ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ, ಸರ್ಕಾರವೂ ನೆಲ ಕಚ್ಚೋದು ಗ್ಯಾರಂಟಿ; ಚಲುವರಾಯಸ್ವಾಮಿ

ಮೇ.23ರ ಫಲಿತಾಂಶದ ನಂತರವೂ ಬುದ್ಧಿ ಕಲಿಯದೆ ಇದ್ದರೆ ಜನರೇ ಬುದ್ಧಿ ಕಲಿಸ್ತಾರೆ, ಅವರೇ ತೀರ್ಮಾನ ತೊಗೋತಾರೆ ಬಿಡಿ ನನ್ನೊಬ್ಬನ ಕೈಲಿ ಏನೂ ಇಲ್ಲ. ಆದರೆ, ಜೆಡಿಎಸ್ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಮುಂದೊಂದು ದಿನ ಖಂಡಿತ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಮಂಡ್ಯದ ಕಾಂಗ್ರೆಸ್ ನಾಯಕ ಮಾಜಿ ಸಚಿವ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18
Updated:June 7, 2019, 11:42 AM IST
ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆ, ಸರ್ಕಾರವೂ ನೆಲ ಕಚ್ಚೋದು ಗ್ಯಾರಂಟಿ; ಚಲುವರಾಯಸ್ವಾಮಿ
ಚಲುವರಾಯಸ್ವಾಮಿ
MAshok Kumar | news18
Updated: June 7, 2019, 11:42 AM IST
ಮಂಡ್ಯ (ಜೂನ್.07); ಜೆಡಿಎಸ್​ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಅಲ್ಲದೆ ಈ ಸರ್ಕಾರ ಹೆಚ್ಚು ದಿನ ಉಳಿಯುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಚಲುವರಾಯ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಚಲುವರಾಯಸ್ವಾಮಿ, “ನಾನು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಮೇ.23ರ ಫಲಿತಾಂಶದ ನಂತರವೂ ಬುದ್ಧಿ ಕಲಿಯದೆ ಇದ್ದರೆ ಜನರೇ ಬುದ್ಧಿ ಕಲಿಸ್ತಾರೆ, ಅವರೇ ತೀರ್ಮಾನ ತೊಗೋತಾರೆ ಬಿಡಿ ನನ್ನೊಬ್ಬನ ಕೈಲಿ ಏನೂ ಇಲ್ಲ. ಆದರೆ, ಜೆಡಿಎಸ್ ಜೊತೆಗಿನ ಮೈತ್ರಿಗೆ ಕಾಂಗ್ರೆಸ್ ಮುಂದೊಂದು ದಿನ ಖಂಡಿತ ಪಶ್ಚಾತಾಪ ಪಡಬೇಕಾಗುತ್ತದೆ” ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ.

“ಮೈತ್ರಿ ಸರ್ಕಾರದ ಈಗಿನ ನಡವಳಿಕೆಯಿಂದ ಪಕ್ಷಕ್ಕಂತೂ ಉತ್ತಮ ಭವಿಷ್ಯ ಕಾಣುತ್ತಿಲ್ಲ. ಮೈತ್ರಿಯಲ್ಲಿ ಸಾಕಷ್ಟು ಸಮಸ್ಯೆ ಗೊಂದಲಗಳಿವೆ. ಇದನ್ನು ಪಕ್ಷದ ಹಿರಿಯ ನಾಯಕರು ಸರಿಪಡಿಸಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ. ಪರಿಣಾಮ ಪಕ್ಷದ ಹಲವಾರು ನಾಯಕರಿಗೆ ಮೈತ್ರಿ ಅನವಶ್ಯಕ ಎಂಬ ಅಂಶ ಮನವರಿಕೆಯಾಗಿದೆ. ಈ ಮೈತ್ರಿ ಸರ್ಕಾರ ಆಯಸ್ಸು ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಹೀಗಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ನಾನು ಕಾದು ನೋಡಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ಹೇಳುವ ಮೂಲಕ ತಾನು ಪಕ್ಷಾಂತರ ಮಾಡುವ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಮೊದಲು ನೀವು ಬದಲಾಗಿ, ಆನಂತರ ನಮಗೆ ಬುದ್ಧಿ ಹೇಳುವಿರಂತೆ; ಎಚ್​ಡಿಕೆಗೆ ಟಾಂಗ್ ಕೊಟ್ಟ ಚಲುವರಾಯಸ್ವಾಮಿ

First published:June 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...