ಬಿಜೆಪಿಗೆ ಬರಲ್ಲ ಅಂದಮೇಲೆ ಎಂಟಿಬಿ ಸಾಲ ವಾಪಸ್​ ಕೇಳ್ತಿದ್ದಾರೆ; ಕೆ.ವೈ.ನಂಜೇಗೌಡ ವಾಗ್ದಾಳಿ

ಪಡೆದ ಸಾಲದಲ್ಲಿ 1 ಕೋಟಿ ಹಣವನ್ನು ಒಂದು ವಾರದಲ್ಲೇ ವಾಪಸ್​​ ಮಾಡಿದ್ದೇನೆ. ಉಳಿದ 2 ಕೋಟಿ ಹಣವನ್ನು ಇಂದು ಅವರ ಖಾತೆಗೆ ವರ್ಗಾಯಿಸುತ್ತೇನೆ, ಎಂದು ನಂಜೇಗೌಡ ಹೇಳಿದ್ದಾರೆ.

Latha CG | news18-kannada
Updated:November 21, 2019, 7:48 PM IST
ಬಿಜೆಪಿಗೆ ಬರಲ್ಲ ಅಂದಮೇಲೆ ಎಂಟಿಬಿ ಸಾಲ ವಾಪಸ್​ ಕೇಳ್ತಿದ್ದಾರೆ; ಕೆ.ವೈ.ನಂಜೇಗೌಡ ವಾಗ್ದಾಳಿ
ಕೆ.ವೈ ನಂಜೇಗೌಡ
  • Share this:
ಹೊಸಕೋಟೆ,(ನ.21): ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಎಚ್. ಮುನಿಯಪ್ಪ, ಕೆ.ವೈ. ನಂಜೇಗೌಡರಿಗೆ ಹೊಸಕೋಟೆಯ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ಹಣ ಕೊಟ್ಟಿರುವುದಾಗಿ ಹೇಳಿದ್ದರು. ಈ ವಿಚಾರವಾಗಿ ಮಾಲೂರು ತಾಲೂಕು ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅನರ್ಹ ಶಾಸಕ ಎಂಟಿಬಿ ನಾಗರಾಜ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದಲ್ಲಿ ಮಾತನಾಡಿದ ಅವರು,  "ಸಿದ್ದರಾಮಯ್ಯ ಎಂಟಿಬಿ ನಾಗರಾಜ್ ಬಳಿ ಹಣ ತೆಗೆದುಕೊಂಡಿಲ್ಲ, ನಮಗೆ ಕೊಡಿಸಿದ್ದು ನಿಜ. ಸಿದ್ದರಾಮಯ್ಯ ಹೇಳಿದ್ದಕ್ಕೆ ಎಂಟಿಬಿ ನಾಗರಾಜ್​ ನನಗೆ ಹಣ ಕೊಟ್ಟಿದ್ದು ನಿಜ. ಚುನಾವಣಾ ಖರ್ಚಿಗಾಗಿ ನನಗೆ 2 ಕೋಟಿ ಕೊಡಿ ಎಂದು ಸಿದ್ದರಾಮಯ್ಯ ಎಂಟಿಬಿಗೆ ಹೇಳಿದ್ದರು. ನಾನು ಇನ್ನೊಂದು ಕೋಟಿ ಹೆಚ್ಚಾಗಿ ಅಂದರೆ 3 ಕೋಟಿ ರೂಪಾಯಿಯನ್ನು ಎಂಟಿಬಿ ನಾಗರಾಜ್​ ಅವರಿಂದ ಸಾಲವಾಗಿ ಪಡೆದುಕೊಂಡಿದ್ದೆ" ಎಂದರು.

ಬಿಜೆಪಿಯಿಂದ ಶರತ್ ಬಚ್ಚೇಗೌಡ, ಕವಿರಾಜ್ ಅರಸ್ ಉಚ್ಛಾಟನೆ

ಮುಂದುವರೆದ ಅವರು, "ಪಡೆದ ಸಾಲದಲ್ಲಿ 1 ಕೋಟಿ ಹಣವನ್ನು ಒಂದು ವಾರದಲ್ಲೇ ವಾಪಸ್​​ ಮಾಡಿದ್ದೇನೆ. ಉಳಿದ 2 ಕೋಟಿ ಹಣವನ್ನು ಇಂದು ಅವರ ಖಾತೆಗೆ ವರ್ಗಾಯಿಸುತ್ತೇನೆ," ಎಂದು ನಂಜೇಗೌಡ ಹೇಳಿದ್ದಾರೆ.

"ಎಂಟಿಬಿ ನಾಗರಾಜ್​ ಅವರು ನನಗೆ ಚುನಾವಣೆ ಸಮಯದಲ್ಲಿ ಅವರ ಕೈಯಿಂದ ಹಣ ಕೊಡಲಿಲ್ಲ. ಚುನಾವಣೆ ಮುಗಿದ 7 ದಿನಗಳ ನಂತರ ನನಗೆ ಹಣ ಕೊಟ್ಟಿದ್ದಾರೆ. ಪಕ್ಷದ ದೇಣಿಗೆ ದೇಣಿಗೆ ಎಂದು ಭಾವಿಸಿ ನಾನು ಎಂಟಿಬಿಗೆ ಹಣ ವಾಪಸ್​ ಕೊಡಲಿಲ್ಲ. ಬಿಜೆಪಿಗೆ ನನ್ನನ್ನು ಕರೆತರೋಕೆ ಎಂಟಿಬಿ ಪ್ರಯತ್ನಪಟ್ಟರು. ನಾನು ಬರುವುದಿಲ್ಲ ಎಂದ ಮೇಲೆ ಹಣ ವಾಪಸ್​ ಕೇಳುತ್ತಿದ್ದಾರೆ," ಎಂದು ತೀವ್ರ ಕಿಡಿಕಾರಿದರು.

ಬಾಲಕಿಗೆ ಹಾವು ಕಚ್ಚಿದ್ದರೂ ತರಗತಿ ಮುಂದುವರೆಸಿದ ನಿರ್ದಯಿ ಶಿಕ್ಷಕ

First published: November 21, 2019, 7:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading