HOME » NEWS » State » CONGRESS LEADER MALLIKARJUNA KHARGE HITS OUT BJP IN BELAGAVI LG

ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿದ ಬಿಜೆಪಿಗೆ ಜನ ಮನ್ನಣೆ ನೀಡಲಿಲ್ಲ; ಮಲ್ಲಿಕಾರ್ಜುನ ಖರ್ಗೆ

ಸುಪ್ರೀಂ ಕೋರ್ಟ್ ಮೀಸಲಾತಿ ಬಗ್ಗೆ ಟಿಪ್ಪಣಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಸುಪ್ರೀಂ ಕೋರ್ಟ್ ನಿರ್ಧಾರ ತಪ್ಪು ಇದೆ ಎಂದು ಹೇಳಿದ್ದೇನೆ. ಮೂಲಭೂತವಾಗಿ ಮೀಸಲಾತಿ ಸಂವಿಧಾನದಲ್ಲಿ ಇರುವ ಹಕ್ಕು. ಟಿಪ್ಪಣ್ಣಿಯನ್ನು ನಾನು ಖಂಡಿಸುತ್ತೇನೆ ಎಂದರು.

news18-kannada
Updated:February 13, 2020, 11:29 AM IST
ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿದ ಬಿಜೆಪಿಗೆ ಜನ ಮನ್ನಣೆ ನೀಡಲಿಲ್ಲ; ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ.
  • Share this:
ಬೆಳಗಾವಿ,(ಫೆ.13): ದೆಹಲಿಯಲ್ಲಿ ಬಿಜೆಪಿ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿತ್ತು. ಹಾಗಾಗಿ ಬಿಜೆಪಿಗೆ ಯಶಸ್ಸು ಸಿಗಲಿಲ್ಲ. ಒಡೆದು ಆಳುವ ರಾಜಕಾರಣಕ್ಕೆ ಜನ ಮನ್ನಣೆ ನೀಡಲಿಲ್ಲ ಎಂದು ಹಿರಿಯ ಕಾಂಗ್ರೆಸ್​ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ನಾನು ಕಲಬುರ್ಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸಂವಿಧಾನ ಬದಲಾವಣೆ ಮಾಡಿ ವಿಶೇಷ ಸ್ಥಾನಮಾನ ಕೊಡಿಸಿದ್ದೇನೆ. ರೈಲ್ವೆ ಮಾರ್ಗ, ಬೋಗಿ ಕಾರ್ಖಾನೆ ಆರಂಭಿಸಿದ್ದೇನೆ. ಯಾವುದೇ ಕಳಂಕ ಇಲ್ಲದೇ ಕೆಲಸ ಮಾಡಿದ್ದೇವೆ. ಆದರೆ ಮೋದಿ ಜನರನ್ನು ಭಾವನಾತ್ಮಕವಾಗಿ ಸೆಳೆಯಲು ಯತ್ನಿಸಿದರು. ಕೆಲ ಸಲ ಅಪಪ್ರಚಾರ ಮಾಡಿ ಅಧಿಕಾರಕ್ಕೆ ಬಂದರು. ಇನ್ನೂ ಕೆಲವು ಸಲ ಅಭಿವೃದ್ಧಿಇಲ್ಲದೆ ಅಜೆಂಡಾ ಮೇಲೆ ಅಧಿಕಾರಕ್ಕೆ ಬಂದರು," ಎಂದು ಕಿಡಿಕಾರಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಬೆಳಗಾವಿಗೆ ಭೇಟಿ ನೀಡಿದ ಶ್ರೀಮಂತ ಪಾಟೀಲ್​

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಸೋತ ವಿಚಾರವಾಗಿ, ಚುನಾವಣೆ ಅಂದ ಮೇಲೆ ಸೋಲು, ಗೆಲುವು ಸಹಜ. ನಮ್ಮ ಕಡೆಯಿಂದ ಪ್ರಯತ್ನ ಆಗಿದೆ. ಕಾಂಗ್ರೆಸ್ ಸೋಲಿನ ಬಗ್ಗೆ ವರ್ಕಿಂಗ್ ಕಮಿಟಿಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಹೇಳಿದರು. 

ಸುಪ್ರೀಂ ಕೋರ್ಟ್ ಮೀಸಲಾತಿ ಬಗ್ಗೆ ಟಿಪ್ಪಣಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಸುಪ್ರೀಂ ಕೋರ್ಟ್ ನಿರ್ಧಾರ ತಪ್ಪು ಇದೆ ಎಂದು ಹೇಳಿದ್ದೇನೆ. ಮೂಲಭೂತವಾಗಿ ಮೀಸಲಾತಿ ಸಂವಿಧಾನದಲ್ಲಿ ಇರುವ ಹಕ್ಕು. ಟಿಪ್ಪಣ್ಣಿಯನ್ನು ನಾನು ಖಂಡಿಸುತ್ತೇನೆ ಎಂದರು.

ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಲಿದೆ. ಇಂದು ಸಾಂಗ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲಿದ್ದೇನೆ. ಎನ್ ಸಿ ಪಿ ನಾಯಕ್ ಶರದ್ ಪವಾರ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Corona Virus: ಕೊರೊನಾ ವೈರಸ್​ಗೆ ಹುಬೈ​ನಲ್ಲಿ ಒಂದೇ ದಿನ 242 ಸಾವು; ಚೀನಾದಲ್ಲಿ ಮೃತರ ಸಂಖ್ಯೆ 1,355ಕ್ಕೆ ಏರಿಕೆ
First published: February 13, 2020, 11:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories