• Home
  • »
  • News
  • »
  • state
  • »
  • ಸಂಪುಟ ವಿಸ್ತರಣೆಯಾಗಲಿ ಆಗ ಗೊತ್ತಾಗುತ್ತೆ ಬಿಜೆಪಿಯಲ್ಲಿ ಯಾರು ಸಿಡೀತಾರೆ, ಯಾರು ತಣ್ಣಗಾಗ್ತಾರೆ? ಅಂತ; ಜಿ. ಪರಮೇಶ್ವರ್ ವ್ಯಂಗ್ಯ

ಸಂಪುಟ ವಿಸ್ತರಣೆಯಾಗಲಿ ಆಗ ಗೊತ್ತಾಗುತ್ತೆ ಬಿಜೆಪಿಯಲ್ಲಿ ಯಾರು ಸಿಡೀತಾರೆ, ಯಾರು ತಣ್ಣಗಾಗ್ತಾರೆ? ಅಂತ; ಜಿ. ಪರಮೇಶ್ವರ್ ವ್ಯಂಗ್ಯ

ಮಾಜಿ ಡಿಸಿಎಂ  ಡಾ. ಜಿ. ಪರಮೇಶ್ವರ್

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್

ಬಿಜೆಪಿ ಪಕ್ಷದಲ್ಲಿ ಈಗ ಯಾರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಒಂದು ಬಾರಿ ಸಂಪುಟ ವಿಸ್ತರಣೆಯಾದರೆ ಬಿಜೆಪಿ ಒಳಗಿನ ಬಿಕ್ಕಟ್ಟು ಇಡೀ ರಾಜ್ಯದ ಜನರಿಗೆ ಗೊತ್ತಾಗಲಿದೆ. ಯಾರು ಸಿಡಿಯುತ್ತಾರೆ? ಯಾರು ತಣ್ಣಗಾಗುತ್ತಾರೆ? ಎಂಬುದು ಬಯಲಾಗಲಿದೆ. ನಾವು ಅದಕ್ಕೆ ಕಾಯುತ್ತಿದ್ದೇವೆ. ಇದರಿಂದ ನಮಗೂ ಅನುಕೂಲವಾಗಲಿದೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಜನವರಿ 29); ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದಲ್ಲಿ ಯಾರನ್ನೂ ನಿಭಾಯಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದ್ದಾರೆ. ಒಮ್ಮೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದರೆ ಇದು ಇಡೀ ರಾಜ್ಯದ ಜನರಿಗೆ ಗೊತ್ತಾಗಲಿದೆ. ಅಲ್ಲದೆ, ಸಂಪುಟ ವಿಸ್ತರಣೆ ನಂತರ ಯಾರು ಸಿಡಿಯಲಿದ್ದಾರೆ? ಯಾರು ತಣ್ಣಗಾಗುತ್ತಾರೆ? ಎಂಬುದೆಲ್ಲವೂ ಬಯಲಾಗಲಿದೆ ಎಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.

ರಾಜ್ಯ ಸಂಪುಟ ವಿಸ್ತರಣೆ ಎಂಬುದು ಕಳೆದ ಎರಡು ತಿಂಗಳಿನಿಂದ ಸಿಎಂ ಯಡಿಯೂರಪ್ಪ ಅವರಿಗೆ ಕಬ್ಬಿಣದ ಕಡಲೆಯಂತಾಗಿದೆ. ಹೀಗಾಗಿ ಬಿಜೆಪಿಯ ಸಂಪುಟ ವಿಸ್ತರಣೆ ಕಸರತ್ತಿನ ಕುರಿತು ಇಂದು ಪತ್ರಕರ್ತರ ಎದುರು ವ್ಯಂಗ್ಯವಾಡಿರುವ ಜಿ. ಪರಮೇಶ್ವರ್, “ಬಿಜೆಪಿ ಪಕ್ಷದಲ್ಲಿ ಈಗ ಯಾರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ. ಒಂದು ಬಾರಿ ಸಂಪುಟ ವಿಸ್ತರಣೆಯಾದರೆ ಬಿಜೆಪಿ ಒಳಗಿನ ಬಿಕ್ಕಟ್ಟು ಇಡೀ ರಾಜ್ಯದ ಜನರಿಗೆ ಗೊತ್ತಾಗಲಿದೆ. ಯಾರು ಸಿಡಿಯುತ್ತಾರೆ? ಯಾರು ತಣ್ಣಗಾಗುತ್ತಾರೆ? ಎಂಬುದು ಬಯಲಾಗಲಿದೆ. ನಾವು ಅದಕ್ಕೆ ಕಾಯುತ್ತಿದ್ದೇವೆ. ಇದರಿಂದ ನಮಗೂ ಅನುಕೂಲವಾಗಲಿದೆ” ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾದ ನವ ಬೆಂಗಳೂರು ಯೋಜನೆಯನ್ನು ಪ್ರಸ್ತುತ ಬಿಜೆಪಿ ಸರ್ಕಾರ ಹಿಂಪಡೆದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, “ಜನಪರ ಕೆಲಸಗಳನ್ನು ತಡೆಯುವುದು ಸರಿಯಲ್ಲ. ಬೇರೆ ಪಕ್ಷ ಅಥವಾ ಸರ್ಕಾರದ ಮೇಲೆ ಕೋಪ ಇರಬಹುದು. ಯೋಜನೆಗೂ ಬೇಕಾದರೆ ಬೇರೆ ಹೆಸರನ್ನು ಇಟ್ಟುಕೊಳ್ಳಲಿ. ಆದರೆ, ನಮ್ಮ ಮೇಲಿನ ಕೋಪವನ್ನು ಜನರ ಮೇಲೆ ತೋರಿಸುವುದು ಬೇಡ. ಕಾಂಗ್ರೆಸ್ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವುದು ಬೇಡ” ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ದಲಿತನ ಶವ ಸಂಸ್ಕಾರಕ್ಕೆ ಮೇಲ್ಜಾತಿಯವರ ಅಡ್ಡಿ; ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿ ಇದೆಯೇ?; ಸಿದ್ದರಾಮಯ್ಯ ಕಿಡಿ

First published: