ಕೆ.ಆರ್.ಪೇಟೆ ಸೋಲು ಜನರ ಸುಪ್ರೀಂ ತೀರ್ಮಾನ; ಮಾಜಿ ಸಚಿವ ಚೆಲುವರಾಯಸ್ವಾಮಿ

ಸಿದ್ದರಾಮಯ್ಯನವರ ರಾಜೀನಾಮೆ ವಿಚಾರವಾಗಿ, ಅದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದರು.

news18-kannada
Updated:December 10, 2019, 4:40 PM IST
ಕೆ.ಆರ್.ಪೇಟೆ ಸೋಲು ಜನರ ಸುಪ್ರೀಂ ತೀರ್ಮಾನ; ಮಾಜಿ ಸಚಿವ ಚೆಲುವರಾಯಸ್ವಾಮಿ
ಚೆಲುವರಾಯಸ್ವಾಮಿ
  • Share this:
ಬೆಂಗಳೂರು(ಡಿ.10): ಕೆ.ಆರ್​.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಭರ್ಜರಿ ಗೆಲುವು ಸಾಧಿಸಿದರೆ, ಕಾಂಗ್ರೆಸ್​ ಹೀನಾಯ ಸೋಲು ಅನುಭವಿಸಿತು. ಮಾಜಿ ಸಚಿವ, ಕೈ ಮುಖಂಡ ಚೆಲುವರಾಯಸ್ವಾಮಿ ಕೆ.ಆರ್​.ಪೇಟೆ ಸೋಲನ್ನು ಜನರ ತೀರ್ಮಾನ ಎಂದು ಹೇಳಿದ್ದಾರೆ. 

ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಭೇಟಿ ಮಾಡಿದ ಚೆಲುವರಾಯಸ್ವಾಮಿ, ಬಳಿಕ ಮಾಧ್ಯಮಗೊಳೊಂದಿಗೆ ಮಾತನಾಡಿದರು. "ಕೆ.ಆರ್.ಪೇಟೆ ಸೋಲು ಜನರ ಸುಪ್ರೀಂ ತೀರ್ಮಾನ. ಅವರೇ ಸುಪ್ರೀಂ ಆಗಿ ತೀರ್ಮಾನ ನೀಡಿದ್ದಾರೆ. ಅದನ್ನು ನಾವು ಪ್ರಶ್ನೆ ಮಾಡಲು ಆಗಲ್ಲ. ಜನತಾ ತೀರ್ಮಾನ ಒಪ್ಪಿಕೊಳ್ಳಬೇಕಾಗುತ್ತದೆ," ಎಂದರು.

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಬೆನ್ನಲ್ಲೇ ಕೆಸಿ ವೇಣುಗೋಪಾಲ್ ಕೂಡ ರಾಜೀನಾಮೆಗೆ ನಿರ್ಧಾರ

ಸಿದ್ದರಾಮಯ್ಯ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ನಮ್ಮ ನಾಯಕರಿದ್ದಾರೆ. ಅವರ ಭೇಟಿಗೆ ಕಾರಣ ಬೇಕಾಗಿಲ್ಲ ಎಂದು ಹೇಳಿದರು. ಇದೇ ವೇಳೆ,  ಸಿದ್ದರಾಮಯ್ಯನವರ ರಾಜೀನಾಮೆ ವಿಚಾರವಾಗಿ, ಅದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದರು.

ಮತ್ತೆ ಮೈತ್ರಿ ವಿಚಾರ ಹಿನ್ನಡೆ ಕಾರಣವಾಯ್ತಾ? ಎಂಬ ಪ್ರಶ್ನೆಗೆ, ಪಕ್ಷದಲ್ಲಿ ದೊಡ್ಡವರಿದ್ದಾರೆ, ಅವರೆಲ್ಲಾ ನೋಡಿಕೊಳ್ಳುತ್ತಾರೆ. ಅದರ ಬಗ್ಗೆ ನಾನು  ಪ್ರತಿಕ್ರಿಯೆ ನೀಡಲ್ಲ. ಅವರೆಲ್ಲಾ ನೋಡಿಕೊಳ್ಳುತ್ತಾರೆ. ದೊಡ್ಡವರ ವಿಚಾರಕ್ಕೆ ನಾನು ಮಾತನಾಡುವುದು ಸೂಕ್ತವಲ್ಲ. ಎಲ್ಲದನ್ನೂ ಜನರೇ ಈಗ  ತೀರ್ಮಾನ ಮಾಡಿದ್ದಾರೆ ಎಂದರು.

ಹೆಣ್ಮಕ್ಕಳ ಸುರಕ್ಷತೆಗೆ ಗದಗ ಪೊಲೀಸರ ಹೊಸ ಹೆಜ್ಜೆ; ಒಂದು ಕರೆ ಮಾಡಿದರೆ ಸಾಕು ಸೇಫ್​ ಆಗಿ ಮನೆ ಸೇರಬಹುದು
First published:December 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ