ಸಿಎಎ, ಎನ್‌ಸಿಆರ್ ಒಪ್ಪುತ್ತೇವೆ ಎಂದು ಎಲ್​.ಕೆ.ಅಡ್ವಾಣಿ ಬಂದು ಹೇಳಲಿ; ಸಿಎಂ ಇಬ್ರಾಹಿಂ ಸವಾಲು

ರಾಜ್ಯ ಸಚಿವ ಸಂಪುಟ ವಿಚಾರ ಕುರಿತು ತಮ್ಮದೇ ಶೈಲಿಯಲ್ಲಿ ಟೀಕಿಸಿದ ಅವರು, ಹಳೆಯ ಪಟ್ಟದ ವೈಶ್ಯೆಯರು ಹಾಗೂ ಹೊಸ ಪತಿವ್ರತೆಯರ ಮಧ್ಯೆ ಜಗಳ ನಡೆಯುತ್ತಿದೆ. ಹೊಸ ಹುಡುಗಿನ ಕೊಟ್ಟರೆ, ಹಳೆಯವರು ಕಾಯುತ್ತ ಕೂಡುವ ಹಾಗಿದೆ. ಇವರೆಲ್ಲ ಮೊದಲು ನಮ್ಮಲ್ಲಿ ಇದ್ದರು. ಇಂಥ ಪತಿವ್ರತೆಯರನ್ನು ನಮ್ಮಲ್ಲಿ ಸುಧಾರಿಸಿಕೊಳ್ಳಲು ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ.

  • Share this:
ವಿಜಯಪುರ: ಸಿಎಎ. ಎನ್​ಆರ್​ಸಿ​ ಮತ್ತು ಎನ್​ಪಿಆರ್​ ಜಾರಿಗೆ ಮಾಜಿ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಸಿ. ಎಂ. ಇಬ್ರಾಹಿಂ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮ್ಮದೇ ಧಾಟಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್​ಆರ್​ಸಿಗೆ ಇಡೀ ಭಾರತದ ವಿರೋಧವಿದೆ. ಇದರ ರಿಪೋರ್ಟ್ ಬೇಕಿದ್ದರೆ ಸಬ್​ಇನ್ಸ್​ಪೆಕ್ಟರ್ ಅಥವಾ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಪಡೆಯಬಹುದು. ಕಾಂಗ್ರೆಸ್, ಜನತಾದಳದವರನ್ನು ಕೇಳಬೇಡಿ. ಅಡ್ವಾನಿ ಅವರ ಮನೆಗೆ ಹೋಗ್ರಿ, ನಿವೃತ್ತ ನ್ಯಾಯಾಧೀಶ ರ ಮನೆಗೆ ಹೋಗಿ ಅವರಿಗೆ ಕೇಳಿ. ಅವರೂ ಕೂಡ ಸಿಎಎ, ಎನ್​ಆರ್​ಸಿಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ವ್ಯಂಗ್ಯವಾಗಿ ಹೇಳಿದರು.

ನೋಟು ನಿಷೇಧ ಮಾಡಿದ್ದು ಕೂಡ ಅನುಮಾನ ಇದೆ. ಅದು ಅರುಣ ಜೇಟ್ಲಿಗೂ ಗೊತ್ತಿರಲಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಖ ನೋಡಿದರೆ ಸಿಟ್ಟಾಗುತ್ತಿರುವ ಅತ್ತೆ ತರಹ ಕಾಣ್ತಾರೆ. ಇಂದು ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ತಾಯಿ ಇದರ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದರು.

ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಬಗ್ಗೆ ಅಡ್ವಾನಿಯವರು ಹೇಳಲಿ ಜನ ನಂಬುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಂಬಿದ್ದೇವು. ಅವರಿಗೆ ದೇಶದ ಚಿಂತೆ ಇತ್ತು. ಆದರೆ ಈಗ ಇವರಿಗೆ ದೇಶದ ಚಿಂತೆ ಇಲ್ಲ. ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದೆ.  ಏಪ್ರಿಲ್‌, ಮೇ ನಂತರ ದೇಶದಲ್ಲಿ ಆಹಾರಕ್ಕಾಗಿ ಹಾಹಾಕಾರ ಶುರುವಾಗುತ್ತೆ. ಯಡಿಯೂರಪ್ಪ ಮೋದಿ ನೋಡಿದರೆ ಗಡಗಡ ಅಂತಾ ನಡುಗುತ್ತಾರೆ ಎಂದು ಅವರು ಟೀಕಿಸಿದರು.

ರಾಜ್ಯ ಸಚಿವ ಸಂಪುಟ ವಿಚಾರ ಕುರಿತು ತಮ್ಮದೇ ಶೈಲಿಯಲ್ಲಿ ಟೀಕಿಸಿದ ಅವರು, ಹಳೆಯ ಪಟ್ಟದ ವೈಶ್ಯೆಯರು ಹಾಗೂ ಹೊಸ ಪತಿವ್ರತೆಯರ ಮಧ್ಯೆ ಜಗಳ ನಡೆಯುತ್ತಿದೆ. ಹೊಸ ಹುಡುಗಿನ ಕೊಟ್ಟರೆ, ಹಳೆಯವರು ಕಾಯುತ್ತ ಕೂಡುವ ಹಾಗಿದೆ. ಇವರೆಲ್ಲ ಮೊದಲು ನಮ್ಮಲ್ಲಿ ಇದ್ದರು. ಇಂಥ ಪತಿವ್ರತೆಯರನ್ನು ನಮ್ಮಲ್ಲಿ ಸುಧಾರಿಸಿಕೊಳ್ಳಲು ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ತೀನ್ ತಲಾಕ್ ಆಯಿತು, ಕಾಶ್ಮೀರ್, ಬಾಬ್ರಿ ಮಸೀದಿ ಎಲ್ಲ ಬಿಜೆಪಿಯ ಪ್ರಯೋಗಗಳು ಮುಗಿದವು.  ಪ್ರಧಾನಿ ಹಾಗೂ ಅಮಿತ್ ಶಾ ಅವರಿಗೆ ಗೌರವದಿಂದ ಪ್ರಶ್ನೆ ಮಾಡುತ್ತೇವೆ.  ಇಂದು ದೇಶದಲ್ಲಿ ಜನ ಭಯದ ವಾತಾವರಣದಲ್ಲಿ ಇದ್ದಾರೆ. ಈ ದೇಶದ ಮಣ್ಣಿನ ಗುಣದಲ್ಲಿ ಸರ್ವಾಧಿಕಾರಿ ಆಡಳಿತವನ್ನು ಭಾರತ ಮಾತೆ ಸಹಿಸುವುದಿಲ್ಲ. ಮೋದಿ ಅವರು ಬಂದ ಮೇಲೆ ಸಾಲದ ಪ್ರಮಾಣ ಕೂಡ ಹೆಚ್ಚಾಗಿದೆ. ಸಂಸದ ಜಿಗಜಿಣಗಿ ಹಾಗೂ ಡಿಸಿಎಂ ಕಾರಜೋಳ ಅವರು ಅವರ ತಂದೆಯ ಬರ್ತ್ ಸರ್ಟಿಫಿಕೇಟ್ ಎಲ್ಲಿಂದ ಕೊಡುತ್ತಾರೆ? ಎಂದು ಪ್ರಶ್ನಿಸಿದ ಅವರು, ಎನ್​ಆರ್​ಸಿ ಕಾಯ್ದೆ ಕುರಿತು ಮೋದಿ ಹಾಗೂ ಅಮಿತ್ ಶಾ ಹೇಳುವ ಹೇಳಿಕೆಗಳು ಬೇರೆ ಬೇರೆಯದ್ದೆ ಆಗಿದೆ. ಅವರು ಮಾತನಾಡಿಕೊಂಡು ಈ ನಿರ್ಣಯ ಮಾಡಿಲ್ಲ. ಆದಿತ್ಯ ರಾವ್ ಬಾಂಬ್ ಇಟ್ಟಿದ್ದು ಒಂದು ದಿನ ಮಾಧ್ಯಮದಲ್ಲಿ ಬಂತು.  ಅದು ಬೇರೆ ಯಾರಾದರೂ ಮುಸ್ಲಿಂ ಇಟ್ಟಿದ್ದರೆ ಪಾಕಿಸ್ತಾನಿ, ಭಯೋತ್ಪಾದಕ ಎಂದೆಲ್ಲ ಬರುತ್ತಿತ್ತು ಎಂದು ಆರೋಪಿಸಿದರು. ಅನಂತಕುಮಾರ ಹೆಗಡೆ ಗಾಂಧೀಜಿ ಬಗ್ಗೆ ಮಾತನಾಡುತ್ತಾರೆ. ಗೋಡ್ಸೆ ಮುರ್ದಾಬಾದ್ ಎಂದು ಪಾರ್ಲಿಮೆಂಟ್ ನಲ್ಲಿ ಹೇಳಲು ಆಗತ್ತಾ ನಿಮಗೆ? ಎಂದು ಪ್ರಶ್ನಿಸಿದರು.

ಇದನ್ನು ಓದಿ: ಮೋದಿ ಆಡಳಿತದಲ್ಲಿ ಹೆಚ್ಚಾದ ಜಾತಿ, ಜನಾಂಗ ಘರ್ಷಣೆ; ಸಿಎಎ ವಿರೋಧಿ ಹೋರಾಟದಲ್ಲಿ ಎಚ್.ಡಿ.ದೇವೇಗೌಡ ಗುಡುಗು

 
First published: