HOME » NEWS » State » CONGRESS LEADER DINESH GUNDU RAO HITS OUT AT STATE GOVERNMENT ON CHAMARAJANAGAR OXYGEN TRAGEDY INCIDENT LG

Chamarajanagar Tragedy: ಈ ದುಷ್ಟ ಸರ್ಕಾರ ಇನ್ನೆಷ್ಟು ಜನರ ಬಲಿಗೆ ಕಾಯುತ್ತಿದೆ; ದಿನೇಶ್​ ಗುಂಡೂರಾವ್​ ಕಿಡಿ

ಜನ ಬೀದಿ ಬೀದಿಯಲ್ಲಿ ಸಾಯುತ್ತಿದ್ದರೂ ಈ ಸರ್ಕಾರ ಕರುಣೆ ಇಲ್ಲದಂತೆ ವರ್ತಿಸುತ್ತಿದೆ. ಇಂತಹ ಹೃದಯಹೀನ ಸರ್ಕಾರ ರಾಜ್ಯಕ್ಕೆ ಬೇಕೆ? ಎಂದು ಪ್ರಶ್ನಿಸಿದ್ದಾರೆ.

news18-kannada
Updated:May 3, 2021, 3:45 PM IST
Chamarajanagar Tragedy: ಈ ದುಷ್ಟ ಸರ್ಕಾರ ಇನ್ನೆಷ್ಟು ಜನರ ಬಲಿಗೆ ಕಾಯುತ್ತಿದೆ; ದಿನೇಶ್​ ಗುಂಡೂರಾವ್​ ಕಿಡಿ
ದಿನೇಶ್​ ಗುಂಡೂರಾವ್
  • Share this:
ಬೆಂಗಳೂರು(ಮೇ 03): ಚಾಮರಾಜನಗರ ಆಕ್ಸಿಜನ್ ದುರಂತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದು ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿದ್ದು, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಆಕ್ಸಿಜನ್ ಕೊರತೆಯಿಂದಾಗಿ 24 ಜನರು ಉಸಿರು ಚೆಲ್ಲಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ವಿಪಕ್ಷಗಳು ಬೆರಳು ಮಾಡಿ ತೋರಿಸುತ್ತಿವೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್​ ಈ ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್​ ಕೂಡ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ​ ದುರಂತ ಕುರಿತು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​  ಸಹ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಟ್ವೀಟ್​ ಮಾಡಿರುವ ಅವರು,  ಆಕ್ಸಿಜನ್ ಪೂರೈಕೆಯಾಗದೇ ಚಾಮರಾಜನಗರದಲ್ಲಿ ಒಂದೇ ದಿನ 24 ಜನ ಸಾವಿಗೀಡಾಗಿರುವುದು ಅತ್ಯಂತ ದೊಡ್ಡ ದುರಂತ. ಆಕ್ಸಿಜನ್ ಪೂರೈಸದ ರಾಜ್ಯ ಸರ್ಕಾರ ಈ ಸಾವಿನ ನೇರ ಹೊಣೆ ಹೊರಬೇಕು. ಜನ ಬೀದಿ ಬೀದಿಯಲ್ಲಿ ಸಾಯುತ್ತಿದ್ದರೂ ಈ ಸರ್ಕಾರ ಕರುಣೆ ಇಲ್ಲದಂತೆ ವರ್ತಿಸುತ್ತಿದೆ. ಇಂತಹ ಹೃದಯಹೀನ ಸರ್ಕಾರ ರಾಜ್ಯಕ್ಕೆ ಬೇಕೆ? ಎಂದು ಪ್ರಶ್ನಿಸಿದ್ದಾರೆ.

Chamarajanagar Oxygen Crisis: ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಯಡಿಯೂರಪ್ಪ; ಮಹತ್ವದ ನಿರ್ಧಾರ ಸಾಧ್ಯತೆ

ಪ್ರತಿ ಜಿಲ್ಲಾಸ್ಪತ್ರೆಗೂ ಆಕ್ಸಿಜನ್ ಪೂರೈಸುವ ಜವಾಬ್ಧಾರಿ ಸರ್ಕಾರದ ಮೇಲಿದೆ.
ಆದರೆ ಆಕ್ಸಿಜನ್ ಇರಲಿ, ರೋಗಿಗಳಿಗೆ ಒಂದು ಬೆಡ್ ಕೊಡುವ ಯೋಗ್ಯತೆಯೂ ಈ ಸರ್ಕಾರಕ್ಕಿಲ್ಲ. ಆಕ್ಸಿಜನ್‌ಗಾಗಿ ಮನವಿ ಸಲ್ಲಿಸಿದ್ದರೂ ಸರ್ಕಾರ ಚಾಮರಾಜನಗರಕ್ಕೆ ಆಕ್ಸಿಜನ್ ನೀಡದೆ ಜನರ ಸಾಮೂಹಿಕ ಹತ್ಯೆ ನಡೆಸಿದೆ. ಈ ದುಷ್ಟ ಸರ್ಕಾರ ಇನ್ನೆಷ್ಟು ಜನರ ಬಲಿಗೆ ಕಾಯುತ್ತಿದೆ? ಎಂದು ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಗುಡುಗಿದರು.


ಆರೋಗ್ಯ ಸಚಿವ ಸುಧಾಕರ್​ ವಿರುದ್ಧ ಗುಂಡೂರಾವ್​​ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜನಗರದ ದುರಂತಕ್ಕೆ ಕಾರಣ ಯಾರು ಎಂದು ಬಿಡಿಸಿ ಹೇಳಬೇಕಿಲ್ಲ. ಇದು ಸರ್ಕಾರಿ ಪ್ರಾಯೋಜಿತ ಹತ್ಯಾಕಾಂಡ ಎಂದು ಗಂಭೀರ ಆರೋಪ ಮಾಡಿದರು.ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್​ ಅವರ ವೈಫಲ್ಯದಿಂದ 24 ಜನರು ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ. ರಾಜ್ಯದ ಜನ ಕೊಲೆ ಪಾತಕ ಸರ್ಕಾರದ ದುಷ್ಟ ಆಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
Published by: Latha CG
First published: May 3, 2021, 3:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories