ಅಮಿತ್​ ಶಾರನ್ನು ರಾಜ್ಯದಿಂದ ಗಡಿಪಾರು ಮಾಡುವ ಕಾಲ ಬರುತ್ತೆ: ಸಂಸದ ಬಿ.ಕೆ. ಹರಿಪ್ರಸಾದ್​ ಎಚ್ಚರಿಕೆ

ಭಯೋತ್ಪಾದನೆ ಮಾಡುವ ಯಾವ ಸಂಘಟನೆಯನ್ನಾದರೂ ನಿಷೇಧ ಮಾಡಬೇಕು. ಕೆಲವು ಹಿಂದೂಪರ ಸಂಘಟನೆಗಳು ಲವ್​ಜಿಹಾದ್​ ಮಾಡುತ್ತಿವೆ. ಬಹಿರಂಗವಾಗಿ ಕೊಚ್ಚಿ ಕೊಲ್ಲುತ್ತಿವೆ. ಇದನ್ನು ಬಿಜೆಪಿ ಏನೆಂದು ಕರೆಯುತ್ತದೆ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ

news18-kannada
Updated:January 18, 2020, 4:16 PM IST
ಅಮಿತ್​ ಶಾರನ್ನು ರಾಜ್ಯದಿಂದ ಗಡಿಪಾರು ಮಾಡುವ ಕಾಲ ಬರುತ್ತೆ: ಸಂಸದ ಬಿ.ಕೆ. ಹರಿಪ್ರಸಾದ್​ ಎಚ್ಚರಿಕೆ
ಬಿ.ಕೆ.ಹರಿಪ್ರಸಾದ್
  • Share this:
ಮಡಿಕೇರಿ(ಜ. 18): ಇಂದು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ, ಸಂಸದ ಬಿ.ಕೆ. ಹರಿಪ್ರಸಾದ್​ ಕಿಡಿಕಾರಿದ್ದಾರೆ. ಸುಪ್ರೀಂ ಕೋರ್ಟ್​​ ಅಮಿತ್​ ಶಾ ಅವರನ್ನು ಗುಜರಾತ್​​ನಿಂದ ಗಡಿಪಾರು ಮಾಡಿತ್ತು. ಅದೇ ರೀತಿ ರಾಜ್ಯದಿಂದಲೂ ಶಾ ಅವರನ್ನು ಗಡಿಪಾರು ಮಾಡಬೇಕಾಗುತ್ತದೆ. ಸ್ವಲ್ಪ ದಿನ ಕಳೆದರೆ ಅಂತಹ ಪರಿಸ್ಥತಿ ನಿರ್ಮಾಣವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ರಾಜ್ಯಕ್ಕೆ ಬರುವುದರಿಂದ ಏನೂ ರಾಜಕೀಯ ಬದಲಾವಣೆ ಆಗಲ್ಲ. ಚುನಾವಣೆ ಸಂಧರ್ಭ ಬಂದಾಗ ಬಾರೀ ಬದಲಾವಣೆ ಆಗಿದ್ದು ಗೊತ್ತೇ ಇದೆ. ಅವರು ಸರ್ಕಾರ ರಚನೆ ಮಾಡುವುದಕ್ಕೆ ಸಾಧ್ಯವೇ ಆಗಲಿಲ್ಲ. ಬಳಿಕ ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿದರು. ಅವರು ರಾಜ್ಯಕ್ಕೆ ಬಂದರೆ ಇದೇ ರಾಜಕೀಯ ಬದಲಾವಣೆ ಆಗೋದು ಎಂದು ಲೇವಡಿ ಮಾಡಿದರು.

ಮಲೆನಾಡನ್ನು ಬೆಚ್ಚಿ ಬೀಳಿಸಿದ್ದ ಶೃಂಗೇರಿ ಅತ್ಯಾಚಾರ ಪ್ರಕರಣ; ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಬೇರೆ ಪಕ್ಷದ ಹಲವು ನಾಯಕರು ಬಿಜೆಪಿ ಸೇರಲಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ, ಮೊದಲು ಬಿಜೆಪಿ ಪಕ್ಷ ಎಷ್ಟು ದಿನ ಉಳಿದುಕೊಳ್ಳುತ್ತೆ  ಎನ್ನುವ ಗ್ಯಾರಂಟಿ ಇದೆಯಾ? ಯಡಿಯೂರಪ್ಪನವರ ಕಾಲ ಎಷ್ಟು ದಿನ ಇದೆ ಎನ್ನವುದನ್ನು ಈಶ್ವರಪ್ಪ ಅವರನ್ನು ಕೇಳಿದರೆ ಗೊತ್ತಾಗುತ್ತದೆ. ಆಮೇಲೆ ಅವರದ್ದೇ ಒಂದು ಪಕ್ಷ ಅಸ್ತಿತ್ವಕ್ಕೆ ಬರುತ್ತದೆ ಎಂದು ವ್ಯಂಗ್ಯ ಮಾಡಿದರು.

ಎಸ್ ಡಿಪಿಐಯನ್ನು ರಾಜ್ಯದಲ್ಲಿ ಬ್ಯಾನ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭಯೋತ್ಪಾದನೆ ಮಾಡುವ ಯಾವ ಸಂಘಟನೆಯನ್ನಾದರೂ ನಿಷೇಧ ಮಾಡಬೇಕು. ಕೆಲವು ಹಿಂದೂಪರ ಸಂಘಟನೆಗಳು ಲವ್​ಜಿಹಾದ್​ ಮಾಡುತ್ತಿವೆ. ಬಹಿರಂಗವಾಗಿ ಕೊಚ್ಚಿ ಕೊಲ್ಲುತ್ತಿವೆ. ಇದನ್ನು ಬಿಜೆಪಿ ಏನೆಂದು ಕರೆಯುತ್ತದೆ? ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಕೇರಳಿಗರು ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಗೆಲ್ಲಿಸಿದರೆ ಮೋದಿಗೇ ಲಾಭ: ರಾಮಚಂದ್ರ ಗುಹಾ

 
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ