ನಂದೇ ಜನನ ಪ್ರಮಾಣ ಪತ್ರ ಇನ್ನೂ ಸಿಕ್ಕಿಲ್ಲ, ಅಂತದ್ರಲ್ಲಿ ಎಲ್ಲೋ ಹುಟ್ದೋರ್ಗೆ ಹೆಂಗಪ್ಪಾ ಕೊಡೋದು?; ಸಿ.ಎಂ.ಇಬ್ರಾಹಿಂ

ಈಗಾಗಲೇ ಮಂಗಳೂರಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದರು. 

ಸಿಎಂ ಇಬ್ರಾಹಿಂ

ಸಿಎಂ ಇಬ್ರಾಹಿಂ

  • Share this:
ಹುಬ್ಬಳ್ಳಿ(ಡಿ.22): ದೇಶದಲ್ಲಿ ಇಂದಿನ ಸ್ಥಿತಿ ಅತ್ಯಂತ ಗಂಭೀರವಾಗಿದೆ.  ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಜನ ಏಕಕಂಠದಿಂದ ಹೋರಾಡುತ್ತಿದ್ದಾರೆ. ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ  ಹಿಂಸಾಚಾರ ನಡೆಸುವುದು ಸರಿಯಲ್ಲ.  ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ತಾನು ಮಾಡಿರುವ ತಪ್ಪನ್ನು ತಿದ್ದಿಕೊಳ್ಳುವವರೆಗೂ ಈ ಪ್ರತಿಭಟನೆ ನಡೆಯಲಿದೆ. ಮುಸ್ಲಿಂ ಬಾಂಧವರಿಗೆ ಯಾವುದೇ ಹೆದರಿಕೆ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಅನುಭವ ಇಲ್ಲದೇ ಇರುವವರು ಅಧಿಕಾರಕ್ಕೆ ಬಂದರೆ ದೇಶದ ಸ್ಥಿತಿ ದುಸ್ಥಿತಿಗೆ ಬರಲಿದೆ. ಪ್ರಧಾನಿ ಮೋದಿಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸುತ್ತಾರೆ ಎಂದುಕೊಂಡಿದ್ದೆವು. ಆದರೆ ಈವರೆಗೂ ಮೋದಿಯವರು ಅಂತಹ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದರು.

ಮಂಗಳೂರಿನಲ್ಲಿ ಕರ್ಫ್ಯೂ ಪುನರಾರಂಭ; ನಾಳೆಯಿಂದ ಮತ್ತೆ ನಿಷೇಧಾಜ್ಞೆ

ನಾನು ರಾಣೆಬೆನ್ನೂರಿನಲ್ಲಿ ಜನಿಸಿದ್ದೇನೆ. ಆದರೆ ಈವರೆಗೂ ನನ್ನದೇ ಜನನ ಪ್ರಮಾಣ ಪತ್ರ ನನಗೆ ಸಿಕ್ಕಿಲ್ಲ. ಅಂತಹದರಲ್ಲಿ ಎಲ್ಲೋ ಜನಿಸಿದವರಿಗೆ ಜನ್ಮಪ್ರಮಾಣ ಕೇಳಿದರೆ ಎಲ್ಲಿಂದ ತರಬೇಕು. ಪಾಕಿಸ್ತಾನದಿಂದ ಲಕ್ಷಾಂತರ ಜನ ಈ ಹಿಂದೆಯೇ ದೇಶಕ್ಕೆ ಬಂದಿದ್ದಾರೆ. ಆದರೆ ಇದೀಗ ಏಕಾಏಕಿ ಈ ರೀತಿಯ ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ. ನಮಗೆ ಇಲ್ಲೇ ಖಬರಸ್ಥಾನ ಇದೆ, ಸತ್ತವರಿಗೇ ಇಲ್ಲಿ ಜಾಗ ಸಿಗುತ್ತಿಲ್ಲ. ಅಂತಹದರಲ್ಲಿ ಹುಟ್ಟಿದ್ದು ಎಲ್ಲಿ ಅಂತಾ ದಾಖಲೆ ಕೇಳಿದರೆ ಎಲ್ಲಿಂದ ತರೋದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಮಂಗಳೂರಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾಗಿದ್ದಾರೆ. ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ ಎಂದರು.

ನಾಳೆ ಪೌರತ್ವ ಕಾಯ್ದೆ ವಿರುದ್ಧ ಸೌಹಾರ್ದ ಕಾರ್ಯಕ್ರಮ; ಒಂದು ಲಕ್ಷ ಮಂದಿ ಭಾಗಿ ಸಾಧ್ಯತೆ; ಬಿಗಿ ಪೊಲೀಸ್​​ ಬಂದೋಬಸ್ತ್​​​​

ಅಖಂಡ ಭಾರತ‌ ಆಗಬೇಕು‌. ಭಾರತ ಇಬ್ಬಾಗವಾಗಿರುವುದು ದುರ್ದೈವ. ನಾನು‌ ಅಖಂಡ ಭಾರತದ ಕನಸು ಕಾಣುತ್ತಿದ್ದೇನೆ. ಅಖಂಡ ಭಾರತ ಆಗಲಿ ಎಂದು ಆಸೆ ಪಡುತ್ತಿರುವ ಏಕೈಕ ವ್ಯಕ್ತಿ ನಾನು. ಈ ಹಿಂದೆ ಆರ್ ಎಸ್ ಎಸ್ ನವರು ಅಖಂಡ ಭಾರತದ ಬಗ್ಗೆ ಮಾತನಾಡುತ್ತಿದ್ದರು. ಆದರೆ ಇತ್ತೀಚೆಗೆ ಅದನ್ನು ಕೈಬಿಟ್ಟರು. ಸಿಎಎ ಬಗ್ಗೆ ಅಮಿತ್​​ ಶಾ ಸ್ಪಷ್ಟಪಡಿಸುತ್ತಿಲ್ಲ. ಅಮಿತ್​​​ ಶಾ ಅವರು ಅರ್ಧಂಬರ್ಧ ಮಾಹಿತಿ ನೀಡುತ್ತಿದ್ದಾರೆ. ಸಿಎಎ ಬಗ್ಗೆ ಕೂಲಂಕುಶವಾಗಿ ಚರ್ಚೆ ಮಾಡಿ. ರೊಹಿಂಗ್ಯಾಗಳಿಗೂ ನನಗೆ ಸಂಬಂಧವಿಲ್ಲ. ಬೇರೆ ದೇಶದ ಚಿಂತೆ ನಮಗೆ ಬೇಡ. ನಮ್ಮ ದೇಶದಲ್ಲಿ ಏನಾಗುತ್ತಿದೆ ಎಂಬುದು ಮುಖ್ಯ ಎಂದು ಹೇಳಿದರು.

 
Published by:Latha CG
First published: