ರಿಪಬ್ಲಿಕ್ ಆಫ್ ಬಳ್ಳಾರಿ ಆಯ್ತು, ಇದೀಗ ರಿಪಬ್ಲಿಕ್ ಆಫ್ ಜಿಂದಾಲ್ - ಸರ್ಕಾರದ ವಿರುದ್ದವೇ ಕೈ ನಾಯಕರ ಗುಡುಗು

ರಿಪಬ್ಲಿಕ್ ಆಫ್ ಬಳ್ಳಾರಿ ಆಯ್ತು... ಈಗ ರಿಪಬ್ಲಿಕ್ ಆಫ್ ಜಿಂದಾಲ್....! ಸರ್ಕಾರದ ವಿರುದ್ದವೇ ಸ್ವಪಕ್ಷೀಯ ನಾಯಕರ ಗುಡುಗು...! ಜಿಂದಾಲ್ ವಿರುದ್ದ ಹೋರಾಟಕ್ಕೂ ಸಜ್ಜಾದ ಕೈ ನಾಯಕರು... ಹೌದು. ಜಿಂದಾಲ್ ಜಿಂದಾಲ್ ಜಿಂದಾಲ್ ಕಳೆದೊಂದು ತಿಂಗಳಿನಿಂದ ರಾಜ್ಯದಲ್ಲಿ ಇದೇ ಜಿಂದಾಲ್ ಕಂಪನಿಯದ್ದೇ ಸದ್ದು.

news18
Updated:June 18, 2019, 2:52 PM IST
ರಿಪಬ್ಲಿಕ್ ಆಫ್ ಬಳ್ಳಾರಿ ಆಯ್ತು, ಇದೀಗ ರಿಪಬ್ಲಿಕ್ ಆಫ್ ಜಿಂದಾಲ್ - ಸರ್ಕಾರದ ವಿರುದ್ದವೇ ಕೈ ನಾಯಕರ ಗುಡುಗು
ಶಾಸಕ ಆನಂದ್ ಸಿಂಗ್
news18
Updated: June 18, 2019, 2:52 PM IST
ಬಳ್ಳಾರಿ(ಜೂ. 17): ಅಕ್ರಮ ಗಣಿಗಾರಿಕೆ ಮೂಲಕ ಅಪಖ್ಯಾತಿ ಪಡೆದಿದ್ದ ಗಣಿನಾಡು ಬಳ್ಳಾರಿ ಜಿಲ್ಲೆ ಈ ಮೊದಲು ರಿಪಬ್ಲಿಕ್ ಆಫ್ ಬಳ್ಳಾರಿ ಎಂದೇ ಕುಖ್ಯಾತಿ ಪಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇದೀಗ ರಿಪಬ್ಲಿಕ್ ಆಫ್ ಬಳ್ಳಾರಿ ಹೋಗಿ ರಿಪಬ್ಲಿಕ್ ಆಫ್ ಜಿಂದಾಲ್ ಆಗಿದೆ. ಹೀಗಂತ ಕೈ ನಾಯಕರೇ ಆರೋಪಿಸುತ್ತಿದ್ದಾರೆ. ಕೈ ಶಾಸಕರೇ ಜಿಂದಾಲ್ ವಿರುದ್ದ ಹೋರಾಟಕ್ಕೆ ಸಜ್ಜಾಗಿದ್ದು, ಸರ್ಕಾರದ ನಿರ್ಧಾರದ ವಿರುದ್ದ ಸೆಡ್ಡು ಹೊಡೆದು ಎಲ್ಲದಕ್ಕೂ ಸಿದ್ದವೆಂದು ಸೂಚ್ಯವಾಗಿ ಮೆಸೇಜ್ ಪಾಸ್ ಮಾಡಿದ್ದಾರೆ.

3667 ಎಕರೆ ಭೂಮಿಯನ್ನ ಕಡಿಮೆ ದರಕ್ಕೆ ಪರಭಾರೆ ಮಾಡಿರುವ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ಮಾತ್ರವಲ್ಲ ಜಿಲ್ಲೆಯ ಸ್ವಪಕ್ಷೀಯ ಶಾಸಕರು, ಕೈ ನಾಯಕರು ತಿರುಗಿ ಬಿದ್ದಿದ್ದಾರೆ. ಸರ್ಕಾರದ ನಿಲುವಿಗೆ ಗುಡುಗಿದ್ದಾರೆ.

ಇದನ್ನೂ ಓದಿ: Jindal Land Deal: ಜಿಂದಾಲ್​​​ ಮತ್ತು ಐಎಂಎ ಪ್ರಕರಣದಲ್ಲಿ ಮೌನ ಮುರಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಕಾಂಗ್ರೆಸ್​ನಲ್ಲಿ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ನಂತರ ಜಿಂದಾಲ್​ಗೆ ಭೂಮಿ ನೀಡಿದ ವಿಚಾರವನ್ನ ಬಹಿರಂಗವಾಗಿ ವಿರೋಧ ಮಾಡಿದ್ದು ಕೈ ಶಾಸಕ ಆನಂದ್ ಸಿಂಗ್. ಸ್ವಪಕ್ಷೀಯ ನಾಯಕರಾಗಿರುವ ಆನಂದ್ ಸಿಂಗ್ ಅವರು ಸರ್ಕಾರದ ವಿರುದ್ದವೇ ಗುಡುಗಿದ್ದಾರೆ. ವಿಜಯನಗರ ಕ್ಷೇತ್ರದ ಕೈ ಶಾಸಕ ಆನಂದ್ ಸಿಂಗ್ ಜಿಂದಾಲ್​ನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಿದ್ದಾರೆ. ಜೊತೆಗೆ ಜಿಲ್ಲೆಯ ಎಲ್ಲಾ ಹೋರಾಟಗಾರರು, ಕನ್ನಡಪರ ಸಂಘಟನೆಗಳು, ಶಾಸಕರು, ಮಾಜಿ ಶಾಸಕರನ್ನ ಈ ಹೋರಾಟಕ್ಕೆ ಕರೆತರಲು ಮುಂದಾಗಿದ್ದಾರೆ. ಈ ಪ್ರಯತ್ನದ ಫಲವಾಗಿ ಈಗ ಶಾಸಕ ಆನಂದ್ ಸಿಂಗ್ ಹೋರಾಟಕ್ಕೆ ಮಾಜಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಬೆಂಬಲ ನೀಡಿದ್ದಾರೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ಶಾಸಕ ಆನಂದ್ ಸಿಂಗ್ ಜಿಂದಾಲ್ ವಿರುದ್ದ ದೊಡ್ಡ ಮಟ್ಟದ ಹೋರಾಟ ನಡೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಅಧಿಕಾರ ತ್ಯಾಗಕ್ಕೂ ಸಿದ್ಧ, ಪಕ್ಷದ ವಿರುದ್ದ ನಡೆದುಕೊಳ್ಳಲು ಸಿದ್ದ ಎಂದು ಘೋಷಣೆ ಮಾಡಿದ್ದಾರೆ. ಜಿಂದಾಲ್ ಕಂಪನಿ ದಿ ರಿಪಬ್ಲಿಕ್ ಆಫ್ ಜಿಂದಾಲ್ ಆಗಿದೆ. ಪೊಲೀಸರು, ಅಧಿಕಾರಿಗಳು ಜಿಂದಾಲ್ ಪರ ರಕ್ಷಣೆಗೆ ನಿಂತಿದ್ದಾರೆ. ಜಿಲ್ಲೆಯ ಜನರ ಧ್ವನಿಯಾಗಿ ಹೋರಾಟ ಮಾಡುತ್ತೇನೆ ಎಂದು ಆನಂದ್ ಸಿಂಗ್ ಗುಡುಗಿದ್ದಾರೆ.

ಇದನ್ನೂ ಓದಿ: ಸೈನಿಕರ ಹೆಸರಿನಲ್ಲಿ ಮೋಸಗೊಂಡ ಬಳ್ಳಾರಿ ವ್ಯಕ್ತಿ; ಆನ್​ಲೈನ್​ನಲ್ಲಿ ಕಾರು ಖರೀದಿಸುವ ಮುನ್ನ ಈ ಸ್ಟೋರಿ ಓದಿ!

ಇನ್ನು ಆನಂದ್ ಸಿಂಗ್ ಹೋರಾಟಕ್ಕೆ ಮಾಜಿ ಶಾಸಕ ಅನಿಲ್ ಲಾಡ್ ಬೆಂಬಲ ಕೊಟ್ಟಿರುವುದು ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇಬ್ಬರು ಸ್ವಪಕ್ಷೀಯ ನಾಯಕರೇ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನ ವಿರೋಧಿಸಿದ್ದಾರೆ. ಜಿಂದಾಲ್​ಗೆ ಭೂಮಿ ನೀಡಿದ ವಿಚಾರವನ್ನ ಪರಿಶೀಲಿಸಲು ಕ್ಯಾಬಿನೆಟ್ ಉಪ ಸಮಿತಿ ನೇಮಕ ಮಾಡಲಾಗಿದೆ. ಈ ಉಪ ಸಮಿತಿ ಕೇವಲ ಬೆಂಗಳೂರಿನಲ್ಲಿ ಕುಳಿತುಕೊಂಡು ವರದಿ ನೀಡುವ ಬದಲು ಸ್ಥಳಕ್ಕೆ ಆಗಮಿಸಿ ಜನರ ಅಹವಾಲು ಸ್ವೀಕರಿಸಿ ಉಪಸಮಿತಿ ವರದಿ ನೀಡಬೇಕು ಎಂದು ಮಾಜಿ ಶಾಸಕ ಅನಿಲ್ ಲಾಡ್ ಒತ್ತಾಯಿಸಿದ್ದಾರೆ.
Loading...

ಜಿಂದಾಲ್ ಕಂಪನಿಗೆ ಭೂಮಿ ನೀಡಿದ್ದು ಎಕರೆಗೆ ಕೇವಲ 1.20 ಲಕ್ಷ ರೂಪಾಯಿಗೆ ಮಾತ್ರ. ಅಂದರೆ 43.99 ಕೋಟಿ ರೂಪಾಯಿಗೆ ಸರ್ಕಾರ 3,666 ಎಕರೆ ಭೂಮಿ ಕೊಡಲು ನಿರ್ಧರಿಸಿದೆ. ಇಂಡ್ರಸ್ಟ್ರೀಯಲ್ ಕನವರ್ಷನ್ ಮಾಡಿದ್ರೆ ಎಕರೆಗೆ 50 ಲಕ್ಷ. ಇದೇ ಭೂಮಿಯನ್ನ ಚಾರ್ಟರ್ಡ್ ಅಕೌಂಟೆಂಟ್ ಮೂಲಕ ಮಾಲ್ಯಮಾಪನ ನಡೆಸಿದ್ರೆ ಪ್ರತಿ ಎಕರೆಗೆ 1 ಕೋಟಿ ಬೆಲೆಯಾಗುತ್ತದೆ. ಈಗಿರುವಾಗ ಕಡಿಮೆ ದರಕ್ಕೆ ಭೂಮಿ ಪರಭಾರೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ಸಣ್ಣ ಉದ್ಯಮಗಳಿಗೂ ಇದೇ ರೀತಿಯಲ್ಲಿ ಇದೇ ದರಕ್ಕೆ ಭೂಮಿ ನೀಡುತ್ತೀರಾ ಅನ್ನೋದಕ್ಕೆ ಜಿಂದಾಲ್ ಕಂಪನಿ ಸ್ಪಷ್ಟಪಡಿಸಬೇಕು ಎಂದು ಮಾಜಿ ಶಾಸಕ ಅನಿಲ್ ಲಾಡ್ ಪ್ರಶ್ನಿಸುತ್ತಾರೆ.

ಇದನ್ನೂ ಓದಿ: ಐಎಂಎ ವಂಚನೆ ಪ್ರಕರಣ: ಮನ್ಸೂರ್ ವಿರುದ್ಧ ಮತ್ತೊಂದು ಎಫ್ಐಆರ್; ಮೂರನೇ ಪತ್ನಿ ಮನೆ ಮೇಲೆ ರೇಡ್

ಬಳ್ಳಾರಿ ಜಿಲ್ಲೆಯಲ್ಲಿಯೇ ಸ್ವಪಕ್ಷೀಯ ಇಬ್ಬರು ಕೈ ನಾಯಕರೇ ಈ ಹೋರಾಟದ ಮುಂದಾಳತ್ವ ವಹಿಸಿರುವುದು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಮೈತ್ರಿ ಸರ್ಕಾರಕ್ಕೆ ಕಂಟಕವಾಗಿರುವ ಉಭಯ ನಾಯಕರು ಜಿಂದಾಲ್ ಹಾಗೂ ಸರ್ಕಾರದ ವಿರುದ್ದ ತೊಡೆ ತಟ್ಟಿದ್ದಾರೆ. ಮುಂದೆ ಈ ಹೋರಾಟ ಯಾವ ಸ್ವರೂಪ ಪಡೆದುಕೊಳ್ಳುತ್ತದೋ ಕಾದುನೋಡಬೇಕಾಗಿದೆ.

(ವರದಿ: ಶರಣು ಹಂಪಿ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...