ಬಿಜೆಪಿ ಗೆಲುವಿಗೆ ಕಾಂಗ್ರೆಸ್ ನಾಯಕರ ದುರಹಂಕಾರವೇ ಕಾರಣ; ಸ್ವ ಪಕ್ಷದ ವಿರುದ್ಧ ಜನಾರ್ದನ ಪೂಜಾರಿ ಟೀಕೆ

ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್​ ಪಕ್ಷದ ಇಂದಿನ ಸ್ಥಿತಿಗೆ ದುರಹಂಕಾರವೇ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್​ ನಾಯಕರಿಗೆ ತಪ್ಪಿನ ಅರಿವಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ನಾವು ಸಾಯುತ್ತೇವೆ ಎಂದು ಜನಾರ್ದನ ಪೂಜಾರಿ ಬೇಸರ ಹೊರಹಾಕಿದ್ದಾರೆ.

ಜನಾರ್ದನ ಪೂಜಾರಿ

ಜನಾರ್ದನ ಪೂಜಾರಿ

 • Share this:
  ಮಂಗಳೂರು (ಡಿ. 9): ರಾಜ್ಯ ವಿಧಾನಸಭಾ ಉಪಚುನಾವಣೆಯ 15 ಕ್ಷೇತ್ರಗಳಲ್ಲಿ 12 ಕಡೆ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್​ನವರು ತೋರಿದ ದುರಹಂಕಾರಕ್ಕೆ ಸರಿಯಾಗಿ ಅನುಭವಿಸುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. 

  ಯಲ್ಲಾಪುರ, ವಿಜಯನಗರ, ಚಿಕ್ಕಬಳ್ಳಾಪುರ, ಅಥಣಿ, ಯಶವಂತಪುರ, ಹಿರೇಕೆರೂರು, ಕಾಗವಾಡ, ರಾಣೆಬೆನ್ನೂರು, ಕೆ.ಆರ್. ಪುರಂನಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಸ್ವ ಪಕ್ಷದ ವಿರುದ್ಧವೇ ಕಿಡಿಕಾರಿರುವ ಜನಾರ್ದನ ಪೂಜಾರಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್​ಗೆ ತಾನು ಮಾಡಿದ ತಪ್ಪೇನು ಎಂದು ಅರ್ಥವಾಗುತ್ತದೆ ಎಂದಿದ್ದಾರೆ.

  ಯಲ್ಲಾಪುರದಲ್ಲಿ ಗೆಲುವಿನ ನಗು ಬೀರಿದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್

  ಉಪಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್​ ಪಕ್ಷದ ಇಂದಿನ ಸ್ಥಿತಿಗೆ ದುರಹಂಕಾರವೇ ಕಾರಣ. ದುರಹಂಕಾರ ತೋರಿದ್ದರಿಂದಲೇ ಇಂದು ಅನುಭವಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಕಾಂಗ್ರೆಸ್​ ನಾಯಕರಿಗೆ ತಪ್ಪಿನ ಅರಿವಾಗುತ್ತದೆ.  ಕಾಂಗ್ರೆಸ್ ಮುಖಂಡರ ದುರಹಂಕಾರವೇ ಬಿಜೆಪಿ ಗೆಲುವಿಗೆ ಕಾರಣ. ದುರಹಂಕಾರ ಮಾಡಿದರೆ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಜನಾರ್ದನ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.

  Chikkaballapur Bypolls Result 2019: ಬಿಜೆಪಿ ತೆಕ್ಕೆಗೆ ಮತ್ತೊಂದು ಕ್ಷೇತ್ರ; ಚಿಕ್ಕಬಳ್ಳಾಪುರದಲ್ಲಿ ಡಾ. ಕೆ. ಸುಧಾಕರ್ ಗೆಲುವು

  ನಾನು ನಮ್ಮ ಪಕ್ಷದ ನಾಯಕರಿಗೆ ಕೈ ಮುಗಿದು, ಕಣ್ಣೀರು ಸುರಿಸಿ ಹೇಳಿದೆ,. ಆದರೂ ನಮ್ಮವರಿಗೆ ಅರ್ಥ ಆಗಲಿಲ್ಲ. ತಪ್ಪನ್ನು ಸರಿ ಮಾಡಿಕೊಂಡು ಹೋಗಿ, ದುರಹಂಕಾರ ಮಾಡಬೇಡ ಎಂದು ಹೇಳಿದೆ. ಯಾರೂ ನನ್ನ ಮಾತನ್ನು ಕೇಳಲಿಲ್ಲ. ಅದರ ಪ್ರತಿಫಲವನ್ನು ಈಗ ಅನುಭವಿಸುತ್ತಿದ್ದಾರೆ, ಇನ್ನೂ ಕೂಡ ಅನುಭವಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ನಾವು ಸಾಯುತ್ತೇವೆ ಎಂದು ಮಂಗಳೂರಿನಲ್ಲಿ ಕೈ ನಾಯಕ ಜನಾರ್ದನ ಪೂಜಾರಿ ಬೇಸರ ಹೊರಹಾಕಿದ್ದಾರೆ.
  First published: