ರೇವಣ್ಣ ಒಬ್ಬ ರಾಜಕಾರಣಿನಾ? ಅವನಿಗೆ ಸಂಸ್ಕೃತಿ‌ ಇದೆಯಾ?; ಚೆಲುವರಾಯಸ್ವಾಮಿ ವಾಗ್ದಾಳಿ

ಅದೆಲ್ಲಾ ಬಿಟ್ಟು ಮಂಡ್ಯದಲ್ಲಿ ರಾಜಕಾರಣ ಮಾಡೋಕೆ ಬರ್ತಾರೆ. ಕೆ.ಆರ್‌.ಪೇಟೆಗೂ ಇವರಿಗೂ ಏನು ಸಂಬಂಧ? ಇವನು ಯಾರು? ಮಾತು ಎತ್ತಿದರೆ ನನ್ನ ತಮ್ಮನಿಗೆ ಹೇಳಿದ್ದೀನಿ ಅಂತಾನೆ. ದೇವೇಗೌಡರ ಮಗ ಕುಮಾರಸ್ವಾಮಿ ಅಣ್ಣ ಅನ್ನೋದೆ ಅವನ ಕ್ವಾಲಿಫಿಕೇಷನ್. ಮಣ್ಣಿನ‌ ಮಗ ಅಂತಾನೆ. ಆದರೆ ಇವನಿಗೆ ವ್ಯವಸಾಯ ಬೇಡ, ಪಶುಸಂಗೋಪನೆ ಬೇಡ, ಸಣ್ಣ ನೀರಾವರಿ ಬೇಡ. ಕೇವಲ ಪಿಡಬ್ಲೂಡಿ ಬೇಕು ಅಂತಾನೆ, ಇವನು ಒಬ್ಬ ರಾಜಕಾರಣಿನಾ..?- ಚೆಲುವರಾಯಸ್ವಾಮಿ

Latha CG | news18-kannada
Updated:December 2, 2019, 5:58 PM IST
ರೇವಣ್ಣ ಒಬ್ಬ ರಾಜಕಾರಣಿನಾ? ಅವನಿಗೆ ಸಂಸ್ಕೃತಿ‌ ಇದೆಯಾ?; ಚೆಲುವರಾಯಸ್ವಾಮಿ ವಾಗ್ದಾಳಿ
ಚೆಲುವರಾಯಸ್ವಾಮಿ
  • Share this:
ಮಂಡ್ಯ(ಡಿ.02): ಯಾರ ಜೊತೆ ಬೇಕಾದರೂ ಮೈತ್ರಿ ಆಗುವ ಅವಕಾಶ ಇರುವುದು ಜೆಡಿಎಸ್​ಗೆ ಮಾತ್ರ. ಜೆಡಿಎಸ್​ನವರು ಕಾಂಗ್ರೆಸ್​​-ಬಿಜೆಪಿ ಎರಡು ಕಡೆ ಮಾತನಾಡುತ್ತಾರೆ. ಜೆಡಿಎಸ್​ನವರುಗೆ ಇನ್ನೂ ಯಾರ ಜೊತೆ ಹೋಗಬೇಕು ಎಂಬ ಸ್ಪಷ್ಟತೆ ಇಲ್ಲ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೆ.ಆರ್​.ಪೇಟೆಯಲ್ಲಿ  ಪ್ರಚಾರದ ವೇಳೆ ಮಾತನಾಡಿದ ಅವರು, ಜೆಡಿಎಸ್​ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವಕಾಶವಾದಿ ರಾಜಕಾರಣದ ರೀತಿ ಜೆಡಿಎಸ್​​ನವರು ನಡೆದುಕೊಳ್ಳುತ್ತಿದ್ದಾರೆ. ಡಿ.9ರ ನಂತರ ಫಲಿತಾಂಶ ವ್ಯತ್ಯಾಸವಾದರೆ ಮೈತ್ರಿ ವಿಚಾರ ಪ್ರಸ್ತಾಪಕ್ಕೆ ಬರುತ್ತದೆ. ಅದು ಕೂಡ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಪ್ಪಂದ ಮಾಡಿಕೊಂಡಿಲ್ಲ ಎಂದು ಚೆಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ಇದೇ ವೇಳೆ ಚೆಲುವರಾಯಸ್ವಾಮಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. "ರೇವಣ್ಣ ಒಬ್ಬ ರಾಜಕಾರಣಿನಾ? ಅವನಿಗೆ ಸಂಸ್ಕೃತಿ‌ ಇದೆಯಾ? ಒಬ್ಬ ಮಾಜಿ ಪ್ರಧಾನಿ ಮಗನಾಗಿ ಹೇಗೆ ನಡೆದುಕೊಳ್ಳಬೇಕು ಅಂತಾ ಅವನಿಗೆ ಗೊತ್ತಿಲ್ಲ. ಮಾತು ಎತ್ತಿದರೆ ಪಿಡಬ್ಲೂಡಿ ಅಂತಾನೆ," ಎಂದು ಏಕವಚನದಲ್ಲೇ ಹಿಗ್ಗಾಮುಗ್ಗಾ ಜಾಡಿಸಿದರು.

ಯಶವಂತಪುರದಲ್ಲಿ ಕಾಂಗ್ರೆಸ್​ಗೆ ಠೇವಣಿ ಕೂಡ ಸಿಗಲ್ಲ: ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್

"ಅದೆಲ್ಲಾ ಬಿಟ್ಟು ಮಂಡ್ಯದಲ್ಲಿ ರಾಜಕಾರಣ ಮಾಡೋಕೆ ಬರ್ತಾರೆ. ಕೆ.ಆರ್‌.ಪೇಟೆಗೂ ಇವರಿಗೂ ಏನು ಸಂಬಂಧ? ಇವನು ಯಾರು? ಮಾತು ಎತ್ತಿದರೆ ನನ್ನ ತಮ್ಮನಿಗೆ ಹೇಳಿದ್ದೀನಿ ಅಂತಾನೆ. ದೇವೇಗೌಡರ ಮಗ ಕುಮಾರಸ್ವಾಮಿ ಅಣ್ಣ ಅನ್ನೋದೆ ಅವನ ಕ್ವಾಲಿಫಿಕೇಷನ್. ಮಣ್ಣಿನ‌ ಮಗ ಅಂತಾನೆ. ಆದರೆ ಇವನಿಗೆ ವ್ಯವಸಾಯ ಬೇಡ, ಪಶುಸಂಗೋಪನೆ ಬೇಡ, ಸಣ್ಣ ನೀರಾವರಿ ಬೇಡ. ಕೇವಲ ಪಿಡಬ್ಲೂಡಿ ಬೇಕು ಅಂತಾನೆ, ಇವನು ಒಬ್ಬ ರಾಜಕಾರಣಿನಾ..?," ಎಂದು ಟೀಕಿಸಿದರು.

"ಬಿಜೆಪಿ-ಜೆಡಿಎಸ್ 20ತಿಂಗಳ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ವಿಶ್ವಾಸ ಮತಯಾಚನೆ ವೇಳೆ ರೇವಣ್ಣ ಮತ ಹಾಕಲು ಬರಲಿಲ್ಲ ಹೊಳೆನರಸೀಪುರದಲ್ಲಿ ಹೋಗಿ ಕುಳಿತಿದ್ದರು. ನಂತರ ಹಿಂಬಾಗಿಲಿನಿಂದ ಬಂದು ಮಂತ್ರಿ ಆದವನು ರೇವಣ್ಣ. ನಮ್ಮ ನಾಯಕರ ಮಗ, ನನ್ನ ಸ್ನೇಹಿತ ಸಹೋದರ. ಇದಕ್ಕೆ ನಾನು ಗೌರವ ಕೊಡುತ್ತಿದ್ದೆ. ಅವನು ಯಾವ ರಾಜಕಾರಣಿನೂ ಅಲ್ಲ, ಯಾವ ನಾಯಕನೂ ಅಲ್ಲ," ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್​​​ಗೆ ಐಟಿ ನೋಟಿಸ್ ವಿಚಾರವಾಗಿ, "ಡಿಕೆಶಿ ದೆಹಲಿ ತೆರಳಿದ್ದರಿಂದ ಪ್ರಚಾರ ರದ್ದಾಗಿದೆ. ಚುನಾವಣೆ ವೇಳೆ ಬಿಗಿ ಹಿಡಿಯುವ ಉದ್ದೇಶದಿಂದ ಡಿಕೆಶಿಗೆ ನೋಟಿಸ್ ನೀಡಿದ್ದಾರೆ ಎನಿಸುತ್ತಿದೆ ಎಂದರು.ಚುನಾವಣೆ ಹೊತ್ತಲ್ಲೇ ಜಾರ್ಖಂಡ್ ಬಿಜೆಪಿಗೆ ಶಾಕ್; ಪ್ರವೀಣ್ ಪ್ರಭಾಕರ್ ರಾಜೀನಾಮೆ; ಆತ್ಮಾವಲೋಕನಕ್ಕೆ ಸಲಹೆ ನೀಡಿ ಪಕ್ಷ ಬಿಟ್ಟ ನಾಯಕ

ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.  15ಕ್ಷೇತ್ರಗಳಲ್ಲೂ ಮೂರು ಪಕ್ಷಗಳು ಬಿರುಸಿನ ಪ್ರಚಾರ ಮಾಡುತ್ತಿವೆ. ಫಲಿತಾಂಶ ಬಳಿಕ ಏನು ನಿರ್ಧಾರ ಎನ್ನುವ ಚರ್ಚೆ ಶುರುವಾಗಿದೆ. ಆದರೆ ಈಗ ಒಪ್ಪಂದದ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಅದರಲ್ಲೂ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ನಾವು ಜೆಡಿಎಸ್‌ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಈಗ ಈಗ ಬಿಜೆಪಿ ಸ್ವಲ್ಪ ಮಟ್ಟದ ಪೈಪೋಟಿ ಕೊಡಲು ಮುಂದಾಗಿದೆ. ಕೆಆರ್ ಪೇಟೆಯಲ್ಲಿ ಜೆಡಿಎಸ್‌-ಕಾಂಗ್ರೆಸ್ ನಡುವೆ ಪೈಪೋಟಿ ಇದೆ. ಕಾಂಗ್ರೆಸ್-ಜೆಡಿಎಸ್ ಒಪ್ಪಂದ ಮಾಡಿಕೊಂಡು ಚುನಾವಣೆ ಮಾಡ್ತಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಕೆ.ಆರ್. ಪೇಟೆಯಲ್ಲಿ ನಾವು ಪ್ರಮಾಣಿಕವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಇಲ್ಲಿ ಯಾವುದೇ ಒಪ್ಪಂದ ಆಗಿಲ್ಲ ಎಂದರು.

ಕೆ.ಬಿ ಚಂದ್ರಶೇಖರ್ ಯೋಗ್ಯ ಅಭ್ಯರ್ಥಿ, ಅಧಿಕಾರ ಸಿಕ್ಕಾಗ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೆಲ್ಲರೂ ನಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿ ಹೋಗಿದ್ದಾರೆ. ಈ ಬಾರಿ ಕೆಆರ್ ಪೇಟೆಯಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ. ಹಿಂದೆ ಸಿದ್ದರಾಮಯ್ಯ ಕೊಟ್ಟ ಯೋಜನೆಗಳನ್ನು ಯಾರೂ ಮರೆತಿಲ್ಲ. ಹೇಳಿದ ಮಾತಿನಂತೆ ನಡೆದುಕೊಂಡ ಸರ್ಕಾರವಿದ್ದರೆ, ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಎಲ್ಲಾ ವರ್ಗದ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ದುಡಿದಿದ್ದಾರೆ. ನಮ್ಮ ಅಭ್ಯರ್ಥಿ ಚಂದ್ರಶೇಖರ್ ಚಂದ್ರಶೇಖರ್ ಈ ಬಾರಿ ಗೆದ್ದೆ ಗೆಲ್ಲುತ್ತಾರೆ. ನಾವು ಯಾವದೇ ಆಮಿಷಗಳಿಗೆ ಬಲಿಯಾಗಲ್ಲ ಎಂದು ಜನರು ಈ ಚುನಾವಣೆ ಮೂಲಕ ತೋರಿಸಬೇಕು ಎಂದು ಕರೆ ನೀಡಿದರು.

Viral Video: ಪ್ರಿಯಾಂಕಾ ಗಾಂಧಿ ಬದಲು ಪ್ರಿಯಾಂಕಾ ಚೋಪ್ರಾಗೆ ಜೈಕಾರ; ಕಾಂಗ್ರೆಸ್ ಸಮಾವೇಶದಲ್ಲಿ ಎಡವಟ್ಟು!

First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ