ಕಾಂಗ್ರೆಸ್ ಮುಗಿಸಲೆಂದೇ ಸಿದ್ದರಾಮಯ್ಯ ಪಕ್ಷಕ್ಕೆ ಬಂದಿದ್ದಾರೆ; ಜನಾರ್ದನ ಪೂಜಾರಿ ವಾಗ್ದಾಳಿ!

ಆಪರೇಷನ್​ ಕಮಲದ ವಿಚಾರ ಪದೇ ಪದೆ ಸುಳಿದಾಡುತ್ತಿದ್ದರೂ, ಮೈತ್ರಿ ಸರ್ಕಾರಕ್ಕೆ ಯಾವುದೇ ಕುತ್ತು ಬಂದಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಭಾರೀ ಕಸರತ್ತು ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಅವರಿಂದ ಸರ್ಕಾರ ಉಳಿದುಕೊಂಡಿಲ್ಲ ಎಂದು ಜನಾರ್ದನ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

Rajesh Duggumane | news18
Updated:January 24, 2019, 3:08 PM IST
ಕಾಂಗ್ರೆಸ್ ಮುಗಿಸಲೆಂದೇ ಸಿದ್ದರಾಮಯ್ಯ ಪಕ್ಷಕ್ಕೆ ಬಂದಿದ್ದಾರೆ; ಜನಾರ್ದನ ಪೂಜಾರಿ ವಾಗ್ದಾಳಿ!
ಜನಾರ್ದನ ಪೂಜಾರಿ
Rajesh Duggumane | news18
Updated: January 24, 2019, 3:08 PM IST
ಮಂಗಳೂರು (ಜ.24): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್​​​ ನಾಯಕ ಜನಾರ್ದನ ಪೂಜಾರಿ ಮತ್ತೆ ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್​​ ಮುಗಿಸುವ ಉದ್ದೇಶದಿಂದಲೇ ಅವರು ಪಕ್ಷಕ್ಕೆ ಬಂದಿದ್ದಾರೆ ಎಂದು ಜನಾರ್ದನ ಪೂಜಾರಿ ಕಿಡಿಕಾರಿದ್ದಾರೆ.

ಆಪರೇಷನ್​ ಕಮಲದ ವಿಚಾರ ಪದೇ ಪದೆ ಸುಳಿದಾಡುತ್ತಿದ್ದರೂ, ಮೈತ್ರಿ ಸರ್ಕಾರಕ್ಕೆ ಯಾವುದೇ ಕುತ್ತು ಬಂದಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಭಾರೀ ಕಸರತ್ತು ನಡೆಸಿದ್ದರು. ಆದರೆ, ಸಿದ್ದರಾಮಯ್ಯ ಅವರಿಂದ ಸರ್ಕಾರ ಉಳಿದುಕೊಂಡಿಲ್ಲ ಎಂದು ಜನಾರ್ದನ ಪೂಜಾರಿ ನೇರ ವಾಗ್ದಾಳಿ ನಡೆಸಿದ್ದಾರೆ. “ಸಿದ್ದರಾಮಯ್ಯ ಅವರಿಂದ ಮೈತ್ರಿ ಸರ್ಕಾರ ಉಳಿದುಕೊಂಡಿದೆ ಎಂಬುದು ಸುಳ್ಳು. ಸರ್ಕಾರ ಸುಗಮವಾಗಿ ಸಾಗುತ್ತಿದೆ ಎಂದರೆ ಅದಕ್ಕೆ ಕಾರಣ, ಜೆಡಿಎಸ್​ನ ಹಿರಿಯ ನಾಯಕ ದೇವೇಗೌಡರು. ಅವರ ಪಾತ್ರ ಇಲ್ಲಿ ದೊಡ್ಡದಿದೆ” ಎಂದು ಹೇಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಜನಾರ್ದನ ಪೂಜಾರಿ ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಆನಂದ್​​ ಸಿಂಗ್​​ ನನ್ನ ಮೇಲೆ ಕೈ ಎತ್ತಿದ್ದಕ್ಕೆ, ನಾನು ಕೈ ಎತ್ತಿದೆ: ಹೀಗಿವೆ ಶಾಸಕ ಗಣೇಶ್​​ ಮಾತುಗಳು!

ಇನ್ನು, ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಇಳಿದಿರುವ ಬಗ್ಗೆ ಜನಾರ್ದನ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ. “ಪ್ರಿಯಾಂಕಾ ಆಗಮನ ಕಾಂಗ್ರೆಸ್ ಗೆ ದೊಡ್ಡ ಶಕ್ತಿಯಾಗಿದೆ. ಅವರು ನೆಹರೂ ಕುಟುಂಬದ ಕುಡಿ. ರಾಹುಲ್ ಗಾಂಧಿಗೆ ಶಕ್ತಿ ಇದೆ. ಪ್ರಿಯಾಂಕಾ ಬಂದ ಮೇಲೆ ಈ ಶಕ್ತಿ ಜಾಸ್ತಿಯಾಗಲಿದೆ. ಮೋದಿಯವರಿಗೆ ನಿದ್ದೆ ಬಾರದ ರೀತಿ ಪ್ರಿಯಾಂಕಾ ಕೆಲಸ ಮಾಡಲಿದ್ದಾರೆ” ಎಂದು ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ರಾಬರ್ಟ್ ವಾದ್ರಾ ಮೇಲಿರುವ ಆರೋಪ ಸಾಬೀತಾಗಿಲ್ಲದ ಕಾರಣ ಪ್ರಿಯಾಂಕಾಗೆ ಕಾಂಗ್ರೆಸ್ ಅಧಿಕಾರ ನೀಡುತ್ತದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುವ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, “ಬಿಜೆಪಿಯೂ ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ಮಾಡಿದೆ” ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ವಿಧಾನಸೌಧದ ಸಿಎಂ ಎಚ್​ಡಿಕೆ, ಬಿಎಸ್​ವೈ ಕೊಠಡಿಗಳನ್ನು ಬಾಡಿಗೆ ಕೇಳಿ ಸ್ಪೀಕರ್​ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ
Loading...

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...