ಡಿಕೆಶಿ ಆಪರೇಷನ್ ದಿಲ್ಲಿ ಫೇಲ್; ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಡೆಯಲು ಮಾಡಿದ್ದ ದೆಹಲಿ ದಂಡಯಾತ್ರೆ ವಿಫಲ

ಪಕ್ಷದ ರಾಷ್ಟ್ರೀಯ ಮುಖಂಡರಾದ ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್ ಮೂಲಕ ಸೋನಿಯಾ ಭೇಟಿಗೆ ಡಿಕೆಶಿ ಸತತ ಪ್ರಯತ್ನ ನಡೆಸಿದ್ದರು. ಸೋನಿಯಾ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. 

news18-kannada
Updated:January 28, 2020, 8:31 PM IST
ಡಿಕೆಶಿ ಆಪರೇಷನ್ ದಿಲ್ಲಿ ಫೇಲ್; ಕೆಪಿಸಿಸಿ ಅಧ್ಯಕ್ಷ ಹುದ್ದೆ ಪಡೆಯಲು ಮಾಡಿದ್ದ ದೆಹಲಿ ದಂಡಯಾತ್ರೆ ವಿಫಲ
ಡಿ.ಕೆ. ಶಿವಕುಮಾರ್.
  • Share this:
ನವದೆಹಲಿ: ಶತಾಯಗತಾಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಕಳೆದ ಐದು ದಿನಗಳಿಂದ ರಾಜಧಾನಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಡಿ.ಕೆ.ಶಿವಕುಮಾರ್ ಅವರ ಪ್ರಯತ್ನ ವಿಫಲವಾಗಿದೆ. ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕೆಪಿಸಿಸಿ ಪಟ್ಟ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದ ಕನಕಪುರ ಬಂಡೆ ಇಂದು ಬರಿಗೈಲಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಡಿಕೆಶಿ ಕಳೆದ ಐದು ದಿನಗಳ ಹಿಂದೆ ದೆಹಲಿಗೆ ಬಂದಿದ್ದರು. ಕಾಂಗ್ರೆಸ್​ ಮುಖಂಡರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದ್ದರು. ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭೇಟಿಗಾಗಿ ಡಿಕೆಶಿ ಇಲ್ಲಿಯೇ ಬಿಡಾರ ಹೂಡಿದ್ದರು. ಆದರೆ, ಐದು ದಿನ ಕಾದರೂ ಭೇಟಿಗೆ ಸೋನಿಯಾ ಗಾಂಧಿ ಸಮಯ ಕೊಡದ ಕಾರಣ ಕನಕಪುರ ಬಂಡೆ ಬೇಸರದಿಂದಲೇ ದೆಹಲಿಯಿಂದ ನಿರ್ಗಮಿಸಿದ್ದಾರೆ.

ಪಕ್ಷದ ರಾಷ್ಟ್ರೀಯ ಮುಖಂಡರಾದ ಅಹ್ಮದ್ ಪಟೇಲ್, ಕೆ.ಸಿ. ವೇಣುಗೋಪಾಲ್ ಮೂಲಕ ಸೋನಿಯಾ ಭೇಟಿಗೆ ಡಿಕೆಶಿ ಸತತ ಪ್ರಯತ್ನ ನಡೆಸಿದ್ದರು. ಸೋನಿಯಾ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ.

ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ಸ್ಥಾನಕ್ಕೆ ಡಿಕೆಶಿ ಪ್ರಬಲ ಲಾಬಿ ನಡೆಸಿದ್ದರು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತಾವು ಹೇಳಿದವರಿಗೆ ನೀಡಬೇಕು ಎಂದು ಕೂಲಂಕಷವಾಗಿ ವಿವರಿಸಿದ್ದರು. ಸಿದ್ದರಾಮಯ್ಯ ಅವರು ದೆಹಲಿಯಿಂದ ಬೆಂಗಳೂರಿಗೆ ಬಂದ ಬಳಿಕ ಡಿಕೆಶಿ ದೆಹಲಿಗೆ ತೆರಳಿದ್ದರು. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಮಾಡಲು ಸೋನಿಯಾ ಗಾಂಧಿ ಅವರೇ ಸಿಗದ ಕಾರಣ, ಹೈಕಮಾಂಡ್ ನಡೆಯಿಂದ ಬೇಸತ್ತು ಡಿಕೆಶಿ ಬೆಂಗಳೂರು ಕಡೆಗೆ ಮುಖ ಮಾಡಿದ್ದಾರೆ.

ಇದನ್ನು ಓದಿ: ರಾಷ್ಟ್ರೀಯ ನಾಯಕರು ಸಿಎಂ ಗೆ ಸ್ವಾತ್ರಂತ್ರ್ಯ ಕೊಡ್ತಿಲ್ಲ - ಸಂಕಷ್ಟಕ್ಕೆ ಸಿಲುಕಿದ ಯಡಿಯೂರಪ್ಪ; ಸಿದ್ಧರಾಮಯ್ಯ ಟೀಕೆ
First published: January 28, 2020, 8:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading