ಹುಬ್ಬಳ್ಳಿ (ಫೆ.07): ಕಾಂಗ್ರೆಸ್ ಮುಖಂಡನೊಬ್ಬ ಸರ್ಕಾರಿ ಉದ್ಯೋಗದ ಆಮಿಷ ತೋರಿಸಿ ಅಮಾಯಕರಿಂದ ಲಕ್ಷ ಲಕ್ಷ ಹಣವನ್ನು ಸುಲಿಗೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅರ್ಜುಗಡ್ಡದ್ ಸುಲಿಗೆ ಮಾಡಿದತ. ಕಾಂಗ್ರೆಸ್ ಸದಸ್ಯತ್ವ ಹೊಂದಿದ್ದಾನೆ. ರಾಮದುರ್ಗ ಮೂಲದ ಈತ ಸರ್ಕಾರಿ ಉದ್ಯೋಗಾಂಕ್ಷಿಗಳನ್ನು ಗುರಿಯಾಗಿಸಿಕೊಂಡು ಅವರ ಬಳಿ ನಿಮಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಅಲ್ಲದೇ ನನಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು ಆಪ್ತರಿದ್ದಾರೆ. ಈ ಹಿನ್ನೆಲೆ ಪ್ರಭಾವ ಬೀರಿ ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದ. ಅಲ್ಲದೇ ಅವರೊಟ್ಟಿಗಿನ ಫೋಟೋ ತೋರಿಸಿ ಆತ್ಮೀಯತೆ ಬಗ್ಗೆ ತಿಳಿಸಿ, ಆರೋಪಿಗಳಿಗೆ ವಂಚಿಸುತ್ತಿದ್ದ.
ಪ್ರತಿಯೊಬ್ಬ ಉದ್ಯೋಗಾಂಕ್ಷಿಗಳ ಬಳಿ ಕೂಡ ಕನಿಷ್ಟ ಎಂದರೂ 2 ರಿಂದ 10 ಲಕ್ಷ ರೂಗಳನ್ನು ಈತ ವಸೂಲಿ ಮಾಡಿದ್ದ. ಈತನ ಮಾತನ್ನು ನಂಬಿದ ಆಕಾಂಕ್ಷಿಗಳು ಚೆಕ್ ಹಾಗೂ ಆರ್ಟಿಜಿಎಸ್ ಮೂಲಕ ಹಣ ನೀಡುತ್ತಿದ್ದರು.
ವರ್ಷಗಳು ಉರುಳಿದರೂ ಕೆಲಸ ಸಿಗದ ಹಿನ್ನೆಲೆ ಈ ಕುರಿತು ಪ್ರಶ್ನಿಸಿದಾಗ ಆಕಾಂಕ್ಷಿಗಳಿಗೆ ಈತ ಬೆದರಿಕೆ ಹಾಕಿದ್ದಾನೆ. ಸುಮಾರು 10ಕ್ಕೂ ಹೆಚ್ಚು ಮಂದಿ ಈತನನ್ನು ನಂಬಿ ಒಟ್ಟಾರೆ 43 ಲಕ್ಷ ನೀಡಿದ್ದು, ಈಗ ಉದ್ಯೋಗವೂ ಇಲ್ಲ, ಹಣವೂ ಇಲ್ಲ ಎಂಬ ಸ್ಥಿತಿ ತಲುಪಿಸಿದ್ದಾರೆ.
ಇದನ್ನು ಓದಿ: ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ಜಾರಿಗೆ ಮುಂದಾದ ಸರ್ಕಾರ
ಈ ಕುರಿತು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತರಿಗೆ ದೂರು ದಾಖಲಿಸಿದ್ದು, ತಮ್ಮ ಹಣ ವಾಪಸ್ಸು ಕೊಡಿಸುವಂತೆ ಮನವಿ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ