• Home
 • »
 • News
 • »
 • state
 • »
 • ದೊರೆಸ್ವಾಮಿಯವರ ಬಳಿ ಯತ್ನಾಳ್ ಕ್ಷಮೆ ಕೇಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತೆ: ಎಚ್​.ಕೆ. ಪಾಟೀಲ್​

ದೊರೆಸ್ವಾಮಿಯವರ ಬಳಿ ಯತ್ನಾಳ್ ಕ್ಷಮೆ ಕೇಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತೆ: ಎಚ್​.ಕೆ. ಪಾಟೀಲ್​

ಮಾಜಿ ಸಚಿವ ಹೆಚ್​.ಕೆ. ಪಾಟೀಲ್​​​​

ಮಾಜಿ ಸಚಿವ ಹೆಚ್​.ಕೆ. ಪಾಟೀಲ್​​​​

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​. ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಪರ ಎಂದು ಹೇಳಿರುವುದು ಸರಿಯಿಲ್ಲ. ಇಂತಹ ಹೇಳಿಕೆ ಯಾವ ರಾಜಕಾರಣಿಗೂ ಶೋಭೆ ತರಲ್ಲ. ದೊರಸ್ವಾಮಿಯವರು ರಾಜ್ಯ ಕಂಡ ಅಪರೂಪದ ಹೋರಾಟಗಾರ ಎಂದು ಹೇಳಿದರು.

 • Share this:

  ಗದಗ(ಫೆ. 28): ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ ಕಾಂಗ್ರೆಸ್​​ ಮುಖಂಡ ಎಚ್​.ಕೆ. ಪಾಟೀಲ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್​ ವಿರುದ್ಧ ಕಿಡಿಕಾರಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​.ಎಸ್​. ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಪರ ಎಂದು ಹೇಳಿರುವುದು ಸರಿಯಿಲ್ಲ. ಇಂತಹ ಹೇಳಿಕೆ ಯಾವ ರಾಜಕಾರಣಿಗೂ ಶೋಭೆ ತರಲ್ಲ. ದೊರಸ್ವಾಮಿಯವರು ರಾಜ್ಯ ಕಂಡ ಅಪರೂಪದ ಹೋರಾಟಗಾರ ಎಂದು ಹೇಳಿದರು.


  ದೊರೆಸ್ವಾಮಿ ವಿರುದ್ಧ ಶಾಸಕ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿಚಾರ; ಪ್ರತಿಭಟನೆಗೆ ಕರೆ ನೀಡಿದ ಸಿದ್ದರಾಮಯ್ಯ


  ಮುಂದುವರೆದ ಅವರು, ಶಾಸಕ ಯತ್ನಾಳ್​ ದೊರೆಸ್ವಾಮಿಯವರ ಬಳಿ ಕ್ಷಮೆ ಕೇಳಿ ಈ ವಿವಾದಕ್ಕೆ ಅಂತ್ಯ ಹಾಡಲಿ ಎಂದು ಕೇಳಿಕೊಳ್ಳುತ್ತೇನೆ. ಒಂದು ವೇಳೆ ಯತ್ನಾಳ್​​ ಕ್ಷಮೆ ಕೇಳದಿದ್ದರೆ ಬೇರೆಯದ್ದೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್​.ಕೆ. ಪಾಟೀಲ್​ ಎಚ್ಚರಿಕೆ ನೀಡಿದರು.


  ದೊರೆಸ್ವಾಮಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಪತ್ರಕರ್ತರಾಗಿ ರಾಜ್ಯ, ಭಾಷೆ ಬಗ್ಗೆ ಹೋರಾಟ ಮಾಡಿದ್ದಾರೆ. ತಮ್ಮ ಹೋರಾಟದ ಬದುಕು ಮುಂದುವರಿಸಿದ್ದಾರೆ. ಸಮಾಜಕ್ಕೆ ಉತ್ತಮ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಸರ್ಕಾರದಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸಿದ್ದಾರೆ. ಅದರಲ್ಲಿ ದೊರೆಸ್ವಾಮಿಯವರ ಕೊಡುಗೆ ಸಾಕಷ್ಟಿದೆ. ಹೀಗಿರುವಾಗ ಅವರನ್ನು ಪಾಕಿಸ್ತಾನದ ಏಜೆಂಟ್​ ಎಂದು ಕರೆದಿರುವುದು ಸರಿಯಲ್ಲ ಎಂದು ಕಿಡಿಕಾರಿದರು.


  ಎಚ್​.ಎಸ್. ದೊರೆಸ್ವಾಮಿ ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆಂದು ಗೊತ್ತಿದೆ; ಫೇಸ್​ಬುಕ್​ನಲ್ಲಿ ಯತ್ನಾಳ್ ವಾಗ್ದಾಳಿ

  Published by:Latha CG
  First published: