• Home
  • »
  • News
  • »
  • state
  • »
  • Bomb Threat: ಹುಚ್ಚ ವೆಂಕಟ್​ ಹೆಸರಲ್ಲಿ ಬಾಂಬ್ ಬೆದರಿಕೆ ಎಂದ್ರು ಡಿಕೆಶಿ; ಆತಂಕಪಡುವ ಅಗತ್ಯವಿಲ್ಲ-ಐಶ್ವರ್ಯಾ

Bomb Threat: ಹುಚ್ಚ ವೆಂಕಟ್​ ಹೆಸರಲ್ಲಿ ಬಾಂಬ್ ಬೆದರಿಕೆ ಎಂದ್ರು ಡಿಕೆಶಿ; ಆತಂಕಪಡುವ ಅಗತ್ಯವಿಲ್ಲ-ಐಶ್ವರ್ಯಾ

ಡಿ.ಕೆ. ಶಿವಕುಮಾರ್

ಡಿ.ಕೆ. ಶಿವಕುಮಾರ್

ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು​ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂತು. ತಕ್ಷಣ ಪೊಲೀಸರನ್ನು ಸಂಪರ್ಕಿಸಿದೆ. ಶಾಲೆಯ ಆವರಣವನ್ನು ಖಾಲಿ ಮಾಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸುತ್ತಿದೆ. ನನ್ನ ಪ್ರಕಾರ ಇದೊಂದು ಹುಸಿ ಕರೆ ಎಂದು ಡಿಕೆ ಶಿವಕುಮಾರ್​ ಹೇಳಿದ್ರು.

ಮುಂದೆ ಓದಿ ...
  • Share this:

ಬೆಂಗಳೂರು (ಜು.18) : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K Shivakumar) ಅವರ  ಒಡೆತನದ ರಾಜರಾಜೇಶ್ವರಿ ನಗರದ ನ್ಯಾಷನಲ್ ಹಿಲ್‌ವ್ಯೂ ಪಬ್ಲಿಕ್ ಶಾಲೆಗೆ ಬಾಂಬ್​ ಇಟ್ಟಿರೋದಾಗಿ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ  ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್​ ಹುಚ್ವ ವೆಂಕಟ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಬಾಂಬ್ ಬೆದರಿಕೆ ಪತ್ರ (Bomb Threat Letter) ಬಂದಿದೆ ಎಂದು ತಿಳಿಸಿದ್ದಾರೆ. ಭಾನುವಾರ (Sunday) ರಾತ್ರಿ ಇ-ಮೇಲ್ ಮೂಲಕ ಬೆದರಿಕೆ ಬಂದಿತ್ತು. ಸೋಮವಾರ ಬೆಳಿಗ್ಗೆ ಶಿಕ್ಷಕರು ಮತ್ತು ಸಿಬ್ಬಂದಿ ಶಾಲೆಗೆ ಬಂದ ಬಳಿಕ ವಿಷಯ ಗೊತ್ತಾಯಿತು. ಅಷ್ಟರಲ್ಲಾಗಲೇ ಮಕ್ಕಳು ಶಾಲೆಗೆ ಬಂದಿದ್ದರು ಎಂದರು. ವಿದ್ಯಾರ್ಥಿಗಳನ್ನು ಶಾಲೆಯಿಂದ ಸ್ಥಳಾಂತರ ಮಾಡಲಾಗಿದೆ. ಪೊಲೀಸರು (Police) ಶೋಧ ನಡೆಸುತ್ತಿದ್ದಾರೆ ಎಂದು ಡಿಕೆಶಿ ತಿಳಿಸಿದರು.


ನನ್ನ ಪ್ರಕಾರ ಇದೊಂದು ಹುಸಿ ಕರೆ


ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು​ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂತು. ತಕ್ಷಣ ಪೊಲೀಸರನ್ನು ಸಂಪರ್ಕಿಸಿದೆ. ಶಾಲೆಯ ಆವರಣವನ್ನು ಖಾಲಿ ಮಾಡಲಾಗಿದ್ದು, ಬಾಂಬ್ ನಿಷ್ಕ್ರಿಯ ದಳ ಕಾರ್ಯಾಚರಣೆ ನಡೆಸುತ್ತಿದೆ. ನನ್ನ ಪ್ರಕಾರ ಇದೊಂದು ಹುಸಿ ಕರೆ ಎಂದರು.


ಶಾಲೆಯ ಆವರಣದಲ್ಲಿ ಪರಿಶೀಲನೆ


ಬೆಂಗಳೂರು ಪಶ್ಚಿಮ ವಿಭಾದ ಡಿಸಿಪಿ ಲಕ್ಷ್ಮಣ ಬಿ.ನಿಂಬರಗಿ ಮಾಹಿತಿ ನೀಡಿ, ರಾಜರಾಜೇಶ್ವರಿ ನಗರದ ಐಡಿಯಲ್ ಟೌನ್‌ಶಿಪ್‌ನಲ್ಲಿರುವ ಖಾಸಗಿ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಶಾಲೆಯ ಆವರಣದಲ್ಲಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Bengaluru Mosque: ಒತ್ತುವರಿ ಆರೋಪ, ಮಸೀದಿ ಕೆಡವಲು ಮುಂದಾದ ಬಿಬಿಎಂಪಿ


ಆತಂಕಪಡುವ ಅಗತ್ಯವಿಲ್ಲ ಎಂದ್ರು ಡಿಕೆಶಿ ಮಗಳಿ ಐಶ್ವರ್ಯ


ಬಾಂಬ್​ ಬೆದರಿಕೆ ಕುರಿತು ವಿದ್ಯಾರ್ಥಿಗಳ ಪೋಷಕರ ಜೊತೆ ಮಾತನಾಡುತ್ತಿರುವ ಮಗಳು ಐಶ್ವರ್ಯ, ಆತಂಕಪಡುವ ಅಗತ್ಯವಿಲ್ಲವೆಂದು ಹೇಳುತ್ತಿದ್ದಾರೆ. ಬಾಂಬ್ ಬೆದರಿಕೆಯಿಂದ ಆತಂಕಗೊಂಡಿದ್ದ ಪೋಷಕರು, ಶಾಲೆಗೆ ದೌಡಾಯಿಸಿದ್ರು. ಅವರ ಜೊತೆ ಮಾತಾಡಿದ  ಐಶ್ವರ್ಯ, 'ಬಾಂಬ್ ಬೆದರಿಕೆ ನಮಗೂ ಆತಂಕ ತಂದಿದೆ. ಮಕ್ಕಳನ್ನು ಈಗಾಗಲೇ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಲಾಗಿದ್ದು, ಆತಂಕ ಪಡಬೇಡಿ. ಆಡಳಿತ ಮಂಡಳಿ ಜೊತೆ ಸಹಕರಿಸಿ ಎಂದು ಪೋಷಕರ ಬಳಿ ಐಶ್ವರ್ಯ ಕೇಳಿಕೊಂಡ್ರು.


ಎಲ್ಲಾ ಮಕ್ಕಳು ಸೇಫ್​ ಆಗಿದ್ದಾರೆ


ಪೊಲೀಸರು ಶಾಲೆಗೆ ಬಂದು ತಪಾಸಣೆ ನಡೆಸುತ್ತಿದ್ದಾರೆ. ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವ ಜವಾಬ್ದಾರಿ ನಮ್ಮದು. ಪೋಷಕರು ಸಹ ನಮ್ಮ ಜೊತೆಗಿದ್ದು, ಪರಿಸ್ಥಿತಿ ನಿಭಾಯಿಸಲು ಸಹಕರಿಸಬೇಕು ಎಂದೂ ಮನವಿ ಮಾಡುತ್ತಿದ್ದಾರೆ.


ಡಿಕೆ ಶಿವಕುಮಾರ್ ಮಾಲೀಕತ್ವದ ಶಾಲೆಗೆ ಬಾಂಬ್ ಬೆದರಿಕೆ

 ಬೆಂಗಳೂರಿನ ಆರ್‌ಆರ್ ನಗರದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ನಿನ್ನೆ ಸಂಜೆಯೇ ಶಾಲೆಯ ಮೇಲ್ ಐಡಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದಾರೆ. ಇಂದು ಬೆಳಗ್ಗೆ ಶಾಲೆಯ ಇ-ಮೇಲ್ ಚೆಕ್ ಮಾಡಿದ ವೇಳೆ ಬೆದರಿಕೆ ಪತ್ರ ಬಂದಿರುವುದು ಪತ್ತೆಯಾಗಿದೆ. ಈ ಶಾಲೆಯು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಾಲೀಕತ್ವದ್ದು ಎನ್ನಲಾಗಿದೆ.




ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ದೌಡು


ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆರ್ ಆರ್ ನಗರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದ್ರು. ಮಕ್ಕಳನ್ನ ಸ್ಥಳಾಂತರ ಮಾಡಿ, ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಸ್ಥಳಕ್ಕೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ, ಶಾಲಾ ಆವರಣದಲ್ಲಿ ಎರಡು ತಂಡಗಳು ಪರಿಶೀಲನೆ ನಡೆಸುತ್ತಿವೆ.

Published by:Pavana HS
First published: