ಮನೆಗೆ ದಲಿತರು ಬಂದರೆ ಸಚಿವ ರೇವಣ್ಣ ಸ್ನಾನ ಮಾಡಿ ಬರುತ್ತಾರೆ ; ಕಾಂಗ್ರೆಸ್​ ನಾಯಕ ಎ. ಮಂಜು ಆರೋಪ

ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುವ ಕಾಂಗ್ರೆಸ್​ ಮಾಜಿ ಸಚಿವ ಎ. ಮಂಜು ಮತ್ತೊಮ್ಮೆ ಟೀಕಾ ಪ್ರಹಾರ ನಡೆಸಿದ್ದಾರೆ.

sushma chakre | news18
Updated:January 10, 2019, 5:14 PM IST
ಮನೆಗೆ ದಲಿತರು ಬಂದರೆ ಸಚಿವ ರೇವಣ್ಣ ಸ್ನಾನ ಮಾಡಿ ಬರುತ್ತಾರೆ ; ಕಾಂಗ್ರೆಸ್​ ನಾಯಕ ಎ. ಮಂಜು ಆರೋಪ
ಎ. ಮಂಜು- ಎಚ್​.ಡಿ. ರೇವಣ್ಣ
sushma chakre | news18
Updated: January 10, 2019, 5:14 PM IST
ಡಿಎಂಜಿ ಹಳ್ಳಿ ಅಶೋಕ್​ 

ಹಾಸನ (ಜ. 10): ಜಾತ್ಯತೀತ ಪಕ್ಷದ ನಾಯಕನೆಂದು ಕರೆಸಿಕೊಳ್ಳುವ ಎಚ್​.ಡಿ. ರೇವಣ್ಣ ತಮ್ಮ ಮನೆಗೆ ದಲಿತರು ಬಂದರೆ ಸ್ನಾನ ಮಾಡಿಕೊಂಡು ಬರುತ್ತಾರೆ ಎಂದು ಮಾಜಿ ಸಚಿವ ಎ. ಮಂಜು ಆರೋಪ ಮಾಡಿದ್ದಾರೆ.

ಜೆಡಿಎಸ್​ ನಾಯಕ ಎಚ್​.ಡಿ. ರೇವಣ್ಣ ಕಾಂಗ್ರೆಸ್​ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ರೌಡಿಶೀಟರ್ ಎಂದು ಕೇಸು ಹಾಕಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಎ. ಮಂಜು ಮತ್ತೊಮ್ಮೆ ತಮ್ಮದೇ ಮೈತ್ರಿ ಸರ್ಕಾರದ ಸಚಿವರ ವಿರುದ್ಧ ಧ್ವನಿಯೆತ್ತಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಜೆಡಿಎಸ್​ ವಿರುದ್ಧ ಕಿಡಿಕಾರಿದ್ದ ಎ. ಮಂಜು, ದೇವೇಗೌಡರು ಸೋತು ಕುಳಿತಿದ್ದಾಗ ನನ್ನ ಬಳಿ ಬಂದು ಸಹಾಯ ಕೇಳಿದ್ದರು. ಅವರು ನನ್ನ ಹಂಗಿನಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಹಾಗೇ, ದೇವೇಗೌಡರ ಕುಟುಂಬದ ಮೇಲೆ ಭೂ ಕಬಳಿಕೆಯ ಆರೋಪ ಮಾಡಿ ಸಮ್ಮಿಶ್ರ ಸರ್ಕಾರದ ನಾಯಕರು ತಲೆತಗ್ಗಿಸುವಂತೆ ಮಾಡಿದ್ದರು. ಇದೀಗ, ಮತ್ತೆ ತಮ್ಮ ವಾಗ್ದಾಳಿ ಮುಂದುವರಿಸಿರುವ ಎ. ಮಂಜು ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ನಗ್ನ ವಿಡಿಯೋ ಕಳುಹಿಸಿದ ಕಾಮುಕ ಶಿಕ್ಷಕನ ವಿರುದ್ಧ ದೂರು ನೀಡಿದ ವಿದ್ಯಾರ್ಥಿನಿ

ನಾನು ಸತ್ತೇ ಹೋಗುತ್ತೇನೆ, ಸಾಲಮನ್ನಾ ಮಾಡುತ್ತೇನೆ ಎಂದೆಲ್ಲ ಅಳುತ್ತಾ ಸಿಎಂ ಕುಮಾರಸ್ವಾಮಿ ಅಧಿಕಾರಕ್ಕೆ ಬಂದರು. ಸಾಲಮನ್ನಾ ಮಾಡಲು ಕಾಂಗ್ರೆಸ್ ನಿಂದ ಯಾವುದೇ ಅಭ್ಯಂತರವಿಲ್ಲ. ಆದರೂ ಸಾಲಮನ್ನಾಗೆ ಕಾಂಗ್ರೆಸ್ ನವರು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಸಿಎಂ ಆರೋಪಿಸುತ್ತಿದ್ದಾರೆ. ನಾನು ಸಚಿವನಾಗಿದ್ದಾಗ ಮಾಡಿದ ಕೆಲಸವನ್ನು ಈಗ ಜೆಡಿಎಸ್ ಮುಂದುವರಿಸಿದೆಯೇ ವಿನಃ ಯಾವುದೇ ಹೊಸ ಯೋಜನೆಯನ್ನು ತಂದಿಲ್ಲ ಎಂದು ಸಚಿವ ಸಿಎಂ ಕುಮಾರಸ್ವಾಮಿ ಮತ್ತು ಸಚಿವ ಎಚ್​. ಡಿ. ರೇವಣ್ಣ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ವೃತ್ತ ಬರೆದಾಗಿದೆ, ವೃತ್ತದಲ್ಲಿರೋದೆಲ್ಲಾ ಸೂಪರ್​ ಸಿಎಂ ರೇವಣ್ಣಂದೇ..!
Loading...

ಹೊಸ ಯೋಜನೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿರುವ ಸಚಿವ ಎಚ್​.ಡಿ. ರೇವಣ್ಣ, ಹಾಸನ ನಗರದ ಎಲ್ಲಾ ರಸ್ತೆಗಳನ್ನು ಅಗೆದಿದ್ದಾರೆ. ಯಾವುದೇ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದ 10 ವರ್ಷಗಳ ಒಳಗೆ ಪುನರ್ ನಿರ್ಮಾಣ ಮಾಡುವಂತಿಲ್ಲ. ಚೆನ್ನಾಗಿರುವ ರಸ್ತೆಗಳನ್ನು ಅಗೆದು ಮತ್ತೆ ಅದೇ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಸಚಿವ ಎಚ್​.ಡಿ. ರೇವಣ್ಣ ವಿರುದ್ದ ಎ. ಮಂಜು ಆರೋಪ ಮಾಡಿದ್ದಾರೆ.

ನಾನೇನೂ ಮಾತಾಡಲ್ಲ ಎಂದ ರೇವಣ್ಣ:

ಇನ್ನು, ಈ ಬಗ್ಗೆ ಎಚ್​.ಡಿ. ರೇವಣ್ಣ ಅವರ ಪ್ರತಿಕ್ರಿಯೆ ಕೇಳಿದಾಗ ಅವರು ಯಾವುದೇ ಮಾತುಗಳನ್ನಾಡುವುದಿಲ್ಲ ಎಂದಿದ್ದಾರೆ. ಹೈಕಮಾಂಡ್ ನನಗೆ ಸ್ಪಷ್ಟ ಸೂಚನೆ ನೀಡಿದೆ. ನಮ್ಮ ಪಕ್ಷದ ನಾಯಕರಾದ ದೇವೇಗೌಡರು, ಕುಮಾರಸ್ವಾಮಿಯವರು ನಾನೇನೂ ಮಾತನಾಡಬಾರದು ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ನಾನು ಮಾಧ್ಯಮಗಳ ಮುಂದೆ ಮಾತಾಡಲ್ಲ. ಎ. ಮಂಜು ಅವರ ಆರೋಪಗಳಿಗೆ ನಾನೇನಾದರೂ ಪ್ರತಿಕ್ರಿಯೆ ನೀಡಿದರೆ ಪೊಳ್ಳೆದ್ದು ಹೋಗುತ್ತೇನೆ ಎಂದು ಜಾರಿಕೊಂಡಿದ್ದಾರೆ.

 

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ