DK Shivakumar Hospitalized: ಡಿಕೆ ಶಿವಕುಮಾರ್​ಗೆ ಮತ್ತೆ ಕಾಣಿಸಿಕೊಂಡ ಎದೆನೋವು; ಆಸ್ಪತ್ರೆಗೆ ದಾಖಲು

ಅಕ್ಟೋಬರ್​ ಕೊನೆಯ ವಾರದಲ್ಲಿ ಡಿಕೆಶಿ ಜೈಲಿನಿಂದ ಹೊರ ಬಂದಿದ್ದರು. ನಂತರ ಆಸ್ಪತ್ರೆಗೆ ತೆರಳಿ ಬಿಪಿ,‌ ಶುಗರ್ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಈಗ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

Rajesh Duggumane | news18-kannada
Updated:November 12, 2019, 7:59 AM IST
DK Shivakumar Hospitalized: ಡಿಕೆ ಶಿವಕುಮಾರ್​ಗೆ ಮತ್ತೆ ಕಾಣಿಸಿಕೊಂಡ ಎದೆನೋವು; ಆಸ್ಪತ್ರೆಗೆ ದಾಖಲು
ಡಿ.ಕೆ ಶಿವಕುಮಾರ್
  • Share this:
ಬೆಂಗಳೂರು (ನ.12): ದಾಖಲೆ ರಹಿತ ಹಣ ಹೊಂದಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದಾಗ ಡಿಕೆ ಶಿವಕುಮಾರ್​ಗೆ ಎದೆನೋವು ಕಾಣಿಸಿಕೊಂಡಿತ್ತು. ಜೈಲಿನಿಂದ ಹೊರ ಬಂದ ನಂತರ ಅವರು ಕೊಂಚ ಚೇತರಿಕೆ ಕಂಡಿದ್ದರು. ಆದರೆ, ಈಗ ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೋಮವಾರ ಮಧ್ಯರಾತ್ರಿ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಡಿಕೆಶಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಇರಲಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿದ್ದಾಗ ಡಿಕೆಶಿ ಕೆಲ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಅಕ್ಟೋಬರ್​ ಕೊನೆಯ ವಾರದಲ್ಲಿ ಡಿಕೆಶಿ ಜೈಲಿನಿಂದ ಹೊರ ಬಂದಿದ್ದರು. ನಂತರ ಆಸ್ಪತ್ರೆಗೆ ತೆರಳಿ ಬಿಪಿ,‌ ಶುಗರ್ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಎರಡು ದಿನಗಳ ಆಸ್ಪತ್ರೆಯಲ್ಲೇ ಇರಬೇಕು ಎಂದು ವೈದ್ಯರು ಹೇಳಿದ್ದರು. ಆದರೆ, ಕನಕಪುರಕ್ಕೆ ಹೋಗುವ ಸಲುವಾಗಿ ಡಿಕೆಶಿ ಡಿಸ್ಚಾರ್ಜ್ ಆಗಿದ್ದರು. ಈಗ ಅವರಿಗೆ ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅವರ ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನೇ ತಿರಸ್ಕರಿಸಿದ ಡಿ.ಕೆ. ಶಿವಕುಮಾರ್; ಟ್ರಬಲ್ ಶೂಟರ್ ನಿರ್ಧಾರದ ಹಿಂದಿರುವ ರಹಸ್ಯವೇನು?

ಭೇಟಿಗೆ ಯಾರೂ ಬರಬೇಡಿ:

ಡಿಕೆ ಶಿವಕುಮಾರ್ ಅವರ ಭೇಟಿಗೆ ಯಾರು ಬರದಂತೆ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಡಿಕೆಶಿಗೆ ಕಡ್ಡಾಯ ವಿಶ್ರಾಂತಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಲ್ಲಿ ಕುಟುಂಬಸ್ಥರು ಈ ಮನವಿ ಮಾಡಿದ್ದಾರೆ.

ಪ್ರಕರಣ ಏನಾಗಿತ್ತು?ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್​ ಅವರಿಗೆ ಸೇರಿದ ಫ್ಲಾಟ್​ಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಹಾಗೂ ಆಪ್ತರ ಮನೆಗಳಲ್ಲಿ 8.59 ಕೋಟಿ ಹಣ ಜಪ್ತಿ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಇಡಿ ಅವರನ್ನು ವಶಕ್ಕೆ ಪಡೆದಿತ್ತು. ನಂತರ ಜಾಮೀನು ಪಡೆದು ಆಸ್ಪತ್ರೆಯಿಂದ ಹೊರ ಬಂದಿದ್ದರು.

(ವರದಿ: ಗಂಗಾಧರ್​)

First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ