IT Raid: ಐಟಿ ದಾಳಿ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್​​ ಪಿಎ ರಮೇಶ್​ ಆತ್ಮಹತ್ಯೆ

Dr G Parameshwaras PA Commits Suicide: ಆತ್ಮಹತ್ಯೆ ಮಾಡಿಕೊಂಡ ರಮೇಶ್​ ಕುಣಿಗಲ್ ಮೂಲದವರಾಗಿದ್ದು, ಕೆಲವು ವರ್ಷ ಕೆಪಿಸಿಸಿಯಲ್ಲಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಕಾಂಗ್ರೆಸ್​​ ಸರ್ಕಾರ ಬಂದ ಬಳಿಕ ಪರಮೇಶ್ವರ್​ ಅವರ ಪಿಎ ಆಗಿದ್ದರು.

Latha CG | news18-kannada
Updated:October 12, 2019, 2:23 PM IST
IT Raid: ಐಟಿ ದಾಳಿ ಬೆನ್ನಲ್ಲೇ ಡಾ.ಜಿ.ಪರಮೇಶ್ವರ್​​ ಪಿಎ ರಮೇಶ್​ ಆತ್ಮಹತ್ಯೆ
ಪರಮೇಶ್ವರ್ ಪಿಎ ರಮೇಶ್​
Latha CG | news18-kannada
Updated: October 12, 2019, 2:23 PM IST
ಬೆಂಗಳೂರು(ಅ.12): ಐಟಿ ದಾಳಿ ಬೆನ್ನಲ್ಲೇ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಪಿಎ ರಮೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜ್ಞಾನಭಾರತಿ ಯುನಿವರ್ಸಿಟಿ ಕ್ಯಾಂಪಸ್​ನ ಸಾಯಿ  ಮೈದಾನದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್​ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಜ್ಞಾನಭಾರತಿ ಠಾಣೆ ಪೊಲೀಸರು ದೌಡಾಯಿಸಿದ್ದಾರೆ.

ಐಟಿ ದಾಳಿ ಮತ್ತು ವಿಚಾರಣೆಗೆ ಹೆದರಿ ರಮೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗಲ್ಲ ಎಂದು ರಮೇಶ್​ ಈ ಮೊದಲೇ ತನ್ನ ಗೆಳೆಯರಿಗೆ ಫೋನ್​ ಮಾಡಿ ಹೇಳಿದ್ದರು ಎಂದು ತಿಳಿದುಬಂದಿದೆ. ಜೊತೆಗೆ ಫೋನ್ ಸ್ವಿಚ್​ ಆಫ್​ ಮಾಡಿ ನಾಪತ್ತೆಯಾಗಿದ್ದರು.



ರಾತ್ರಿಯಿಡೀ ಪರಮೇಶ್ವರ್  ಮನೆಯಲ್ಲಿ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಮುಗಿಯುವವರೆಗೂ ರಮೇಶ್​ ಪರಮೇಶ್ವರ್​ ಮನೆಯಲ್ಲೇ ಇದ್ದರು. ಬೆಳಗ್ಗೆ 6 ಗಂಟೆಗೆ ಪರಮೇಶ್ವರ್​ ಮನೆಯಿಂದ ತೆರಳಿದ್ದರು. ಬಳಿಕ ತನ್ನ ಗೆಳೆಯರಿಗೆ ಕರೆ ಮಾಡಿ, ಐಟಿ ವಿಚಾರಣೆ  ಎದುರಿಸುವ ಧೈರ್ಯ ಇಲ್ಲ ಎಂದು ಹೇಳಿದ್ದರು. ಆ ಬಳಿಕ ಸ್ವಲ್ಪ ಸಮಯದಲ್ಲೇ ರಮೇಶ್ ಫೋನ್ ಸ್ವಿಚ್​ ಆಫ್​ ಆಗಿತ್ತು.

ಆತ್ಮಹತ್ಯೆ ಮಾಡಿಕೊಂಡ ರಮೇಶ್​ ಕುಣಿಗಲ್ ಮೂಲದವರಾಗಿದ್ದು, 15 ವರ್ಷ ಕೆಪಿಸಿಸಿಯಲ್ಲಿ ಕಂಪ್ಯೂಟರ್ ಆಪರೇಟರ್​ ಆಗಿ ಕೆಲಸ ಮಾಡಿದ್ದರು. ಕಾಂಗ್ರೆಸ್​​ ಸರ್ಕಾರ ಬಂದ ಬಳಿಕ ಗೃಹ ಸಚಿವರಾದ ಪರಮೇಶ್ವರ್​ ಅವರ ಆಪ್ತ ಸಹಾಯಕರಾಗಿದ್ದರು. ಅಲ್ಲಿಂದ ಪರಮೇಶ್ವರ್ ಡಿಸಿಎಂ ಆದಾಗಲೂ ಮತ್ತು ಮೈತ್ರಿ ಸರ್ಕಾರ ಪತನದ ಬಳಿಕವೂ ರಮೇಶ್​ ಪರಮೇಶ್ವರ್ ಜೊತೆಗಿದ್ದರು ಎಂದು ತಿಳಿದು ಬಂದಿದೆ.

ಐಟಿ ದಾಳಿ ಪ್ರಕರಣ; ಮಾಜಿ ಡಿಸಿಎಂ ಪರಮೇಶ್ವರ್ ಖಜಾನೆಯಲ್ಲಿತ್ತು 100 ಕೋಟಿಗೂ ಅಧಿಕ ಅಕ್ರಮ ಹಣ!
Loading...

First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...