.

  ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರ ನೀಡಿರುವ ನಟಿ-ರಾಜಕಾರಣಿ ರಮ್ಯ, "ತಾನು ಮಾಡಿದ ಏಕೈಕ ತಪ್ಪಿನಿಂದ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಅವರಿಗಾದ ತೊಂದರೆಗಳ ಬಗ್ಗೆ ಮಾತನಾಡಿದ್ದಾರೆ. ತಾವು ಏಕೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆ ಸ್ಥಾನಕ್ಕೆ ರಾಜೀನಾಮೆ ನೀಡಿದೆ" ಎಂಬುದನ್ನು ತಿಳಿಸಿದ್ದಾರೆ.

  ರಮ್ಯಾ ಇನ್ಸ್ಟಾಗ್ರಾಂ ಬರಹ.


  ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ 2018 ರ ಆಗಸ್ಟ್‌ನಲ್ಲಿ ಪಕ್ಷದ ಕೆಲ ಸಂಸದರೊಂದಿಗೆ ಜರ್ಮನಿಗೆ ಭೇಟಿ ನೀಡಿದ್ದರು. ಬರ್ಲಿನ್‌ನ ವಸ್ತುಸಂಗ್ರಹಾಲಯದ ಪ್ರವಾಸದ ವೇಳೆ ರಮ್ಯಾ ಫೋಟೋಗಳನ್ನು ತೆಗೆದಿದ್ದರಂತೆ. ಆ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಕಾರಣಕ್ಕೆ ವೈರಲ್ ಆಗಿ, ರಾಹುಲ್ ಗಾಂಧಿ ಅವರಿಗೆ ತೀವ್ರ ಮುಜುಗರ ಉಂಟು ಮಾಡಿದ್ದವು. ಆದರೆ, ಇದೇ ಕಾರಣಕ್ಕೆ ರಮ್ಯಾ ರಾಜೀನಾಮೆ ನೀಡಿದ್ದಾರೆ ಎಂದು ಯಾರಿಗೂ ತಿಳಿದಿರಲಿಲ್ಲ.

  ಹೀಗಾಗಿ ಪ್ರಸ್ತುತ ಈ ಬಗ್ಗೆ ಮಾಹಿತಿ ನೀಡಿರುವ ರಮ್ಯಾ, "ರಾಹುಲ್ ಗಾಂಧಿ ಅವರ ಫೋಟೋಗಳು ಹೆಚ್ಚು ಟ್ರೋಲ್‌ಗೆ ಒಳಗಾದವು. ರಾಹುಲ್ ಗಾಂಧಿ ಬಗ್ಗೆ ಅಪಹಾಸ್ಯ ಮಾಡಲಾಯಿತು. ನಾನು ಮಾಡಿದ ತಪ್ಪಿನಿಂದ ರಾಹುಲ್ ಗಾಂಧಿ ಅವರನ್ನು ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಲಾಯಿತು. ನಾನು ಮಾಡಿದ ತಪ್ಪಿನಿಂದ ಅಂದು ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ.

  ಇದನ್ನೂ ಓದಿ: Akhil Gogoi| ಅಸ್ಸಾಂ ಸಿಎಎ ವಿರೋಧಿ ಗಲಭೆ; ಹೋರಾಟ ಅಖಿಲ್ ಗೊಗೋಯ್​ ವಿರುದ್ಧ ಎಲ್ಲಾ ಪ್ರಕರಣ ಕೈಬಿಟ್ಟ ಎಎನ್​ಐ ಕೋರ್ಟ್

  ತಮ್ಮ ತಪ್ಪಿಗೆ ಕ್ಷಮಾಪಣೆ ಕೇಳಲು ಹಾಗೂ ಹುದ್ದೆಗೆ ರಾಜೀನಾಮೆ ನೀಡಲು ರಾಹುಲ್ ಗಾಂಧಿ ಬಳಿ ತೆರಳಿದ್ದೆ. ಆದರೆ, ಅವರು ರಾಜೀನಾಮೆಯನ್ನು ತಿರಸ್ಕರಿಸಿ, ಇನ್ನು ಮುಂದೆ ಜಾಗರೂಕರಾಗಿರಿ ಎಂದು ಹೇಳಿದ್ದರು. ಆ ಸಮಯದಲ್ಲಿ ನಾನು ಕಣ್ಣೀರಿಟ್ಟಿದ್ದೆ.

  ಇದನ್ನೂ ಓದಿ: ಸಾರ್ವಜನಿಕರು ಕೋವಿಡ್​ ಮಾರ್ಗಸೂಚಿ ಪಾಲನೆ ಮಾಡುವವರೆಗೆ ಅನ್​ಲಾಕ್​ ಸಾಧ್ಯವಿಲ್ಲ; ಗೌರವ್ ಗುಪ್ತಾ

  ನಾನು ಮಾಡಿದ ತಪ್ಪಿಗೆ, ನನ್ನನ್ನ ಹುದ್ದೆಯಿಂದ ಹೊರದಬ್ಬಬೇಕಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ರಾಹುಲ್ ಗಾಂಧಿ ಒಳ್ಳೆಯ ಮನುಷ್ಯ. ಅವರ ಜನಪರ ಕಾಳಜಿ ನನ್ನ ಮೇಲೆ ಸದಾ ಪ್ರಭಾವ ಬೀರುತ್ತದೆ. ಆದರೂ, ಆ ಹುದ್ದೆಯಲ್ಲಿ ಉಳಿಯದೆ ಕೊನೆಗೆ ನಾನೇ ರಾಜೀನಾಮೆ ನೀಡಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ನಟಿ - ರಾಜಕಾರಣಿ ಬರೆದುಕೊಂಡಿ ದ್ದಾರೆ. ಈ ಬರಹ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಕೊನೆಗೂ ರಮ್ಯಾ ರಾಜೀನಾಮೆಯ ಅಸಲಿಯತ್ತು ಬಯಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: