ಜನ ಸಂಪೂರ್ಣ ಬದಲಾಗಿದ್ದಾರೆ, ಕೆ.ಆರ್​.ಪೇಟೆಯಲ್ಲಿ ಕಾಂಗ್ರೆಸ್​ ಗೆದ್ದೇ ಗೆಲ್ಲುತ್ತದೆ; ಮಾಜಿ ಸಚಿವ ಚೆಲುವರಾಯಸ್ವಾಮಿ

ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಜನರ ಕ್ಷಮೆಯಾಚಿಸಬೇಕು. ಮಂಡ್ಯ ಜನರ ಸಂಕಷ್ಟಕ್ಕೆ ಜೆಡಿಎಸ್ ಕಾರಣ. ಯಾಕೆಂದರೆ ಮಂಡ್ಯದಲ್ಲಿ 2 ಸಕ್ಕರೆ ಕಾರ್ಖಾನೆಗಳು ಸ್ಥಗಿತ ಆಗಿವೆ. ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಕೊಡಲಿಲ್ಲ. ಚುನಾವಣೆಗೆ ಮುನ್ನ ಬಿಡುಗಡೆ ಮಾಡಿದ್ದ ಎಂಟೂವರೆ ಸಾವಿರ ಕೋಟಿ ಹಣಕ್ಕೆ ದಾಖಲೆ ನೀಡಬೇಕು.  ಲೋಕಸಭೆ ಸೋಲಿನ ಬಳಿಕ ಮಂಡ್ಯ ಮರೆತದ್ದು ಯಾಕೆ ಅಂತಾ ಹೇಳಬೇಕು

Latha CG | news18-kannada
Updated:November 23, 2019, 5:34 PM IST
ಜನ ಸಂಪೂರ್ಣ ಬದಲಾಗಿದ್ದಾರೆ, ಕೆ.ಆರ್​.ಪೇಟೆಯಲ್ಲಿ ಕಾಂಗ್ರೆಸ್​ ಗೆದ್ದೇ ಗೆಲ್ಲುತ್ತದೆ; ಮಾಜಿ ಸಚಿವ ಚೆಲುವರಾಯಸ್ವಾಮಿ
ಚೆಲುವರಾಯಸ್ವಾಮಿ
  • Share this:
ಮಂಡ್ಯ(ನ.23): ಉಪಚುನಾವಣೆಗೆ ದಿನಗಣನೆ ಶುರುವಾಗಿದೆ. ಹೈವೋಲ್ಟೇಜ್​ ಕ್ಷೇತ್ರವಾಗಿರುವ ಕೆ.ಆರ್. ಪೇಟೆಯಲ್ಲಿ ಕಾಂಗ್ರೆಸ್​​-ಬಿಜೆಪಿ ನೇರ ಹಣಾಹಣಿ ಇದೆ. ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್​ನಿಂದ ಕೆ.ಬಿ.ಚಂದ್ರಶೇಖರ್​ ಸ್ಪರ್ಧೆ ಮಾಡುತ್ತಿದ್ದಾರೆ. ಕೆ.ಆರ್​.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್​​ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಸಚಿವ ಚೆಲುವರಾಯಸ್ವಾಮಿ ಕೈ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

"ಕೆ.ಆರ್.ಪೇಟೆ ಜನ ತುಂಬಾ ಪ್ರಜ್ಞಾವಂತರು. ಕಳೆದ ಚುನಾವಣೆಯಂತ ವಾತಾವರಣ ಈಗ ಇಲ್ಲ. ಈ ಚುನಾವಣೆಯಲ್ಲಿ ಜನ ಸಂಪೂರ್ಣ ಬದಲಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಕನಿಷ್ಠ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಹಣದ ಕೊರತೆಯಿರಬಹುದು ಆದರೆ ಪ್ರಚಾರದಲ್ಲಿ ಹಿಂದುಳಿದಿಲ್ಲ," ಎಂದು ಹೇಳಿದ್ಧಾರೆ.

ಮಹಾರಾಷ್ಟ್ರದಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಶುರು; ಜೈಪುರ, ಭೋಪಾಲ್​ನತ್ತ ಮುಖ ಮಾಡಿದ ಶಿವಸೇನಾ, ಕಾಂಗ್ರೆಸ್ ಶಾಸಕರು

ಕೈ ಅಭ್ಯರ್ಥಿ ಜೊತೆ ಪ್ರಚಾರ ನಡೆಸದ ಆರೋಪಕ್ಕೆ ಸ್ಪಷ್ಟನೆ ನೀಡಿದ ಚೆಲುವರಾಯಸ್ವಾಮಿ, "ನಾಗಮಂಗಲದಲ್ಲಿ ಭೀಕರ ಅಪಘಾತವಾಗಿತ್ತು. ಆ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದರು. ಹೀಗಾಗಿ ಅಲ್ಲಿದ್ದ ಕಾರಣ ಪ್ರಚಾರದಲ್ಲಿ ಭಾಗಿಯಾಗಿಲ್ಲ.  ಮೊನ್ನೆ ಸಿದ್ದರಾಮಯ್ಯನವರ ಜೊತೆ ಪ್ರಚಾರ ಮಾಡಿದ್ದೆವು. ನಾಳೆಯಿಂದ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ," ಎಂದು ಹೇಳಿದರು.

ಇದೇ ವೇಳೆ, ಎಚ್​ಡಿಕೆ ವಿರುದ್ಧ ಚೆಲುವರಾಯಸ್ವಾಮಿ ಕಿಡಿಕಾರಿದರು." ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯ ಜನರ ಕ್ಷಮೆಯಾಚಿಸಬೇಕು. ಮಂಡ್ಯ ಜನರ ಸಂಕಷ್ಟಕ್ಕೆ ಜೆಡಿಎಸ್ ಕಾರಣ. ಯಾಕೆಂದರೆ ಮಂಡ್ಯದಲ್ಲಿ 2 ಸಕ್ಕರೆ ಕಾರ್ಖಾನೆಗಳು ಸ್ಥಗಿತ ಆಗಿವೆ. ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಕೊಡಲಿಲ್ಲ. ಚುನಾವಣೆಗೆ ಮುನ್ನ ಬಿಡುಗಡೆ ಮಾಡಿದ್ದ ಎಂಟೂವರೆ ಸಾವಿರ ಕೋಟಿ ಹಣಕ್ಕೆ ದಾಖಲೆ ನೀಡಬೇಕು.  ಲೋಕಸಭೆ ಸೋಲಿನ ಬಳಿಕ ಮಂಡ್ಯ ಮರೆತದ್ದು ಯಾಕೆ ಅಂತಾ ಹೇಳಬೇಕು?," ಎಂದು ಚೆಲುವರಾಯಸ್ವಾಮಿ ಆಗ್ರಹಿಸಿದರು.

ನಾರಾಯಣಗೌಡ-ವಿಜಯೇಂದ್ರ ಜೋಡೆತ್ತುಗಳು; ಕೆ.ಆರ್.ಪೇಟೆ ಜನ ಕೈ ಬಿಡಬೇಡಿ; ನಳಿನ್​ಕುಮಾರ್​​ ಕಟೀಲ್​

First published: November 23, 2019, 5:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading