ಜೆಡಿಎಸ್​ನವರು ಕೋತಿಗಳು, ಇಂಥವರನ್ನು ಕಟ್ಟಿಕೊಂಡು ನಾವೆಲ್ಲಿ ಸಾಯೋಣ; ಜಿ ಪರಮೇಶ್ವರ್ ವ್ಯಂಗ್ಯ

ಜೆಡಿಎಸ್​ ಬಗ್ಗೆ ವ್ಯಂಗ್ಯವಾಡಿದ ನಂತರ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಪರಮೇಶ್ವರ್​, ಕಮಲ ಹಾಗೂ ಕೈ ಪಕ್ಷವನ್ನು ತಿರಸ್ಕರಿಸಿ ಎಂದು ಜನರಲ್ಲಿ ಕೋರಿದರು.  

Rajesh Duggumane | news18-kannada
Updated:November 26, 2019, 8:02 AM IST
ಜೆಡಿಎಸ್​ನವರು ಕೋತಿಗಳು, ಇಂಥವರನ್ನು ಕಟ್ಟಿಕೊಂಡು ನಾವೆಲ್ಲಿ ಸಾಯೋಣ; ಜಿ ಪರಮೇಶ್ವರ್ ವ್ಯಂಗ್ಯ
ಡಿಸಿಎಂ ಪರಮೇಶ್ವರ್​, ಮಾಜಿ ಸಿಎಂ ಕುಮಾರಸ್ವಾಮಿ
  • Share this:
ಹುಣಸೂರು (ನ.26): ಕಾಂಗ್ರೆಸ್​​-ಜೆಡಿಎಸ್​ ಸರ್ಕಾರ ಮುರಿದು ಬಿದ್ದ ನಂತರ ಎರಡೂ ಪಕ್ಷದವರು ಹಾವು-ಮುಂಗುಸಿ ರೀತಿ ವರ್ತಿಸುತ್ತಿವೆ. ಪರಸ್ಪರ ಕೆಸರೆರೆಚಾಟ ನಡೆಸುತ್ತಿರುವ ನಾಯಕರು ವಿಧಾನಸಭೆ ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳದೆ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿದಿದ್ದಾರೆ. ಈ ಮಧ್ಯೆ ಎರಡೂ ಪಕ್ಷದವರ ಆರೋಪ ಪ್ರತ್ಯಾರೋಪ ಮುಂದುವರೆದಿದೆ. ಈಗ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್​ ಜೆಡಿಎಸ್​ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಹುಣಸೂರಿನಲ್ಲಿ ಪ್ರಚಾರ ನಡೆಸುವ ವೇಳೆ ಜೆಡಿಎಸ್ ಪಕ್ಷವನ್ನು ಕೋತಿಗಳಿಗೆ ಹೋಲಿಕೆ ಮಾಡಿದ ಮಾಜಿ ಪರಮೇಶ್ವರ್​, ತೀವ್ರ ಗ್ದಾಳಿ ನಡೆಸಿದರು. “ಕೋತಿಗಳು ಮರದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಜಿಗಿಯುತ್ತವೆ. ಇದೆಲ್ಲ ನಮ್ಮೂರಿನ ಕಡೆ ಮಾಮೂಲಿ.‌ ಅದೇ ರೀತಿ ಜೆಡಿಎಸ್‌ನವರ ಕಥೆ. ಬೆಳಿಗ್ಗೆ ಒಂದು ಹೇಳಿಕೆ, ಸಂಜೆ ಒಂದು ರೀತಿ ಹೇಳಿಕೆ ಕೊಡ್ತಾರೆ. ಇಂಥವರನ್ನು ಕಟ್ಟಿಕೊಂಡು ನಾವೆಲ್ಲಿ ಸಾಯೋಣ,” ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಯಲ್ಲಾಪುರ -ಮುಂಡಗೋಡ ಕ್ಷೇತ್ರದ ಪ್ರತ್ಯಕ್ಷ ವರದಿ : ಬಿಜೆಪಿ-ಕಾಂಗ್ರೆಸ್ ನೇರ ಜಿದ್ದಾಜಿದ್ದಿ; ಲೆಕ್ಕಕ್ಕಿಲ್ಲದ ಜೆಡಿಎಸ್

ಮೈತ್ರಿ ವಿಚಾರದಲ್ಲಿ ಜೆಡಿಎಸ್​ ಅಸಮಾಧನ ಹೊರ ಹಾಕುತ್ತಲೇ ಇತ್ತು. ಈ ಬಗ್ಗೆ ಮಾತನಾಡಿರುವ ಪರಮೇಶ್ವರ್​, “ನಮ್ಮ ಜೊತೆ ಇರಿ ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದರೂ ಇರುವುದಿಲ್ಲ. ಅವರ ಜೊತೆಗಾದರೂ ಹೋಗಿ ಅವರಾದರೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದರೆ ಅದೂ ಆಗುವುದಿಲ್ಲ. ಇಂಥವರಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು,” ಎಂದು ಕರೆ ನೀಡಿದರು.

ಈ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಪರಮೇಶ್ವರ್​, ಕಮಲ ಹಾಗೂ ಕೈ ಪಕ್ಷವನ್ನು ತಿರಸ್ಕರಿಸಿ ಎಂದು ಜನರಲ್ಲಿ ಕೋರಿದರು.

(ವರದಿ: ಪುಟ್ಟಪ್ಪ)
First published: November 26, 2019, 7:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading