ಬೆಂಗಳೂರು: ಒಂದೇ ಒಂದು ಡಿಸಿಎಂ (DCM) ಸ್ಥಾನ ಸೃಷ್ಟಿಸಿರುವುದಕ್ಕೆ ಮಾಜಿ ಡಿಸಿಎಂ ಪರಮೇಶ್ವರ್ (Parameshwara) ಸಿಟ್ಟಿಗೆದ್ದಿದ್ದಾರೆ. ದಲಿತ ಸಮುದಾಯದ (Dalit Community) ನಿರೀಕ್ಷೆ ಬಹಳ ದೊಡ್ಡದಿದೆ. ಅದನ್ನ ಅರ್ಥ ಮಾಡಿಕೊಂಡು ವರಿಷ್ಠರು ತೀರ್ಮಾನಿಸಬೇಕು. ಇಲ್ಲದಿದ್ದರೆ ಸ್ವಾಭಾವಿಕ ಸಮುದಾಯದ ಪ್ರತಿಕ್ರಿಯೆ ಇದ್ದೇ ಇರುತ್ತೆ ಅಂಥ ಪರಮೇಶ್ವರ್ ಪರೋಕ್ಷ ವಾರ್ನಿಂಗ್ (Warning) ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಾ ಜಿ ಪರಮೇಶ್ವರ್ ಅವರು, ನಾನು ಸಿಎಂ ಹಾಗೂ ಡಿಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದೆ. ಈಗ ಹೈಕಮಾಂಡ್ ನವರು ಘೋಷಣೆ ಮಾಡಿದ್ದಾರೆ. ಮುಂದೆ ಏನಾದರೂ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ನೋಡೋಣಾ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಎರಡನೇ ಬಾರಿ ಸಿಎಂ ಆಗಿದ್ದಾರೆ, ಒಳ್ಳೆಯ ಆಡಳಿತ ನೀಡಲಿ, ನಮ್ಮನ್ನು ವಿಶ್ವಾಸಕ್ಕೆ ಪಡೆದುಕೊಂಡು ಮುಂದುವರೆಯಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: HD Kumaraswamy: 2-3 ತಿಂಗಳಿನಲ್ಲಿ ಹೊಸ ರಾಜಕೀಯ ಬದಲಾವಣೆ! ಕಾಂಗ್ರೆಸ್ ಸರ್ಕಾರದ ಬಗ್ಗೆ ಎಚ್ಡಿಕೆ ಭವಿಷ್ಯ
51 ಕ್ಷೇತ್ರಗಳ ಪೈಕಿ 37 ಸೀಟು ದಲಿತರು ಗೆದ್ದಿದ್ದೇವೆ
ಇಂದು ಸಂಜೆ ಅಧಿಕೃತವಾಗಿ ಸಿಎಲ್ಪಿ ಸಭೆಯನ್ನು ಕರೆದಿದ್ದಾರೆ, ಪಕ್ಷದ ವೀಕ್ಷಕರು ಕೂಡ ಈ ಬಗ್ಗೆ ಘೋಷಣೆ ಮಾಡುತ್ತಾರೆ. ಸರ್ಕಾರದಲ್ಲಿ ದಲಿತರ ಪ್ರತಿನಿದ್ಯಾ ಹೇಗಿರಲಿದೆ ನೋಡಬೇಕಿದೆ. 51ಕ್ಷೇತ್ರಗಳ ಪೈಕಿ 37 ಸೀಟು ದಲಿತರು ಗೆದ್ದಿದ್ದೇವೆ. ಬೇರೆ ಕ್ಷೇತ್ರದಲ್ಲೂ ದಲಿತ ಸಮುದಾಯದ ಮತಗಳು ಪರಿಣಾಮ ಬೀರಿವೆ. ನಾವು ಶಿಸ್ತಿನ ಸಿಪಾಯಿಗಳು, ಲಾಭಿ, ಹೋರಾಟ ಮಾಡಲ್ಲ. ಅವರಿಗೆ ಅರ್ಥ ಆಗಬೇಕು. ಯಾವ ಸಮುದಾಯದ ಬೆಂಬಲ ದೊರಕಿದೆ ಎಂದರು.
ಡಿಸಿಎಂ ಕೇಳೋದು ಏನಿದೆ ನನಗೆ ಕೊಡಲೇಬೇಕು
ರಾಜಸ್ಥಾನ ರೀತಿ ಆಗಲು ಬಿಡಲ್ಲ. ಒಳ್ಳೆಯ ಆಡಳಿತ ನೀಡುವ ನಿರೀಕ್ಷೆ ಜನರಲ್ಲಿದೆ. ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಡಿಸಿಎಂ ಕೇಳೋದು ಏನಿದೆ ನನಗೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ. ಅಧಿಕೃತವಾಗಿ ಎಲ್ಲಾ ಬರಬೇಕಿದೆ, ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಕೊಡುಗೆ ನೀಡಿದ್ದಾರೆ. ಒಬ್ಬರೇ ಡಿಸಿಎಂ ಆಗಿರಬೇಕು ಎಂದು ಹೇಳಲು ಆಗಲ್ಲ. ಆದರೆ ನಾವು ಎಲ್ಲಾ ಒಟ್ಟಿಗೆ ಇದ್ದೇವೆ, ಎಲ್ಲಾ ಸೇರಿ ಅಧಿಕಾರ ನಡೆಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ