Nalin Kumar Kateel ವಿವಾದಾತ್ಮಕ ಹೇಳಿಕೆ - ಸ್ವಂತ ಪಕ್ಷದಲ್ಲಿ ಕಾಮಿಡಿ ಕಟೀಲ್ ಎಂದು ಕರೆಸಿಕೊಳ್ತಾರೆ:B K Hariprasad ವಾಗ್ದಾಳಿ

ಕಟೀಲ್ ಮೂರ್ಖತನದ ಹೇಳಿಕೆಗಳನ್ನು ನೀಡುವ ಮತ್ತು ಎಲ್ಲೆಡೆ ನಗೆಪಾಟಲಿಗೀಡಾಗುವ ಕಾರಣ ಅವನ ಸ್ವಂತ ಪಕ್ಷದದವರು ಅವನನ್ನು ಕಾಮಿಡಿ ಕಟೀಲ್ ಎಂದು ಕರೆಯುತ್ತಾರೆ. ಗಾಜಿನ ಮನೆಯಲ್ಲಿ ಕುಳಿತವರು ಇತರರ ಮೇಲೆ ಕಲ್ಲು ಎಸೆಯಬಾರದು

 ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್

  • Share this:
ಬೆಂಗಳೂರು: ಇಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿಕೆಗೆ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಿದೆ. ರಾಹುಲ್ ಗಾಂಧಿ (Rahul Gandhi) ಡ್ರಗ್ ಅಡಿಕ್ಟ್ ಮತ್ತು ಪೆಡ್ಲರ್ (Drug Addict And Peddler) ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಹುಲ್ ಗಾಂಧಿ ಬಗ್ಗೆ ಹೇಳಿಕೆ ಅತ್ಯಂತ ಹೀನಾಯವಾಗಿದೆ. ಕಟೀಲ್ ಮೂರ್ಖತನದ ಹೇಳಿಕೆಗಳನ್ನು ನೀಡುವ ಮತ್ತು ಎಲ್ಲೆಡೆ ನಗೆಪಾಟಲಿಗೀಡಾಗುವ ಕಾರಣ ಅವನ ಸ್ವಂತ ಪಕ್ಷದದವರು ಅವನನ್ನು ಕಾಮಿಡಿ ಕಟೀಲ್ ಎಂದು ಕರೆಯುತ್ತಾರೆ. ಗಾಜಿನ ಮನೆಯಲ್ಲಿ ಕುಳಿತವರು ಇತರರ ಮೇಲೆ ಕಲ್ಲು ಎಸೆಯಬಾರದು ಎಂದು ಅವನು ತಿಳಿದಿರಬೇಕು ಎಂದು ಕಾಂಗ್ರೆಸ್  ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಟಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

"ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಶಿಸುವುದಕ್ಕೆ ಚಾಚಿ ಕೊಂಡಿರುವಂತ ನಾಲಿಗೆ" ಪುರಂದರದಾಸರು ಇದನ್ನು ಕಟೀಲ್‌ರಂತವರಿಗೇ ಹೇಳಿದಂತಿದೆ. ನಮ್ಮ ಕಠಿಣ ಪದ ಬಳಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಷಾದ ವ್ಯಕ್ತಪಡಿಸುವ ವೈಶಾಲ್ಯತೆ ತೋರಿದ್ದರು. ಈ ಮಾತುಗಳಿಗೆ ಬಿಜೆಪಿ ಕ್ಷಮೆ ಕೇಳುವ ನೈತಿಕತೆ ತೋರುವುದೇ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಇದನ್ನೂ ಓದಿ:  Rahul Gandhi ಡ್ರಗ್​ ಪೆಡ್ಲರ್​ ಎಂಬ ಹೇಳಿಕೆ: ಬಿಜೆಪಿ ಅಧ್ಯಕ್ಷ ಕಟೀಲ್​ ಒಬ್ಬ ಅವಿವೇಕಿ ಎಂದ ಗುಂಡೂರಾವ್​

ಡಿಕೆ ಶಿವಕುಮಾರ್ ಪ್ರತಿಕ್ರಿಯೆ:

ನಿನ್ನೆ ನಾನು ಮಾತನಾಡುವಾಗ "ರಾಜಕೀಯ ವಿರೋಧಿಗಳೊಡನೆ ನಾಗರಿಕ ಮೌಲ್ಯದ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳೋದ್ರಲ್ಲಿ ನಂಬಿಕೆಯಿದೆ" ಎಂದಿದ್ದೆ. ಬಿಜೆಪಿ ಇದನ್ನು ಒಪ್ಪುತ್ತದೆಂದು ಭಾವಿಸಿದ್ದೆ ಆದರೆ, ಬಿಜೆಪಿ ರಾಜ್ಯಾಧ್ಯಕ್ಷರು ಶ್ರೀ ರಾಹುಲ್ ಗಾಂಧಿಯವರನ್ನು ಅಸಂಸದೀಯ ಪದಗಳಿಂದ ನಿಂದಿಸಿದ್ದು, ಕ್ಷಮೆ ಯಾಚಿಸುತ್ತಾರೆಂದು ಭಾವಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಚಾಟಿ ಬೀಸಿದ್ದಾರೆ.ಬಿಜೆಪಿಯವರನ್ನು ಆದಷ್ಟು ಬೇಗನೇ ನಶಾಮುಕ್ತಿ ಕೇಂದ್ರಕ್ಕೆ ಸೇರಿಸಬೇಕು.ಅಧಿಕಾರದ ನಶೆಯಲ್ಲಿ ಬಿಜೆಪಿ ನಾಯಕರು ತೇಲುತ್ತಿದ್ದಾರೆ. ಹೀಗಾಗಿ ಇಂಥಹ ಹೀನ ಹೇಳಿಕೆ ನೀಡ್ತಿದ್ದಾರೆ. ಬಿಜೆಯವರಿಗೆ ಸೊಕ್ಕು ಬಂದಿದೆ. ಮೊನ್ನೆ ಸಿಕ್ಕ ಮಾದಕ ವಸ್ತುಗಳಲ್ಲಿ ಅವರು ಸೇವಿಸಿರಬೇಕು ಎಂದು ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸುರ್ಜೇವಾಲಾ (Randeep Surjewala) ಆಕ್ರೋಶ ಹೊರಹಾಕಿದ್ದಾರೆ. ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಬಿಜೆಪಿ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ಕಟೀಲ್ ಒಬ್ಬ ಮೆಚ್ಯೂರಿಟಿ ಇಲ್ಲದ ರಾಜಕಾರಣಿ. ಬೇಜವಾಬ್ದಾರಿ ರಾಜಕಾರಣಿಯಾಗಿರುವ ಕಟೀಲ್ ಮೆಂಟಲ್ ಬ್ಯಾಲೆನ್ಸ್ ಹೋಗಿದ್ದು, ನಿಮಾನ್ಸ್ ನಲ್ಲಿ ತೋರಿಸಿಕೊಳ್ಳುವುದು ಒಳ್ಳೆಯದು. ಬೇಜವಾಬ್ದಾರಿಯಿಂದ ರಾಹುಲ್ ಗಾಂಧಿ ವಿರುದ್ದ ಮಾತನಾಡಿರೋದನ್ನ ಖಂಡಿಸುತ್ತೇನೆ. ಬಿಜೆಪಿ ವರಿಷ್ಠರು ಕಟೀಲ್ ಅವರನ್ನ ಹುಚ್ಚಾಸ್ಪತ್ರೆಗೆ ಸೇರಿಸಬೇಕು  ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  Nalin Kumar Kateel: 'ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್': ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?

ರಾಹುಲ್ ಗಾಂಧಿ(Rahul Gandhi) ಒಬ್ಬ ಡ್ರಗ್ ಅಡಿಕ್ಟ್(Drug Addict), ಡ್ರಗ್  ಪೆಡ್ಲರ್(Drug Peddler) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(BJP State President Nalin Kumar Kateel) ವಿವಾದಾತ್ಮಕ ಹೇಳಿಕೆ(Controversial Statement) ನೀಡಿದ್ದಾರೆ. ಹುಬ್ಬಳ್ಳಿ(Hubli)ಯಲ್ಲಿ ಆಯೋಜಿಸಿದ್ದ ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತೆ ಸಭೆ(Pre-Poll Election preparation meeting)ಯಲ್ಲಿ ಮಾತನಾಡಿದ ಕಟೀಲ್, ರಾಹುಲ್ ಗಾಂಧಿ ಒರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಅಂತ ವರದಿ ಇವೆ ಎಂದು ಆರೋಪಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ(National Congress President)ರೂ ಜೈಲಿಗೆ ಹೋಗಿದ್ದರು. ಇತ್ತ ರಾಜ್ಯಾಧ್ಯಕ್ಷ ತಿಹಾರ್ ಜೈಲಿಗೆ ಹೋಗಿದ್ದರು. ಇವರೇನು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋದ್ರಾ..? ಇಲ್ಲಾ ಸಂಗ್ರಾಮದ ಕಥೆ ಬರೆಯಲು ಹೋಗಿದ್ರಾ..?ಇಂಥವರು ನಮ್ಮ ಮೋದಿ ಬಗ್ಗೆ ಟೀಕಿಸ್ತಾರೆ ಎಂದು ಕಿಡಿಕಾರಿದರು.

 
Published by:Mahmadrafik K
First published: