Pratap Simha: ಮೈಸೂರಿನಲ್ಲಿ ಆಣೆ ಪ್ರಮಾಣದ ರಾಜಕೀಯ! ಚಾಮುಂಡೇಶ್ವರಿ ಮುಂದೆ ಕೈ ನಾಯಕನ ಸವಾಲು

ಸಂಸದ ಪ್ರತಾಪ್ ಸಿಂಹ ಅವರಿಗೆ ಸಿದ್ದು ಆಪ್ತರೂ ಆಗಿರುವ ಮೈಸೂರಿನ ಕಾಂಗ್ರೆಸ್ ಮುಖಂಡರೊಬ್ಬರು (Congress Leader) ಸವಾಲು ಹಾಕಿದ್ದಾರೆ. ಮೈಸೂರಿನ ಅಧಿದೇವತೆ, ನಾಡದೇವಿ ತಾಯಿ ಚಾಮುಂಡೇಶ್ವರಿ (Chamundeshwari) ಮೇಲೆ ಆಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ

ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ

  • Share this:
ಮೈಸೂರು: ಆಗಸ್ಟ್ 18ರಂದು ಮಡಿಕೇರಿಯಲ್ಲಿ (Madikeri) ಮಾಜಿ ಸಿಎಂ ಸಿದ್ದರಾಮಯ್ಯ (Ex CM Siddaramaiah) ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಪ್ರಕರಣ (egg throwing case) ದಿನಕ್ಕೊಂದು ಚರ್ಚೆ ಹುಟ್ಟುಹಾಕುತ್ತಿದೆ. ಮೊಟ್ಟೆ ಗಲಾಟೆ ಜೋರಾಗುತ್ತಿರುವಾಗಲೇ ಸಿದ್ದರಾಮಯ್ಯ ಅವರು ಕೋಳಿ ಸಾರು ತಿಂದುಕೊಂಡು ದೇವಸ್ಥಾನಕ್ಕೆ (Temple) ಹೋಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಮೈಸೂರು ಕೊಡಗು ಸಂಸದ (Mysore) ಪ್ರತಾಪ್ ಸಿಂಹ (Pratap Simha) ಹಾಗೂ ಮೈಸೂರು ಮಾಜಿ ಮೇಯರ್ (Ex Mayor) ರವಿಕುಮಾರ್ ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಸಿದ್ದರಾಮಯ್ಯ ನಾನ್ ವೆಜ್ ಊಟ (Non Veg Meals) ತಿಂದುಕೊಂಡು 2017ರಲ್ಲಿ ದಸರಾ ಅಂಬಾರಿಗೆ (Dasara Ambari) ಪೂಜೆ ಮಾಡಿದ್ದರು ಅಂತ ಆರೋಪಿಸಿದ್ದರು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಅವರಿಗೆ ಸಿದ್ದು ಆಪ್ತರೂ ಆಗಿರುವ ಮೈಸೂರಿನ ಕಾಂಗ್ರೆಸ್ ಮುಖಂಡರೊಬ್ಬರು (Congress Leader) ಸವಾಲು ಹಾಕಿದ್ದಾರೆ. ಮೈಸೂರಿನ ಅಧಿದೇವತೆ, ನಾಡದೇವಿ ತಾಯಿ ಚಾಮುಂಡೇಶ್ವರಿ (Chamundeshwari) ಮೇಲೆ ಆಣೆ ಮಾಡುವಂತೆ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಆರೋಪಿಸಿದ್ದ ಪ್ರತಾಪ್ ಸಿಂಹ

2017ರ ಮೈಸೂರು ದಸರಾ ಅಂಬಾರಿ ದಿನ ಅಂದಿನ ಸಿಎಂ ಆಗಿದ್ದ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಗಂಭೀರ ಆರೋಪ ಮಾಡಿದ್ದರು. ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಆಯೋಜಿಸಿದ್ದ ಭೋಜನ ಕೂಟದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು. ಆಗ ಸಿದ್ದರಾಮಯ್ಯ ನಾನ್ ವೆಜ್ ತಿಂದು, ಬಳಿಕ ಅಂಬಾರಿ ಪೂಜೆ ಮಾಡಿದ್ದಾರೆ ಅಂತ ಆರೋಪಿಸಿದ್ದರು.

ಮೈಸೂರು ಮಾಜಿ ಮೇಯರ್ರಿಂದಲೂ ಗಂಭೀರ ಆರೋಪ

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಮಾಜಿ ಮೇಯರ್ ರವಿಕುಮಾರ್ 2017ರ ದಸರಾ ಅಂಬಾರಿ ದಿನ ಅಂದಿನ ಸಿಎಂ ಸಿದ್ದರಾಮಯ್ಯ ನಾಟಿ ಕೋಳಿ ಊಟ ಮಾಡಿದ್ದರು. ಅವತ್ತು ಅವರ ಊಟದ ಟೇಬಲ್‍ನಲ್ಲಿ ಅವರ ಜೊತೆ ನಾನು ಕುಳಿತಿದ್ದೆ. ಲಲಿತ್ ಮಹಲ್ ಹೋಟೆಲ್‍ನಲ್ಲಿ ಮಾಂಸಹಾರ – ಸಸ್ಯಹಾರದ ಊಟದ ವ್ಯವಸ್ಥೆ ಇತ್ತು. ಸಿದ್ದರಾಮಯ್ಯ ಅವರು ನಾಟಿ ಕೋಳಿ ಊಟ ಮಾಡಿದ್ದರು ಅಂತ ಆರೋಪಿಸಿದ್ದರು.

ಇದನ್ನೂ ಓದಿ: Siddaramaiah: 2017ರಲ್ಲಿ ಮಾಂಸ ತಿಂದು ಮೈಸೂರು ದಸರಾ ಅಂಬಾರಿಗೆ ಪೂಜೆ ಮಾಡಿದ್ರಾ ಸಿದ್ದರಾಮಯ್ಯ!?

ಸಂಸದ ಪ್ರತಾಪ್ ಸಿಂಹಗೆ ಪಂಥಾಹ್ವಾನ

ಸಿದ್ದರಾಮಯ್ಯ ಮಾಂಸಾಹಾರ ತಿಂದ ಅಂಬಾರಿ ಪೂಜೆ ಮಾಡಿದ್ದರು ಅಂತ ಹೇಳಿದ್ದ ಪ್ರತಾಪ್ ಸಿಂಹ ಮೇಲೆ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ಆಪ್ತ ಸೀತಾರಾಂ ಗರಂ ಆಗಿದ್ದಾರೆ. ನಿಮಗೆ ತಾಕತ್ತಿದ್ದರೆ ಬನ್ನಿ, ಮಾಂಸಹಾರ ಸೇವಿಸಿದ್ದನ್ನು ಸಾಬೀತು ಮಾಡಿ ಅಂತ ಸವಾಲು ಹಾಕಿದ್ದಾರೆ.

“ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ”

2017ರಲ್ಲಿ ಜಿಲ್ಲಾಡಳಿತದಿಂದ ಲಲಿತ ಮಹಲ್ ಹೋಟೆಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆಗ ರಂದೀಪ್ ಜಿಲ್ಲಾಧಿಕಾರಿ ಆಗಿದ್ದರು. ಸಿದ್ದರಾಮಯ್ಯ ಚಪಾತಿ, ಅನ್ನ, ಸಾಂಬಾರ್ ತಿಂದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಮಹದೇವಪ್ಪ, ಸಂಸದರಾಗಿದ್ದ ಆರ್.ಧ್ರುವ ನಾರಾಯಣ, ನಾನು ಜತೆಗೆ ಇದ್ದೆವು. ಮಾಂಸಾಹಾರ ತಿಂದು ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದನ್ನು ಪ್ರೂವ್ ಮಾಡಲಿ. ಹೀಗಂತ ಚಾಮುಂಡೇಶ್ವರಿ ಮೇಲೆ ಪ್ರತಾಪ ಸಿಂಹ ಆಣೆ ಮಾಡಲಿ ಅಂತ ಸೀತಾರಾಂ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Siddaramaiah: ಮನೆಯಲ್ಲಿ ಏನಾದ್ರೂ ತಿನ್ನಿ, ದೇವಸ್ಥಾನಕ್ಕೆ ಹೋಗುವಾಗ ಶಿಷ್ಟಾಚಾರ ಪಾಲಿಸಿ: ಪ್ರತಾಪ್ ಸಿಂಹ

ಪ್ರತಾಪ್ ಸಿಂಹಗೆ ಮಾಡೋಕೆ ಬೇರೆ ಕೆಲಸ ಇಲ್ಲ

ಪ್ರತಾಪ್ ಸಿಂಹ ಅವರಿಗೆ ಮಾತನಾಡೋಕೆ ಬೇರೆ ವಿಚಾರ ಇಲ್ಲ ಅಂತ ಸೀತಾರಾಂ ಕಿಡಿ ಕಾರಿದ್ದಾರೆ. ಕೋಮು ಭಾವನೆ ಕೆಣಕುವುದು, ಬೆಂಕಿ ಹಚ್ಚುವುದು ಪ್ರತಾಪ್ ಸಿಂಹ ಅವರ ಕೆಲಸ ಅಂತ ಸೀತಾರಾಂ ಕಿಡಿ ಕಾರಿದ್ದಾರೆ.
Published by:Annappa Achari
First published: