ಗದಗ (ಮೇ 3): ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಸಚಿವ ಬಿಜೆಪಿ ಚಾಣಕ್ಯ ಅಮಿತ್ ಶಾ (Amith Sha) ವಿರುದ್ಧ ಗದಗದಲ್ಲಿ ಕಾಂಗ್ರೆಸ್ ಶಾಸಕ ಹೆಚ್ ಕೆ ಪಾಟೀಲ (H.K Patil) ಹರಿಹಾಯ್ದರು.. ಕರ್ನಾಟಕದಲ್ಲಿ 40% ಚಾಲ್ತಿಯಲ್ಲಿದೆ ಅನ್ನೋದು ನಿಮಗೆ ಗೊತ್ತಿಲ್ಲವೇ, ಅಮಿತ್ ಶಾ ಅವರೆ ಯಾವ ಕಾರಣಕ್ಕೆ ಕರ್ನಾಟಕಕ್ಕೆ (Karnataka) ಬರುತ್ತೀರಿ? 40 % ಇನ್ಕ್ರೀಜ್ ಮಾಡಲು ಬಂದ್ರಾ ಅಂತಾ ಚಾಟಿ ಬೀಸಿದ್ರು. ಗದಗದಲ್ಲಿ ಮಾತನಾಡಿದ ಹೆಚ್. ಕೆ ಪಾಟೀಲ್ ಅವರು ಯಾವ ಕಾರಣಕ್ಕೆ ಶಾ ಬಂದಿದ್ದಾರೆ. ರಾಜ್ಯದಲ್ಲಿ ಆಡಳಿತ ಎಲ್ಲಿದೆ. ಕರ್ನಾಟಕದ ಇತಿಹಾಸದಲ್ಲೇ (History) ಇಷ್ಟು ಮಟ್ಟದ ಭ್ರಷ್ಟಾಚಾರ ನೋಡಿಲ್ಲ ಅಂತ ಕಿಡಿಕಾರಿದ್ರು.
ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಪತ್ರ
ಭ್ರಷ್ಟಾಚಾರದ ವಿಷಯವಾಗಿ ಮೋದಿಯವರಿಗೂ ಪತ್ರ ಹೋಗಿದೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ ಸಾವು ವಿಷಯ ಪ್ರಸ್ತಾಪಿಸಿ, ಯಾವ ಕಾರಣಕ್ಕೆ ನೀವು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತಾ ಪ್ರಧಾನಿ ಮೋದಿಯವರ ನಡೆಯನ್ನ ಪ್ರಶ್ನಿಸಿದ್ರು. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ವಿಷಯವಾಗಿ ನೀವು ಜನರ ಬಳಿ ಉತ್ತರಿಸಬೇಕು ಅಂತಾ ಹೆಚ್ ಕೆ ಪಾಟೀಲ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ್ರು.
ಯಾವ ಮಂತ್ರಿಗಳನ್ನ ಬದಲಾಯಿಸಿದ್ರು ಅಷ್ಟೆ
ರಾಜ್ಯ ಸಚಿವ ಸಂಪುಟ ಪುನರಚನೆ, ವಿಸ್ತಾರವಾಗಿ ನಡೀತಿರುವ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಈ ಮಂತ್ರಿಯನ್ನ ಬಿಟ್ಟು. ಅವನ್ನ ಹಾಕೋದು. ನೀವು ಯಾವ ಮಂತ್ರಿಯನ್ನ ಹಾಕ್ತೀರಿ ಅನ್ನೋ ಬಗ್ಗೆ ಜನರಿಗೆ ಆಸಕ್ತಿ ಇಲ್ಲ.. ಆಡಳಿತ ಹೇಗೆ ಕೊಡ್ತೀರಿ. ಭ್ರಷ್ಟಾಚಾರ ಹೇಗೆ ನಿಲ್ಲಿಸುತ್ತೀರಿ ಎಂಬುದು ನಿಮ್ಮ ಆಧ್ಯತೆ ಇರಬೇಕು. ರಾಜಕಾರಣ ಮಾಡೋದಕ್ಕೆ ಮೇಲಿಂದ ಮೇಲೆ ಬಂದ್ರೆ ಏನೂ ಒಳ್ಳದಾಗೋದಿಲ್ಲ ಎಂದು ಅಮಿತ್ ಶಾ ರಾಜ್ಯ ಪ್ರವಾಸ ಹಾಗೂ ಸಂಪುಟ ವಿಸ್ತರಣೆ ವಿಚಾರವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ರು.
ಅಶ್ವತ್ಥ ನಾರಾಯಣ ರಾಜೀನಾಮೆ ನೀಡ್ಬೇಕು
ಸಚಿವ ಅಶ್ವತ್ಥ ನಾರಾಯಣ ಅವರ ಜೊತೆ ನಿಕಟ ಸಂಬಂಧ ಹೊಂದಿದವರ ಮೇಲೆ ಆರೋಪ ಬಂದಿದೆ. ಹೀಗಾಗಿ ಸಚಿವರು ಕೂಡ್ಲೆ ರಾಜೀನಾಮೆ ನೀಡ್ಬೇಕು ಅಂತಾ ಒತ್ತಾಯಿಸಿದ ಶಾಸಕ ಹೆಚ್ ಕೆ ಪಾಟೀಲರು, ಪ್ರಧಾನಿ ಮೋದಿಯವರು ಏನು ಮಾಡುತ್ತಿದ್ದಾರೆ. ಅಮಿಶ್ ಶಾ ಅವರೆ ನಿಮ್ಮ ರಾಷ್ಟ್ರದ ಕಲ್ಪನೆ ಇದೇನಾ ಅಂತಾ ಪ್ರಶ್ನಿಸಿದ್ರು.
ರಾಜ್ಯದ ಬಗ್ಗೆ ಚರ್ಚೆ ಮಾಡುತ್ತೀರಿ ಅಲ್ಲಿಂದ (ದೆಹಲಿಯಿಂದ) ಬರೋದು ಇಲ್ಲಿ ಕೂರೋದು. ಯಾರನ್ನ ಮಂತ್ರಿ ಮಾಡ್ಬೇಕು.. ಯಾರನ್ನ ಮಾಡ್ಬಾರ್ದು ಅನ್ನೋದಷ್ಟೆ ಚರ್ಚೆಯಾಗ್ತಿದೆ ಎಂದ್ರು. ಮಂತ್ರಿಗಳಾದವರು ಏನು ಮಾಡುತ್ತಿದ್ದೀರಿ. ನೀವು ಮಾಡಿದ ಪ್ರಮಾದಕ್ಕೆ ತಕ್ಷಣ ರಾಜೀನಾಮೆ ಕೊಡಬೇಕು. ಸಚಿವರ ರಾಜೀನಾಮೆ ಕೊಡೋದಕ್ಕೆ, ಸರ್ಕಾರ ಡಿಸ್ಮಿಸ್ ಮಾಡೋದಕ್ಕೆ ಶಾ ಬಂದ್ರೆ ಅರ್ಥ ಇರುತ್ತೆ ಅಂತಾ ಶಾ ಪ್ರವಾಸವನ್ನ ಟೀಕಿಸಿದ್ರು.
ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ತೊಂದರೆ ಆಗ್ಬಾರದು
545 ಪಿಎಸ್ ಐ ಹುದ್ದೆ ನೇಮಕಾತಿಯನ್ನ ಬ್ರಹ್ಮಾಂಡ ಭ್ರಷ್ಟಾಚಾರ ನಡೆದ ಹಿನ್ನೆಲೆಯಲ್ಲಿ ಸರ್ಕಾರ ಮರು ಪರೀಕ್ಷೆಗೆ ನಿರ್ಧರಿಸಿರುವ ಸರ್ಕಾರ ನಿರ್ಧಾರ ಬಗ್ಗೆ ಮಾತ್ನಾಡಿ, ಯಾರು ಪ್ರಮಾಣಿಕವಾಗಿ ಪರೀಕ್ಷೆ ಬರೆದಿದ್ದಾರೋ ಅವರ ಬಗ್ಗೆ ಸಹಾನುಭೂತಿ ಇದೆ. 545 ಸೀಟ್ ಗಳಲ್ಲಿ 250 ಕ್ಕೂ ಹೆಚ್ಚು ಪ್ರಕರಣದಲ್ಲಿ ಅಕ್ರಮ ಆದ ಬಗ್ಗೆ ಪುರಾವೆ ಸಿಕ್ಕಿವೆ. ನನಗೆ ಬಂದ ವರದಿಯಲ್ಲಿ ಇನ್ನೂ ಹೆಚ್ಚಿಗೆ ಸಿಗುತ್ತವೆ.. ಕೆಲವರಿಗೆ ತೊಂದ್ರೆ ಆಗಬಹುದು. ಅವರ ಕಡೆ ಲಕ್ಷ ಕೊಟ್ಟಲ್ಲಿ ಅಕ್ರಮ ಮಾಡಿದವರು ಕೈ ಮೀರಿ ಹೋಗುತ್ತಾರೆ. ಹಾಗಾಗ ಬಾರದು, ನ್ಯಾಯ ಎಲ್ಲ ಯುವಕರಿಗೆ ಸಿಗುವಂತಾಗಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ