KGF Babu: ಚಿಕ್ಕಪೇಟೆ ಕ್ಷೇತ್ರದ ಜನತೆಗೆ ಬಂಪರ್; ಪ್ರತಿ ಕುಟುಂಬಕ್ಕೆ 5 ಸಾವಿರ; 350 ಕೋಟಿಯ ಕೆಜಿಎಫ್ ಬಾಬು ಲೆಕ್ಕಾಚಾರ ಏನು?

ವಿದ್ಯಾರ್ಥಿ ವೇತನದ ಜೊತೆಗೆ ತಮ್ಮ ಕ್ಷೇತ್ರದ ಸ್ಲಂ ನಿವಾಸಿಗಳಿಗೆ ಬಹುಮಹಡಿ ಕಟ್ಟಡ ನಿರ್ಮಿಸಿ ಒಂದೊಂದು ಫ್ಲ್ಯಾಟ್ ನೀಡುವ ಯೋಜನೆಯ ಮಾಹಿತಿಯನ್ನು ಸಹ ನ್ಯೂಸ್ 18 ಜೊತೆ ಹಂಚಿಕೊಂಡರು. ಇದಕ್ಕಾಗಿ 180 ಕೋಟಿ ವೆಚ್ಚದಲ್ಲಿ ಆಪಾರ್ಟ್​ಮೆಂಟ್ ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.

ಕೆಜಿಎಫ್ ಬಾಬು

ಕೆಜಿಎಫ್ ಬಾಬು

  • Share this:
ಕಾಂಗ್ರೆಸ್ ನಾಯಕ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಯೂಸೂಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು (Congress Leader Yousuf Sharief alias KGF Babu) ಸ್ಥಳೀಯ ನಾಯಕರ ಜೊತೆ ನಿರಂತರವಾಗಿ ಸಭೆ ನಡೆಸುತ್ತಿದ್ದಾರೆ. ಚಿಕ್ಕಪೇಟೆಯ ಟಿಕೆಟ್ ಖಚಿತವಾಗದಿದ್ರೂ, ಈಗಿನಿಂದಲೇ ಚುನಾವಣಾ (Assembly Election 2023) ತಯಾರಿ ನಡೆಸುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆಗೂ ಕೆಜಿಎಫ್ ಬಾಬು ತಮ್ಮ ಕ್ಷೇತ್ರಕ್ಕೆ ಪ್ರಣಾಳಿಕೆ (Manifesto) ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ್ದಾರೆ. ಕಾಂಗ್ರೆಸ್ ತಮಗೆ ಚಿಕ್ಕಪೇಟೆಯ (Chickpet Assembly Constituency) ಟಿಕೆಟ್ ನೀಡುತ್ತೆ ಎಂಬ ಭರವಸೆಯಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದಾರೆ. ತಮ್ಮ ಕ್ಷೇತ್ರದ ಮಕ್ಕಳ ಶಿಕ್ಷಣಕ್ಕಾಗಿ (Education) ಪ್ರತಿ ಮನೆಗೆ ವಿದ್ಯಾರ್ಥಿ ವೇತನದ (Student scholarship) ರೂಪದಲ್ಲಿ 5000 ರೂಪಾಯಿ ನೀಡುವ ಮಹತ್ವದ ನಿರ್ಧಾರವನ್ನು ಕೆಜಿಎಫ್ ಬಾಬು ತೆಗೆದುಕೊಂಡಿದ್ದಾರೆ. ಇದಕ್ಕಾಗಿ ಬರೋಬ್ಬರಿ 350 ಕೋಟಿ ರೂಪಾಯಿ ಖರ್ಚು ಮಾಡಲು ಮುಂದಾಗಿದ್ದಾರೆ.

ಹಣ ವಿತರಣೆಯ ಕಾರ್ಯಕ್ರಮವನ್ನು ಕಲ್ಯಾಣ ಯೋಜನೆ ಎಂದು ಕರೆದಿರುವ ಕೆಜಿಎಫ್ ಬಾಬು ಈ ಸ್ಕೀಮ್ ಮುಂದಿನ 5 ವರ್ಷಗಳವರೆಗೆ (2022-2027) ಮುಂದುವರಿಯಲಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈ ಸಂಬಂಧ ಚೆಕ್ ವಿತರಣೆ ಹೇಗಿರಬೇಕು ಎಂಬುದರ ಕುರಿತು ಆಪ್ತರು ಮತ್ತು ಸ್ಥಳೀಯ ಮುಖಂಡರ ಜೊತೆ ಸಾಲು ಸಾಲು ಸಭೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದು ಚುನಾವಣೆಗಾಗಿ ಅಲ್ಲ

ನಾನು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹಣವನ್ನು ವಿತರಣೆ ಮಾಡುತ್ತಿಲ್ಲ. ನಾನು ಬೆಳೆದು ಬಂದ ಸಮಾಜಕ್ಕೆ ಮರಳಿ ಕೊಡಲು ಬಯಸುತ್ತಿದ್ದೇನೆ. ಜನರಿಗೆ ಸಹಾಯ ಮಾಡೋದು ನನ್ನ ಉದ್ದೇಶವಾಗಿದೆ. ನಾನು ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ಹಾಗಾಗಿ ನನ್ನ ಸಮಾಜದ ಹಿತಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಕೆಜಿಎಫ್ ಬಾಬು ಹೇಳುತ್ತಾರೆ.

Congress Leader KGF Babu plans to donate Rs 350 crore to a chickpet constituency mrq
ಕೆಜಿಎಫ್ ಬಾಬು


1,743 ಕೋಟಿ ರೂ ಆಸ್ತಿ ಘೋಷಿಸಿಕೊಂಡಿರುವ ಕೆಜಿಎಫ್ ಬಾಬು

2021ರ ಎಂಎಲ್​ಸಿ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಿಂದ ಕೆಜಿಎಫ್ ಬಾಬು ಸ್ಪರ್ಧಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ 1,743 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಈ ಹಿಂದೆ ಸಚಿವ ಎಂಟಿಬಿ ನಾಗರಾಜ್ ಅವರು 1,200 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರು. ಆದ್ರೆ ಎಂಎಲ್​ಸಿ ಚುನಾವಣೆಯಲ್ಲಿ 397 ಮತಗಳ ಅಂತರದಿಂದ ಕೆಜಿಎಫ್ ಬಾಬು ಸೋಲು ಅನುಭವಿಸಿದ್ದರು.

ಇದನ್ನೂ ಓದಿ:  KPTCL ಕಿರಿಯ ಸಹಾಯಕ ಪರೀಕ್ಷೆ ಗೋಲ್ಮಾಲ್: 9 ಜನ ಅರೆಸ್ಟ್, ತೋಟದ ಮನೆಯಲ್ಲಿ ನಡೆದಿತ್ತು ಪ್ಲ್ಯಾನ್

ಕ್ಷೇತ್ರದ ಜನತೆಗೆ 5000 ರೂಪಾಯಿ ನೀಡಲು ಮುಂದಾಗಿರುವ ಕೆಜಿಎಫ್ ಬಾಬು, ಇದನ್ನ ಪಕ್ಷದ ಕಾರ್ಯಕ್ರಮವಾಗಿ ನಡೆಸಲು ಅನುಮತಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ (Congress High command) ಅನುಮತಿ ಕೇಳಿದ್ದಾರೆ. ಕಾಂಗ್ರೆಸ್ ಬ್ಯಾನರ್ ಅಡಿಯಲ್ಲಿ ಹಣ ವಿತರಣೆ (Cheque Distribution) ಆಗಬೇಕು ಎಂಬುವುದು ಬಾಬು ಅವರ ಇಚ್ಛೆಯಾಗಿದೆ. ಆದರೆ ಇದುವರೆಗೂ ಕಾಂಗ್ರೆಸ್ ಹೈಕಮಾಡ್​ನಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ ಎಂಬುದರ ಮಾಹಿತಿಯೂ ಲಭ್ಯವಾಗಿದೆ.

Congress Leader KGF Babu plans to donate Rs 350 crore to a chickpet constituency mrq
ಪೋಸ್ಟರ್


ಆಗಸ್ಟ್ 31 ರಿಂದ ಚೆಕ್ ವಿತರಣೆ ಸಾಧ್ಯತೆ

ಇದೇ ಆಗಸ್ಟ್ 31ರಿಂದ ಚೆಕ್ ವಿತರಣೆ ಮಾಡಲು ಕೆಜಿಎಫ್ ಬಾಬು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ತಮ್ಮ ಪ್ರಣಾಳಿಕೆಯಂತೆ ಹಂತ ಹಂತವಾಗಿ ಅಂದ್ರೆ 50 ಸಾವಿರ ಕುಟುಂಬಗಳಿಗೆ ತಲಾ 5 ಸಾವಿರ ರೂಪಾಯಿ ವಿತರಿಸಲಿದ್ದಾರೆ.

ಪ್ರಾಥಮಿಕ/ಪ್ರೌಢ ಶಾಲೆಗಳಲ್ಲಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನದ ರೂಪದಲ್ಲಿ 5000 ರೂ ನೀಡಲಾಗುವುದು. ಇದರಿಂದ ಸುಮಾರು 5 ಸಾವಿರ ವಿದ್ಯಾರ್ಥಿಗಳು ನೇರವಾಗಿ ಲಾಭ ಪಡೆಯಲಿದ್ದಾರೆ. 50 ಸಾವಿರ ಕುಟುಂಬಗಳಿಗೆ 5 ವರ್ಷಕ್ಕೆ 125 ಕೋಟಿ ರೂ ಖರ್ಚು ಆಗಲಿದೆ. ಪದವಿ ಪೂರ್ವ ವಿದ್ಯಾರ್ಥಿಗಳು ಸಹ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೊದಲ ಹಂತವಾಗಿ 7.5 ಕೋಟಿ ಮಂಜೂರು ಮಾಡಿದ್ದೇನೆ ಎಂದು ಕೆಜಿಎಫ್ ಬಾಬು ತಿಳಿಸಿದರು.

Congress Leader KGF Babu plans to donate Rs 350 crore to a chickpet constituency mrq
ಕೆಜಿಎಫ್ ಬಾಬು


180 ಕೋಟಿ ವೆಚ್ಚದಲ್ಲಿ ಅಪಾರ್ಟ್​ಮೆಂಟ್ ನಿರ್ಮಾಣದ ಗುರಿ

ಇನ್ನೂ ವಿದ್ಯಾರ್ಥಿ ವೇತನದ ಜೊತೆಗೆ ತಮ್ಮ ಕ್ಷೇತ್ರದ ಸ್ಲಂ ನಿವಾಸಿಗಳಿಗೆ ಬಹುಮಹಡಿ ಕಟ್ಟಡ ನಿರ್ಮಿಸಿ ಒಂದೊಂದು ಫ್ಲ್ಯಾಟ್ ನೀಡುವ ಯೋಜನೆಯ ಮಾಹಿತಿಯನ್ನು ಸಹ ನ್ಯೂಸ್ 18 ಜೊತೆ ಹಂಚಿಕೊಂಡರು. ಇದಕ್ಕಾಗಿ 180 ಕೋಟಿ ವೆಚ್ಚದಲ್ಲಿ ಆಪಾರ್ಟ್​ಮೆಂಟ್ ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.

ಸ್ಲಂ ನಿವಾಸಿಗಳು ಸಾಮೂಹಿಕವಾಗಿ ತಾವಿರುವ ಭೂಮಿ ನೀಡಲು ಸಿದ್ಧರಾದ್ರೆ, ಬಹುಮಹಡಿ ಕಟ್ಟಡ ನಿರ್ಮಿಸುತ್ತೇನೆ. ನನ್ನ ಚಾರಿಟೇಬಲ್ ಟ್ರಸ್ಟ್ ಮೂಲಕ ಭೂಮಿ ಸ್ವೀಕರಿಸಿ ಕಟ್ಟಡ ನಿರ್ಮಿಸೋದಾಗಿ ಕೆಜಿಎಫ್ ಬಾಬು ಹೇಳಿದ್ದಾರೆ. ಇಲ್ಲಿ ನಿರ್ಮಾಣವಾಗುವ ಕಟ್ಟಡದಲ್ಲಿ ಪ್ರತಿ ಕುಟುಂಬಕ್ಕೆ ಒಂದೊಂದು ಫ್ಲ್ಯಾಟ್ ನೀಡಲಾಗುತ್ತದೆ. ಕೋಲಾರದಲ್ಲಿಯೂ ಇದೇ ರೀತಿ ಬಹುಮಹಡಿ ಕಟ್ಟಡ ನಿರ್ಮಿಸುವ ಕನಸನ್ನು ಕೆಜಿಎಫ್ ಬಾಬು ಹೊಂದಿದ್ದಾರೆ.

Congress Leader KGF Babu plans to donate Rs 350 crore to a chickpet constituency mrq
ಸಾಂದರ್ಭಿಕ ಚಿತ್ರ


ಚಿಕ್ಕಪೇಟೆಗಾಗಿ 350 ಕೋಟಿ ರೂಪಾಯಿ

ಚಿಕ್ಕಪೇಟೆಯ ಅಭಿವೃದ್ಧಿಗಾಗಿ 350 ಕೋಟಿ ರೂ. ವೆಚ್ಚ ಮಾಡಲು ಸಿದ್ಧನಿದ್ದೇನೆ. ನನ್ನ ಮಕ್ಕಳ ಭವಿಷ್ಯವನ್ನು ಸಿದ್ಧಪಡಿಸಿದ್ದೇನೆ. ಸತ್ತ ಮೇಲೆ ಇಲ್ಲಿಂದ ಏನೂ ತೆಗೆದುಕೊಂಡು ಹೋಗಲು ಆಗಲ್ಲ. ಹಾಗಾಗಿ ನನ್ನ ಸಮಾಜಕ್ಕೆ ನನ್ನಿಂದಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳುತ್ತಾರೆ ಕೆಜಿಎಫ್ ಬಾಬು.

ಯಾರು ಈ ಕೆಜಿಎಫ್ ಬಾಬು?

ಕೆಜಿಎಫ್ ಬಾಬು ಅವರ ನಿಜವಾದ ಹೆಸರು ಉಮರ್ ಷರೀಫ್. ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದವರು. ಆರಂಭದಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿದ್ದರಿಂದ ಜನರು ಇವರನ್ನು ಬಾಬು ಎಂದು ಕರೆಯಲಾರಂಭಿಸಿದ್ದರು. ನಂತರ ಕೆಜಿಎಫ್ ಬಾಬು ಅಂತಾನೇ ಚಿರಪರಿಚಿತರಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿಯೂ ಕೆಜಿಎಫ್ ಬಾಬು ಅವರಿದ್ದಾರೆ.

Congress Leader KGF Babu plans to donate Rs 350 crore to a chickpet constituency mrq
ಸಾಂದರ್ಭಿಕ ಚಿತ್ರ


14 ಮಕ್ಕಳಲ್ಲಿ ಯೂಸೂಫ್ ಹಿರಿಯರು. ಇವರ ತಂದೆ ನಡೆಸುತ್ತಿದ್ದ ಬೇಕರಿ ವ್ಯವಹಾರ ನಷ್ಟಕ್ಕೆ ಒಳಗಾಗಿದ್ದ ಕಾರಣ ಅವರು ಆಟೋ ಓಡಿಸಲು ಆರಂಭಿಸಿದ್ದರು. ಬಾಲ್ಯದಲ್ಲಿ ಕೆಜಿಎಫ್ ಬಾಬು ಕುಟುಂಬ  ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿತ್ತು. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ನಿರ್ಧರಿಸಿದ ಯುಸೂಫ್, ಆರಂಭದಲ್ಲಿ ಭಾರತ್ ಗೋಲ್ಡ್ ಮೈನ್ಸ್‌ನೊಂದಿಗೆ ಸ್ಕ್ರ್ಯಾಪ್ ಡೀಲರ್ ಅಸೋಸಿಯೇಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಇದನ್ನೂ ಓದಿ:  Ganesh Festival: ಅನುಮತಿಗಾಗಿ ಹುಬ್ಬಳ್ಳಿ ಪಾಲಿಕೆಗೆ ಬಂದ ಗಣೇಶ! ಅಧಿಕಾರಿಗಳ ಸುತ್ತ ಪ್ರದಕ್ಷಿಣೆ ಹಾಕಿದ್ರೂ ಸಿಗದ ಪರ್ಮೀಷನ್!

ಕೈ ಹಿಡಿದ ರಿಯಲ್ ಎಸ್ಟೇಟ್ ಉದ್ಯಮ

ನಂತರ ಕೋಲಾರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿರಿಸಿದ್ದ ಕೆಜಿಎಫ್ ಬಾಬು ಇಲ್ಲಿಯೂ ಯಶಸ್ವಿಯಾದರು. ನಂತರ ಬೆಂಗಳೂರು ರಿಯಲ್ ಎಸ್ಟೇಟ್​ ವ್ಯವಹಾರ ಸಹ ಕೆಜಿಎಫ್ ಬಾಬು ಅವರ ಕೈ ಹಿಡಿದಿತ್ತು. 2021 ರಲ್ಲಿ ಯೂಸುಫ್ 100 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 1,643.59 ಕೋಟಿ ಸ್ಥಿರ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

Congress Leader KGF Babu plans to donate Rs 350 crore to a chickpet constituency mrq
ಕೆಜಿಎಫ್ ಬಾಬು


ಇತ್ತೀಚೆಗೆ ಮನಿ ಲಾಂಡ್ರಿಂಗ್ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಇವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು. ಕೆಲ ದಿನಗಳ ಹಿಂದೆ ದೆಹಲಿಯ ಇಡಿ ಅಧಿಕಾರಿಗಳ ಮುಂದೆ ಕೆಜಿಎಫ್ ಬಾಬು ವಿಚಾರಣೆಗೆ ಹಾಜರಾಗಿದ್ದರು.

ಇಡಿ ದಾಳಿಯನ್ನ ಸಮರ್ಥವಾಗಿ ಎದುರಿಸುವೆ

ಇಡಿ ದಾಳಿ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಕೆಜಿಎಫ್ ಬಾಬು, ನನ್ನ ಸ್ವಂತ ದುಡಿಮೆಯಿಂದ ಹಣ ಸಂಪಾದಿಸಿದ್ದು, ಹಣಕಾಸಿನ ವ್ಯವಹಾರದಲ್ಲಿ ನಾನು ಶುದ್ಧನಾಗಿದ್ದೇನೆ. ನಾನು ಕಾಂಗ್ರೆಸ್ ಕಾರ್ಯಕರ್ತ ಎಂಬ ಕಾರಣಕ್ಕೆ ಇಡಿ ನನ್ನ ಮೇಲೆ ದಾಳಿ ನಡೆಸಿದೆ. ಎಂಎಲ್​ಸಿ ಚುನಾವಣೆ ವೇಳೆ ನನ್ನ ಎಲ್ಲಾ ಆಸ್ತಿಯನ್ನು ಘೋಷಿಸಿಕೊಂಡಿದ್ದೇನೆ.

ಬಡತನದಲ್ಲಿ ಬೆಳೆದ ನನಗೆ ಕಷ್ಟ ಅಂದ್ರೆ ಏನು ಅಂತ ಗೊತ್ತು. ಇಂದು ನಾನು ನ್ಯಾಯವಾಗಿ ಕೋಟಿಗಟ್ಟಲೇ ಹಣ ಸಂಪಾದಿಸುತ್ತಿದ್ದೇನೆ. ಒಂದು ವೇಳೆ ಇಡಿ ನನ್ನ ಮೇಲೆ ಮತ್ತೆ ದಾಳಿ ನಡೆಸಿದ್ರೆ ಹೆದರಲ್ಲ. ಸಮರ್ಥವಾಗಿ ಎಲ್ಲವನ್ನು ಎದುರಿಸುತ್ತೇನೆ ಎಂದು ತಿಳಿಸಿದರು.

Congress Leader KGF Babu plans to donate Rs 350 crore to a chickpet constituency mrq
ಸಾಂದರ್ಭಿಕ ಚಿತ್ರ


ಅಮಿತಾಭ್​ ಬಚ್ಚನ್ ಕಾರ್ ಖರೀದಿ

ಕೆಜಿಎಫ್ ಬಾಬು ಅವರು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಂದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಖರೀದಿಸಿದ್ದರು. ಆದರೆ ದಾಖಲೆಗಳ ಕೊರತೆಯಿಂದಾಗಿ ಕಾರ್​ನ್ನು ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಯೂಸೂಫ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಅವರ ಹೆಸರು ರುಖ್ಸಾನಾ ತಾಜ್ ಮತ್ತು ಶಾಜಿಯಾ ತರನ್ನುಮ್. ಇವರಿಗೆ ಒಟ್ಟು ಐದು ಮಕ್ಕಳಿದ್ದಾರೆ.
Published by:Mahmadrafik K
First published: