ಮೆಡಿಕಲ್ ಕಿಟ್​ ಖರೀದಿಯಲ್ಲಿ ಅವ್ಯವಹಾರ ಆರೋಪ; ಸಿಎಂ ಸೇರಿ ಐವರು ಸಚಿವರು ರಾಜೀನಾಮೆ ನೀಡಲಿ; ಬಿ.ಕೆ.ಹರಿಪ್ರಸಾದ್

ಇವತ್ತು ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಇಂತಹ ರಾಜಕಾರಣ ಮಾಡುವುದರಲ್ಲಿ ಬಿಜೆಪಿ ಪಕ್ಷಕ್ಕೆ ಹೇಳಿಕೊಡಬೇಕಿಲ್ಲ. ಜತೆಗೆ ಇವತ್ತು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅಮಾನವೀಯವಾಗಿ ನಡೆದುಕೊಂಡಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಕೊನೆ ಗಳಿಗೆಯಲ್ಲಿ ಕೊರೋನಾದೊಂದಿಗೆ ಹೋರಾಡುತ್ತಾ ಜೀವನ‌ ನಡೆಸಬೇಕು. ಎಲ್ಲ ದೇವರ ಇಚ್ಚೆ ಎಂದು ದೇವರ ಮೇಲೆ ಭಾರ ಹಾಕಿದ್ದಾರೆ ಎಂದರು.

ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್

  • Share this:
ಕಾರವಾರ(ಜು.31): ಪ್ರಧಾನಿ ನರೇಂದ್ರ ಮೋದಿ ನಾಟಕ‌ ಮಾಡುವುದರಲ್ಲಿ ನಿಸ್ಸೀಮರು. ಅದಕ್ಕಾಗಿಯೇ ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ ಗಂಟೆ, ಜಾಗಟೆ, ಚಪ್ಪಾಳೆ ಬಾರಿಸಿ, ದೀಪ ಹಚ್ಚಲು ಹೇಳಿ ದೊಡ್ಡ ನಾಟಕವೇ ಮಾಡಿ ಬಿಟ್ಟರು ಎಂದು ಕಾಂಗ್ರೇಸ್ ರಾಷ್ಟ್ರೀಯ ನಾಯಕ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅವ್ಯವಹಾರ ಮಾಡಿದೆ ಎಂದು ಹೇಳಲು ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ಏನಿದು ಅವ್ಯವಹಾರ? ಸರ್ಕಾರದ ವಿರುದ್ದ ಬಿಕೆ ಮಾಡಿದ ಆರೋಪಗಳೇನು?

ರಾಜ್ಯ ಬಿಜೆಪಿ ಸರ್ಕಾರ ಕೊರೋನಾ ರೋಗಿಗಳ ಚಿಕಿತ್ಸೆಗೆಂದು ಖರೀದಿಸಿದ ಸಲಕರಣೆಗಳಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇದು 2000ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬಿಕೆ ಸರಕಾರದ ವಿರುದ್ದ  ಗಂಭೀರ ಆರೋಪ ಮಾಡಿದರು. ಜತೆಗೆ ಭ್ರಷ್ಟಾಚಾರ ನಡೆಸಿದ ಮುಖ್ಯಮಂತ್ರಿ ಮತ್ತು ಐವರು ಸಚಿವರು ಭ್ರಷ್ಟಾಚಾರದ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.

Evening Digest: ಬೆಂಗಳೂರಿನ ನೂತನ ಕಮೀಷನರ್ ಕಮಲ್ ಪಂಥ್, ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ; ಇಂದಿನ ಟಾಪ್​ 10 ಸುದ್ದಿಗಳು

ಇವತ್ತು ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ. ಇಂತಹ ರಾಜಕಾರಣ ಮಾಡುವುದರಲ್ಲಿ ಬಿಜೆಪಿ ಪಕ್ಷಕ್ಕೆ ಹೇಳಿಕೊಡಬೇಕಿಲ್ಲ. ಜತೆಗೆ ಇವತ್ತು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅಮಾನವೀಯವಾಗಿ ನಡೆದುಕೊಂಡಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಕೊನೆ ಗಳಿಗೆಯಲ್ಲಿ ಕೊರೋನಾದೊಂದಿಗೆ ಹೋರಾಡುತ್ತಾ ಜೀವನ‌ ನಡೆಸಬೇಕು. ಎಲ್ಲ ದೇವರ ಇಚ್ಚೆ ಎಂದು ದೇವರ ಮೇಲೆ ಭಾರ ಹಾಕಿದ್ದಾರೆ ಎಂದರು.

ಮೋದಿ, ಅಮೀತ್ ಶಾ ಜುಗಲಬಂದಿ ರಂಗ ಬಿಲ್ಲ ಎಂದ ಬಿಕೆ

ಪ್ರಧಾನಿ ಮೋದಿ ಮತ್ತು ಅಮಿತ್​​ ಶಾ ಅವರ ಜುಗಲ್​​ಬಂದಿ ಆಡಳಿತವನ್ನು ರಂಗ ಬಿಲ್ಲ ಗೆ ಹೋಲಿಸಿ ಬಿಕೆ ಲೇವಡಿ ಮಾಡಿದರು. ಎಲ್ಲವೂ ಭಾವನಾತ್ಮಕವಾಗಿ ನಡೆಯುತ್ತದೆ. ಕೊರೋನಾ ಸೋಂಕು ನಿಯಂತ್ರಣ ಮಾಡುವಲ್ಲಿ ಪದೇ ಪದೇ ಎಡವಿ ಕೊನೆಯಲ್ಲಿ ಕೊರೋನಾದೊಂದಿಗೆ ಜೀವನ ಮಾಡಬೇಕು ಎಂದು ಹೇಳಿ ಜಾರಿ ಕೊಂಡಿದ್ದಾರೆ. ತಮ್ಮ ಮಾತಿನುದ್ದಕ್ಕೂ ಮೋದಿ ಮತ್ತು ಅಮೀತ್ ಶಾ ರನ್ನ ಮಾತಿನ ದಾಟಿಯಲ್ಲೆ ತಿವಿದರು.

ಪ್ರಧಾನಿ ಮೋದಿ ಕೇವಲ ಭಾಷಣದಲ್ಲೆ ದಿನ ಕಳೆದಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು. ಈ‌ಬಗ್ಗೆ ನುರಿತ ಆರ್ಥಿಕ ತಜ್ಞರು ಜತಗೆ ಮಾಜಿ ಪ್ರಧಾನಿ ಆದ ಮನಮೋಹನ ಸಿಂಗ್ ಅವರ ಜತೆಯಲ್ಲಿ ಸಲಹೆ ಸೂಚನೆ ಪಡೆದುಕೊಂಡರೆ, ಮುಂದೆ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸರಕಾರಕ್ಕೆ ಕೆಲವೊಂದು ಕ್ರಮ ಕೈಗೊಳ್ಳಲು ಸಲಹೆ ಸಿಗಬಹುದು.  ಅದನ್ನ ಬಿಟ್ಟು ಮೋದಿ ಇಂತ ಸಂದರ್ಭದಲ್ಲಿ ಪೊಳ್ಳು ಭಾಷಣ ಮಾಡಿ ತಮ್ಮದೆ ರೀತಿ ಅನುಸರಿಸುತ್ತಿರುವುದು ದೇಶದ ಆರ್ಥಿಕತೆಗೆ ಮತ್ತೆ ಕಂಠಕವಾಗೋದ್ರಲ್ಲಿ ಸಂಶಯ ಇಲ್ಲ ಎಂದು ಕಿಡಿಕಾರಿದರು.

ಒಟ್ಟಿನಲ್ಲಿ ಇವತ್ತು ಬಿಕೆ ರಾಜ್ಯ ಸರಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದು ಕೂಡಲೇ ಸರಕಾರ ಜನರಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Published by:Latha CG
First published: