• Home
  • »
  • News
  • »
  • state
  • »
  • ಆಕ್ಸಿಜನ್​ ಇಲ್ಲದೇ ಜನ ಸಾವನ್ನಪ್ಪುತ್ತಿದ್ದರೆ, ಇವರು ಕೋಮುವಾದ ಸೃಷ್ಟಿಸುತ್ತಿದ್ದಾರೆ; ಕೃಷ್ಣ ಭೈರೇಗೌಡ

ಆಕ್ಸಿಜನ್​ ಇಲ್ಲದೇ ಜನ ಸಾವನ್ನಪ್ಪುತ್ತಿದ್ದರೆ, ಇವರು ಕೋಮುವಾದ ಸೃಷ್ಟಿಸುತ್ತಿದ್ದಾರೆ; ಕೃಷ್ಣ ಭೈರೇಗೌಡ

ಕೃಷ್ಣಬೈರೇಗೌಡ

ಕೃಷ್ಣಬೈರೇಗೌಡ

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಡೆಯವರು ವಾರ್ ರೂಂ ಹೈಜಾಕ್ ಮಾಡಿದ್ದಾರೆ. ಅಲ್ಲಿನ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

  • Share this:

    ಬೆಂಗಳೂರು (ಮೇ. 7): ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್​ ವಾರ್​ ರೂಂನಲ್ಲಿ ಬೆಡ್​ ಬ್ಲಾಕಿಂಗ್​ ದಂಧೆಯನ್ನು ಬಯಲಿ ಮಾಡುವ ಮೂಲಕ ಜನರಿಗೆ ದಾರಿ ತಪ್ಪಿಸಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್​ ಬೆಂಗಳೂರು ಪೊಲೀಸ್​ ಕಮಿಷನರ್​ಗೆ ದೂರು ಸಲ್ಲಿಸಲು ಮುಂದಾಗಿದೆ. ನಗರ ಪೊಲೀಸ್ ಆಯುಕ್ತರ ಕಛೇರಿಗೆ ಆಗಮಿಸಿದ ಆಗಮಿಸಿದ ಶಾಸಕ ಕೃಷ್ಣಬೈರೇಗೌಡ, ಜಮೀರ್ ಅಹ್ಮದ್, ಹ್ಯಾರಿಸ್, ಸಲೀಂ ಅಹ್ಮದ್ ಸೇರಿದಂತೆ ಮುಖಂಡರುಗಳ ಕೆಪಿಸಿಸಿ ನಿಯೋಗ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರ ವಿರುದ್ದ ದೂರು ನೀಡಲಿರುವ ನಿಯೋಗ ದೂರು ನೀಡಲಿದೆ. ಕೊರೋನಾ ಬೆಡ್ ದಂಧೆ ಪ್ರಕರಣದಲ್ಲಿ ಕೋಮು ಬಣ್ಣ ಹಚ್ಚಿರುವ ಆರೋಪ ಹಾಗೂ ಐಎಎಸ್ ಅಧಿಕಾರಿ ವಿರುದ್ದ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಮೇಲೆ ದೂರು ಸಲ್ಲಿಸಲಿದ್ದಾರೆ.


    ಈ ವೇಳೆ ಮಾತನಾಡಿದ ಶಾಸಕ ಕೃಷ್ಣ ಭೈರೇಗೌಡ ಕೋವಿಡ್ ಹಿನ್ನೆಲೆ ಆಕ್ಸಿಜನ್ ಸಮಸ್ಯೆ ಹಿನ್ನೆಲೆ ಚಾಮಾರಾಜನಗರದಲ್ಲಿ ಅನೇಕರು ಮೃತಪಟ್ಟಿದ್ದಾರೆ. ಸರ್ಕಾರದ ವೈಫಲ್ಯವನ್ನು ಮರೆಮಾಚಲು ಈ ಬೆಡ್​ ದಂಧೆಯನ್ನು ಮುಂಚೂಣಿಗೆ ತಂದಿದ್ದಾರೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಕಡೆಯವರು ವಾರ್ ರೂಂ ಹೈಜಾಕ್ ಮಾಡಿದ್ದಾರೆ. ಅಲ್ಲಿನ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.




    ವಾರ್​ ರೂಂಗೆ ಭೇಟಿ ನೀಡಿದ ಅವರು ಐಎಎಸ್ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಅವರ ಬಂಧನವಾಗಬೇಕಿದೆ. ವಾರ್ ರೂಂನಲ್ಲಿದ್ದ 16 ಜನರನ್ನು ಮಾತ್ರ ಹೈಲೈಟ್ ಮಾಡಲಾಗಿದೆ. ಸಂಸದರ ಆರೋಪಿಸಿರುವ 16 ಜನರ ವಿರುದ್ಧ ಯಾವುದೇ ಸಾಕ್ಷಗಳಿಲ್ಲ. ಹಣ ಪಡೆದಿದ್ದರ ದಾಖಲಾತಿ ಕೂಡ ಇಲ್ಲ. ಪ್ರಕರಣದಲ್ಲಿ ಡಾ. ರಿಹಾನ್ ವಿಚಾರಣೆ ನಡೀತಿದೆ. ತಪ್ಪಿದ್ದರೇ ಅವರಿಗೆ ಶಿಕ್ಷೆ ನೀಡಲಿ. ಇಲ್ಲದಿದ್ದರೇ ಶೀಘ್ರ ವಿಚಾರಣೆ ನಡೆಸಿ ಕಳುಹಿಸಬೇಕು. ಕೋಮು ವಿವಾದ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ ಎಂದು ಕಾಂಗ್ರೆಸ್​ ನಾಯಕರು ತಿಳಿಸಿದರು.


    ಇದನ್ನು ಓದಿ: ಯಾವುದೇ ಸಮುದಾಯಕ್ಕೆ ನೋವು ಮಾಡುವುದು ಉದ್ದೇಶವಾಗಿರಲಿಲ್ಲ; ಕೋವಿಡ್​ ವಾರ್​ ರೂಂ ಸಿಬ್ಬಂದಿ ಕ್ಷಮೆಯಾಚಿಸಿದ ತೇಜಸ್ವಿ ಸೂರ್ಯ


    ಬೆಡ್​ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯ  16 ಜನರ ಮುಸ್ಲಿಂ ಯುವಕರ ಹೆಸರನ್ನು ಪ್ರಕಟಿಸಿದ್ದರು. ಈ ಮೂಲಕ ಪ್ರಕರಣವನ್ನು ಕೋಮುವಾದಿ ಕರಿಸಿದ್ದರು. ಸಂಸದರ ಈ ನಡೆಗೆ ವ್ಯಾಪಕರ ಟೀಕೆ ಕೂಡ ವ್ಯಕ್ತವಾಗಿತ್ತು. ಕಾಂಗ್ರೆಸ್​ ನಾಯಕರು ಸೂರ್ಯ ಇಂತಹ ಸಮಯದಲ್ಲೂ ಕೋಮುಬಣ್ಣ ಹುಡುಕುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದಿದ್ದರು. ಈ ಘಟನೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆ ಬೆಂಗಳೂರು ದಕ್ಷಿಣ ವಲಯದ ಕೋವಿಡ್​ ವಾರ್​ ರೂಂಗೆ ಇಂದು ಭೇಟಿ ನೀಡಿರುವ ಸಂಸದ ತೇಜಸ್ವಿ ಸೂರ್ಯ  ಅಲ್ಲಿನ ಸಿಬ್ಬಂದಿ  ಕ್ಷಮೆಯಾಚಿಸಿದ್ದಾರೆ.


    ಬೆಡ್​​ ಬ್ಲಾಕಿಂಗ್​ ಪ್ರಕರಣ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ 17 ಮಂದಿ ಮುಸ್ಲಿಂ ಸಿಬ್ಬಂದಿಯ ಹೆಸರನ್ನು ಮಾತ್ರ ಉಲ್ಲೇಖಿಸಿರುವುದರ ವಿರುದ್ಧ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ಖಾನ್​​ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು  ಮಾತನಾಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್​​, 205 ಸಿಬ್ಬಂದಿಯಲ್ಲಿ ಕೇವಲ ಮುಸ್ಲಿಮರ ಹೆಸರನ್ನು ಮಾತ್ರ ಉಲ್ಲೇಖಿಸಿರೋದು ಎಷ್ಟು ಸರಿ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾಡಿದರು. ಭಾವೋದ್ವೇಗಕ್ಕೆ ಒಳಗಾದ ಜಮೀರ್​ ಅವರು ರಂಜಾನ್​ ಸಮಯದಲ್ಲಿ ಹೀಗೆಲ್ಲಾ ಮಾಡುತ್ತಿರಲ್ಲ, ನಿಮಗೆ ಒಳ್ಳೆಯದಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು

    Published by:Seema R
    First published: