ವಿವಾದಾತ್ಮಕ ಹೇಳಿಕೆ ನೀಡಿದ್ದ Congress ಮುಖಂಡ ಮುಕ್ರಂಖಾನ್‌ಗೆ ಷರತ್ತು ಬದ್ದ ಜಾಮೀನು

ಹಿಜಾಬ್ ತಂಟೆಗೆ ಬಂದರೆ ತುಕ್ಡೆ ತುಕ್ಡೆ ಮಾಡಿಬಿಡ್ತಿವಿ ಎಂದು ಮುಖ್ರಂಖಾನ್ ಹೇಳಿಕೆ ನೀಡಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಶ್ರೀರಾಮಸೇನೆಯ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ವಿರುದ್ಧ ಹೇಳಿಕೆ ನೀಡಿದ್ದರು.

ಕಾಂಗ್ರೆಸ್​ ಮುಖಂಡ ಮುಕ್ರಂ ಖಾನ್​

ಕಾಂಗ್ರೆಸ್​ ಮುಖಂಡ ಮುಕ್ರಂ ಖಾನ್​

  • Share this:
ವಿವಾದಾತ್ಮಕ ಹೇಳಿಕೆ (Controversy Statement) ನೀಡಿ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ಮುಖಂಡ ಮುಕ್ರಂಖಾನ್(Congress Leader Mukramkhan)ಗೆ  ಕಲಬುರಗಿ ಜಿಲ್ಲೆ ಸೇಡಂ (Sedam, Kalaburagi) ಪಟ್ಟಣದ ಸಿವಿಲ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು (Bail) ನೀಡಿದೆ. ಫೆಬ್ರವರಿ 8 ರಂದು ಆಯೋಜಿಸಿದ್ದ ಹಿಜಾಬ್ (Hijab) ಪರ ಪ್ರತಿಭಟನೆಯಲ್ಲಿ ಮುಕ್ರಂಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಂದೆ ಇಂತಹ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿ ಸಿವಿಲ್ ನ್ಯಾಯಾಲಯ ಜಾಮೀನು (Bail) ಮಂಜೂರು ಮಾಡಿದೆ. ಮುಂದೆ ಹೇಳಿಕೆ ನೀಡಿದ್ರೆ ನಿಮ್ಮ ವಿರುದ್ಧವಿರುವ ಎಲ್ಲಾ ಕೇಸ್‌ ಗಳು ಓಪನ್ ಮಾಡುವುದರ ಜೊತೆಗೆ ನಿಮ್ಮಲೆ ರೌಡಿಶೀಟ್ ಕೇಸ್ (Rowdysheet Case) ದಾಖಲಿಸಲಾಗುವುದು ಎಂದು ನ್ಯಾಯಾಲಯ ಖಡಕ್ ಎಚ್ಚರಿಕೆಯನ್ನು ನೀಡಿದೆ.

ಹಿಜಾಬ್ ತಂಟೆಗೆ ಬಂದರೆ ತುಕ್ಡೆ ತುಕ್ಡೆ ಮಾಡಿಬಿಡ್ತಿವಿ ಎಂದು ಮುಖ್ರಂಖಾನ್ ಹೇಳಿಕೆ ನೀಡಿದ್ದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಶ್ರೀರಾಮಸೇನೆಯ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ವಿರುದ್ಧ ಹೇಳಿಕೆ ನೀಡಿದ್ದರು.

ಈ ಹಿಂದೆ  ಸೇಡಂ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಹಿಜಾಬ್ ತಂಟೆಗೆ ಬಂದರೆ ತುಕ್ಡೆ ತುಕ್ಡೆ ಮಾಡಿಬಿಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದರು.  ಮುಕ್ರಂಖಾನ್ ವಿರುದ್ಧ ಫೆಬ್ರವರಿ 16 ರಂದು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:  Kannada School: ಕನ್ನಡ ಶಾಲೆ ಉಳಿಸಲು ವಿಭಿನ್ನ ಯತ್ನ: Smart Class ಆಗಿ ಬದಲಾದ ಹಳೆ ಸರ್ಕಾರಿ ಬಸ್

ಪ್ರಕರಣ ದಾಖಲಾಗುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ್ದ ಮುಕ್ರಂಖಾನ್

ಪ್ರಕರಣ ದಾಖಲಾದ ನಂತರ ತಲೆಮರಿಸಿಕೊಂಡಿದ್ದ ಮುಕ್ರಂಖಾನ್, ಅಜ್ಞಾತ ಸ್ಥಳದಿಂದ ಜಾಮೀನುಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಕಲಬುರಗಿ ನಾಲ್ಕನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರು ಮುಕ್ರಂಖಾನ್ ಜಾಮೀನು ಅರ್ಜಿಯನ್ನ ವಜಾಗೊಳಿಸಿತ್ತು.

ಹೈದರಾಬಾದ್ ನಲ್ಲಿ ಬಂಧನ

ಇನ್ನೂ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ, ಅಲರ್ಟ್ ಆದ ಸೇಡಂ ಠಾಣೆ ಪೊಲೀಸರು, ಹೈದರಾಬಾದ್ ನಗರದಲ್ಲಿ ಮುಕ್ರಂಖಾನ್‌ನನ್ನ ಬಂಧಿಸಿದ್ದರು. ಇನ್ನೂ ಬಂಧನದ ನಂತರ ಮುಕ್ರಂಖಾನ್ ಆರೋಗ್ಯದಲ್ಲಿ ಏರುಪೇರು ಆದ ಹಿನ್ನಲೆಯಲ್ಲಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಂದು ಹಿಜಾಬ್ ವಿವಾದದ ತೀರ್ಪು
ಇಂದು ಬೆಳಗ್ಗೆ ಹಿಜಾಬ್ ವಿವಾದ (Hijab Row) ಪ್ರಕರಣದ ತೀರ್ಪು ಹೊರಬೀಳಲಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದರಿಂದ ಬೆಂಗಳೂರು (Bengaluru) ನಗರದಾದ್ಯಂತ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ನಗರದಾದ್ಯಂತ 10 ಸಾವಿರಕ್ಕೂ ಅಧಿಕ ಪೊಲೀಸ್ (Police) ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇರಿಸಿದ್ದು, ಅಯಾ ವಿಭಾಗಗಳಲ್ಲಿ ಡಿಸಿಪಿಗಳಿಂದ ಬಂದೋಬಸ್ತ್ ಪರಿಶೀಲನೆ ಮಾಡಲಾಗುತ್ತಿದೆ.

ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, 8 ಡಿಸಿಪಿ, 40 ಎಸಿಪಿ, 120 ಇನ್ಸ್‌ ಪೆಕ್ಟರ್ ಗಳ ಜೊತೆ 40 ಸಿಎಆರ್, 30 ಕೆಎಸ್ಆರ್ ಪಿ ತುಕಡಿ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ 144 ಸೆಕ್ಷನ್ (144 Section) ಜಾರಿ ಮಾಡಲಾಗಿದೆ. ನಗರದಲ್ಲಿ ಒಂದು ವಾರ ಪ್ರತಿಭಟನೆಗಳಿಗೆ ನಿರ್ಬಂಧ ಹಾಕಲಾಗಿದೆ.

ಇದನ್ನೂ ಓದಿ:  Hijab Controversy: ವಿಧಾನಸಭೆಯಲ್ಲಿ ಹಿಜಾಬ್​ ವಿವಾದದ ಗದ್ದಲ, ಜಮೀರ್​ ಹಾಗೂ JDS ಶಾಸಕರ ನಡುವೆ ವಾಗ್ವಾದ  

ಇಂದು 10.30ಕ್ಕೆ ತೀರ್ಪು ಪ್ರಕಟ

ಬೆಳಗ್ಗೆ 10.30ಕ್ಕೆ ಹಿಜಾಬ್ ವಿವಾದದ ಕುರಿತು ತೀರ್ಪು ಪ್ರಕಟಿಸುವುದಾಗಿ ಕರ್ನಾಟಕ ಹೈಕೋರ್ಟ್ ತಿಳಿಸಿದೆ.  ಸಮವಸ್ತ್ರದ ಜತೆ ಹಿಜಾಬ್ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10.30ಕ್ಕೆ ಹೈಕೋರ್ಟ್ ಪೂರ್ಣ ಪೀಠದಿಂದ ತೀರ್ಪು ಹೊರ ಬೀಳಲಿದೆ. ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ತೀರ್ಪು ನೀಡಲಿದೆ.
Published by:Mahmadrafik K
First published: