ಎದುರಾಳಿ ಯಾರೇ ಆಗಲಿ ಯೋಚನೆ ಮಾಡಲ್ಲ, ಸ್ಪರ್ಧೆಗೆ ಸಿದ್ಧ; ರಮೇಶ್​ ಜಾರಕಿಹೊಳಿ ವಿರುದ್ಧ ತೊಡೆತಟ್ಟಿದ​ ಲಖನ್​ ಜಾರಕಿಹೊಳಿ

ಚುನಾವಣೆ ಎಂಬುದು ಐಎಎಸ್​​ ಪರೀಕ್ಷೆ ಇದ್ದ ಹಾಗೆ. ಇಷ್ಟು ದಿನ ಹಿಂದೆ ಇದ್ದು ಕೆಲಸ ಮಾಡುತ್ತಿದ್ದೆ. ಈಗ ಮುನ್ನಲೆಗೆ ಬಂದಿದ್ದೇನೆ ಎಂದು ಲಖನ್​ ಹೇಳಿದರು.

Latha CG | news18india
Updated:September 22, 2019, 3:12 PM IST
ಎದುರಾಳಿ ಯಾರೇ ಆಗಲಿ ಯೋಚನೆ ಮಾಡಲ್ಲ, ಸ್ಪರ್ಧೆಗೆ ಸಿದ್ಧ; ರಮೇಶ್​ ಜಾರಕಿಹೊಳಿ ವಿರುದ್ಧ ತೊಡೆತಟ್ಟಿದ​ ಲಖನ್​ ಜಾರಕಿಹೊಳಿ
ಲಖನ್​ ಜಾರಕಿಹೊಳಿ-ರಮೇಶ್​ ಜಾರಕಿಹೊಳಿ
  • Share this:
 ಗೋಕಾಕ್​(ಸೆ.22): ರಮೇಶ್ ಜಾರಕಿಹೊಳಿ​ ಬಿಜೆಪಿ ಸೇರುವ ನಿರ್ಧಾರ ಮಾಡಿದ್ದಾರೆ. ಎದುರಾಳಿ ಯಾರೇ ಆಗಲಿ ಈ ಬಗ್ಗೆ ಯೋಚನೆ ಮಾಡಲ್ಲ. ಕಾಂಗ್ರೆಸ್ ಅಭ್ಯರ್ಥಿ ನಾನೇ ಸ್ಪರ್ಧೆಗೆ ಸಿದ್ಧ ಎಂದು ಕೈ ನಾಯಕ ಲಖನ್​ ಜಾರಕಿಹೊಳಿ ರಮೇಶ್​ ಜಾರಕಿಹೊಳಿ ವಿರುದ್ಧ ತಟ್ಟಿದ್ದಾರೆ.

ಉಪಚುನಾವಣೆ ವಿಚಾರವಾಗಿ ಗೋಕಾಕ್​ನಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಈಗಾಗಲೇ ಪ್ರಚಾರ ಆರಂಭಿಸಿದ್ದೇನೆ. ಎದುರಾಳಿ ಯಾರೇ ಆಗಲಿ ಈ ಬಗ್ಗೆ ಯೋಚನೆ ಮಾಡಲ್ಲ. ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ ಎಂದರು.

ವರ್ಷಗಳಿಂದ ಕಾಂಗ್ರೆಸ್ ಪರ ಕೆಲಸ ಮಾಡಿದ್ದೇನೆ. ಗೋಕಾಕ್ ಕ್ಷೇತ್ರ ಮೊದಲಿನಿಂದ ‘ಕೈ’ ಭದ್ರಕೋಟೆ. ಚುನಾವಣೆ ಘೋಷಿಸುವವರೆಗೂ ನಾನು ಹೊರ ಬಂದಿರಲಿಲ್ಲ. ಚುನಾವಣೆ ಎಂಬುದು ಐಎಎಸ್​​ ಪರೀಕ್ಷೆ ಇದ್ದ ಹಾಗೆ. ಇಷ್ಟು ದಿನ ಹಿಂದೆ ಇದ್ದು ಕೆಲಸ ಮಾಡುತ್ತಿದ್ದೆ. ಈಗ ಮುನ್ನಲೆಗೆ ಬಂದಿದ್ದೇನೆ ಎಂದು ಲಖನ್​ ಹೇಳಿದರು.

ನಾನು ಮಾರಿಕೊಂಡವನಲ್ಲ, ಜೆಡಿಎಸ್​ಗೆ ವಿಷ ಇಟ್ಟಿದ್ದು ಯಾರೆಂದು ಜನತೆಗೆ ಗೊತ್ತಿದೆ; ಮಾಜಿ ಶಾಸಕ ಹೆಚ್. ವಿಶ್ವನಾಥ್

ಇಷ್ಟು ದಿನ ರಮೇಶ್​​​ ಪರ ಕೆಲಸ ಮಾಡಿದ್ದು ನಿಜ. ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೋ ಗೊತ್ತಿಲ್ಲ. ರಮೇಶ್​ಗೆ ಕಾಂಗ್ರೆಸ್ ಬಿಡಬೇಡ ಅಂತ ಹೇಳಿದೆ. ಆದರೆ ಅಳಿಯನ ಮಾತು ಕೇಳಿ ಪಕ್ಷ ಬಿಟ್ಟಿದ್ದಾರೆ ಎಂದರು.

ರಮೇಶ್​ ಜಾರಕಿಹೊಳಿ ಅಳಿಯಂದಿರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ.  ಯಮನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದು ನಿಜ. ರಮೇಶ್​​ ಅಳಿಯಂದಿರು ತಲೆ ಕೆಡಿಸಿದ್ದಾರೆ. ಅದಕ್ಕೆ ಅವರು ಬಿಜೆಪಿಗೆ ಹೋಗಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ರಮೇಶ್​ ಜಾರಕಿಹೊಳಿಗೆ ಸಚಿವ ಸ್ಥಾನ ಹಾಗೂ ಬೆಳಗಾವಿ ‌ಉಸ್ತವಾರಿ ಸ್ಥಾನ ಕೊಟ್ಟಿತ್ತು. ಅಳಿಯಂದಿರ ಮಾತು ಕೇಳಿ ಕೆಟ್ಟಿದ್ದಾರೆ. ಅಂಬಿರಾವ್, ಅಪ್ಪಿ, ಶಂಕರ್ ಗೆ ಜ‌ನ ಪಾಠ ಕಲಿಸಲಿದ್ದಾರೆ. ಬ್ಲ್ಯಾಕ್ ಮೇಲ್​​ ರಾಜಕೀಯ ಜಾಸ್ತಿ ದಿನ ನಡೆಯಲ್ಲ ಎಂದು ಹೇಳಿದರು.
First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading