HOME » NEWS » State » CONGRESS LEADER MB PATIL URGED GOVT OF GOA TO MAKE NECESSARY ARRANGEMENTS TO KANNADIGAS GNR

ಕೊರೋನಾ ಲಾಕ್​​ಡೌನ್​ಗೆ ತತ್ತರಿಸಿದ ಗೋವಾ ಕನ್ನಡಿಗರು; ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಎಂಬಿ ಪಾಟೀಲ್​

ಭಾರತ ಲಾಕ್​​ಡೌನ್ನಿಂದ ಸಂತ್ರಸ್ತರಾಗಿರುವ ಗೋವಾದ ಕನ್ನಡಿಗರಿಗೆ ಅಲ್ಲಿನ ಸರಕಾರ ಹಳಸಿದ ಅನ್ನ ತಿನ್ನುವಂತೆ ಮಾಡಿತ್ತು. ಈ ಹಿಂದೆ ಇದರ ಕುರಿತು ಅಳಲು ತೋಡಿಕೊಂಡಿದ್ದ ಗೋವಾ ಕನ್ನಡಿಗರು, ತಮ್ಮ ಪಾಡು ನಾಯಿ ಪಾಡಾಗಿದೆ. ಕಳೆದ ಎರಡು ಮೂರು ದಿನಗಳಿಂದ ತಮ್ಮ ಪರಿಸ್ಥಿತಿ ಅಯೋಮಯವಾಗಿದೆ ಎಂದಿದ್ದರು.

news18-kannada
Updated:April 2, 2020, 5:20 PM IST
ಕೊರೋನಾ ಲಾಕ್​​ಡೌನ್​ಗೆ ತತ್ತರಿಸಿದ ಗೋವಾ ಕನ್ನಡಿಗರು; ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಎಂಬಿ ಪಾಟೀಲ್​
ಎಂ.ಬಿ. ಪಾಟೀಲ್.
  • Share this:
ಬೆಂಗಳೂರು(ಏ.02): ಕೊರೋನಾ ವೈರಸ್​​ ವ್ಯಾಪಕವಾಗಿ ಹರಡುತ್ತಿರುವ ಕಾರಣ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್​​ಡೌನ್​​ ಮಾಡಲಾಗಿದೆ. ಇದರಿಂದ ಅಗತ್ಯ ವಸ್ತುಗಳ ಖರೀದಿಗೆ ಹಣವಿಲ್ಲದೇ ಊಟವಿಲ್ಲದೇ ಗೋವಾದಲ್ಲಿರುವ ಕನ್ನಡಿಗರು ಪರದಾಡುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತು ಬೆಳಗಾವಿಯಿಂದ ಗೋವಾಗೆ ತೆರಳಿ ಕೂಲಿ ಕೆಲಸ ಮಾಡುತ್ತಿದ್ದ 300ಕ್ಕೂ ಹೆಚ್ಚು ಕನ್ನಡಿಗರ ಹೀಗೆ ಹೊಟ್ಟೆಗೇನು ಇಲ್ಲದೇ ಗೋಳಾಡುತ್ತಿದ್ದಾರೆ. ಕೆಲವು ಕನ್ನಡಿಗರು ಗೋವಾ ತೊರೆದು ಕಾಲ್ನಡಿಗೆಯ ಮೂಲಕ ರಾಜ್ಯದ ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ.

ಅತ್ತ ರಾಜ್ಯದ ಕನ್ನಡಿಗರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಗೋವಾ ಸರ್ಕಾರದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದು ಸುತ್ತು ಮಾತುಕತೆ ನಡೆಸಿವೆ. ಗೋವಾ ರಾಜ್ಯದಲ್ಲಿ ಸಾವಿರಾರು ಕಾರ್ಮಿಕರು ಹಲವಾರು ವರ್ಷಗಳಿಂದ ಕಟ್ಟಡ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದು ಲಾಕ್​​ಡೌನ್​​​ ಕಾರಣದಿಂದ ತೊಂದರೆಯಲ್ಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ನಿರ್ದೇಶನದಂತೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್​​, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜತೆ ದೂರವಾಣಿ ಮೂಲಕ ಸಮಸ್ಯೆ ಬಗ್ಗೆ ಚರ್ಚಿಸಿದ್ದಾರೆ. ಈ ಬೆನ್ನಲೀಗ ಮಾಜಿ ಸಚಿವ ಎಂ.ಬಿ ಪಾಟೀಲ್​​ ಗೋವಾ ಮಂತ್ರಿ ಮೈಕಲ್ ಲೋಬೋ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಗೋವಾ ಕನ್ನಡಿಗರ ನೆರವಿಗೆ ಧಾವಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಎಂ.ಬಿ ಪಾಟೀಲ್,​​​ ಗೋವಾ ಮಂತ್ರಿ ಮೈಕಲ್ ಲೋಬೋ ಜತೆಗೆ ಕನ್ನಡಿಗರ ರಕ್ಷಣೆಗೆ ಧಾವಿಸುವಂತೆ ಚರ್ಚೆ ನಡೆಸಿದ್ದೇನೆ. ಇದು ನಮ್ಮ ಮಾನವೀಯತೆ ಪರೀಕ್ಷಿಸಿಕೊಳ್ಳುವ ಸಮಯ. ಎಲ್ಲರೂ ಒಟ್ಟಾಗಿ ಕೊರೋನಾ ವಿರುದ್ಧ ಹೋರಾಡೋಣ ಎಂದು ಬರೆದುಕೊಂಡಿದ್ದಾರೆ. ಜತೆಗೆ ಕನ್ನಡಿಗರ ಸಹಾಯಕ್ಕೆ ಮುಂದಾದ ಮೈಕಲ್ ಲೋಬೋಗೆ ಧನ್ಯವಾದಗಳು ತಿಳಿಸಿದ್ದಾರೆ.
ಭಾರತ ಲಾಕ್​​ಡೌನ್ನಿಂದ ಸಂತ್ರಸ್ತರಾಗಿರುವ ಗೋವಾದ ಕನ್ನಡಿಗರಿಗೆ ಅಲ್ಲಿನ ಸರಕಾರ ಹಳಸಿದ ಅನ್ನ ತಿನ್ನುವಂತೆ ಮಾಡಿತ್ತು. ಈ ಹಿಂದೆ ಇದರ ಕುರಿತು ಅಳಲು ತೋಡಿಕೊಂಡಿದ್ದ ಗೋವಾ ಕನ್ನಡಿಗರು, ತಮ್ಮ ಪಾಡು ನಾಯಿ ಪಾಡಾಗಿದೆ. ಕಳೆದ ಎರಡು ಮೂರು ದಿನಗಳಿಂದ ತಮ್ಮ ಪರಿಸ್ಥಿತಿ ಅಯೋಮಯವಾಗಿದೆ ಎಂದಿದ್ದರು.

ಇದನ್ನೂ ಓದಿತೀವ್ರಗೊಂಡ ಕೋವಿಡ್​​​-19: ಭಾರತದ 20 ಕೊರೋನಾ ಹಾಟ್​​ಸ್ಪಾಟ್​​​ ಗುರುತಿಸಿದ ಕೇಂದ್ರ ಸರ್ಕಾರ

ಕೂಲಿ ಕೆಲಸಕ್ಕಾಗಿ ಗೋವಾಕ್ಕೆ ತೆರಳಿರುವ ವಿಜಯಪುರ ಜಿಲ್ಲೆಯ ಸಿಂದಗಿ, ಮುದ್ದೇಬಿಹಾಳ ಸೇರಿದಂತೆ ನಾನಾ ಭಾಗಗಳ ಜನರು ಈಗ ಅಕ್ಷರಷಃ ಕಂಗಾಲಾಗಿದ್ದಾರೆ. ನಮ್ಮ ಗೋಳನ್ನು ಕೇಳುವವರೇ ಇಲ್ಲ. ಹಳಸಿದ ಅನ್ನ ತಿನ್ನಲು ಕೊಡುತ್ತಿದ್ದಾರೆ. ನಾವು ಮನುಷ್ಯರಲ್ಲವೇ ಎಂದು ಅಲ್ಲಿನ ಕಾರ್ಮಿಕರು ಕಣ್ಣೀರಿಟ್ಟಿದ್ದಾರೆ.
Youtube Video
First published: April 2, 2020, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories