• Home
  • »
  • News
  • »
  • state
  • »
  • Congress Leaders: ಧಮ್​ ಇದ್ರೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ; ಸಿಎಂ ಬೊಮ್ಮಾಯಿಗೆ ಡಿಕೆಶಿ ಸವಾಲ್​!

Congress Leaders: ಧಮ್​ ಇದ್ರೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ; ಸಿಎಂ ಬೊಮ್ಮಾಯಿಗೆ ಡಿಕೆಶಿ ಸವಾಲ್​!

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

ಸಿಎಂ ಬಸವರಾಜ ಬೊಮ್ಮಾಯಿ ಅವರ ಧಮ್ ತಾಕತ್ ಈಗ ಪ್ರದರ್ಶಿಸಲಿ ಧಮ್ ತಾಕತ್ ಇದ್ರೆ ನ್ಯಾಯಾಂಗ ತನಿಖೆಯನ್ನು ಸಿಎಂ ಮಾಡಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.19): ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರದ (BJP Government) ವಿರುದ್ಧ ಕಾಂಗ್ರೆಸ್​ (Congress) ಕಿಡಿಕಾರಿದೆ. ಬಿಜೆಪಿ ಚುನಾವಣೆಯಲ್ಲಿ (Election) ಸೋಲುತ್ತೇವೆಂದು ಷಡ್ಯಂತ್ರ ಮಾಡಿದೆ. ಕಾರ್ಯಕರ್ತರನ್ನು ಬಿಟ್ಟು ಕೆಲವು ಸಂಸ್ಥೆ ಜೊತೆ ಸೇರಿಕೊಂಡು ವೋಟ್ (Vote) ಡಿಲೀಟ್ ಮಾಡಿದ್ದಾರೆ ಎಂದು ಕಾಂಗ್ರೆಸ್​ ಆರೋಪ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧಮ್​-ತಾಕತ್​ ಇದ್ರೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar)​ ಸವಾಲ್ ಹಾಕಿದ್ದಾರೆ.


3 ಮಂತ್ರಿ , ಒಬ್ಬ ಶಾಸಕರಿಗೆ ಚಿಲುಮೆ ಟ್ರಸ್ಟ್ ಜೊತೆ ಲಿಂಕ್​


27 ಲಕ್ಷ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಯಾವ ಪ್ರೊಸೀಸರ್ ಆಗಿಲ್ಲ. ಬಿಎಲ್ಒಗಳನ್ನು ನೇಮಕ ಮಾಡಲು ಖಾಸಗಿಯವರಿಗೆ ಅವಕಾಶ ಇಲ್ಲ. 3 ಮಂತ್ರಿ , ಒಬ್ಬ ಶಾಸಕರು ಚಿಲುಮೆ ಟ್ರಸ್ಟ್ ಜೊತೆ ಸಂಪರ್ಕದಲ್ಲಿದ್ದಾರೆ. ಸಿಎಂ ಹಾಗೂ ಸಚಿವರ ಮೇಲೆ FIR ಆಗಿಲ್ಲ. 28 ಜನ ARO ಹಾಗೂ ಬಿಎಲ್ಒ ಮೇಲೆ FIR ಆಗಬೇಕು. ಡಿಲಿಷನ್ ಮತ್ತು ಸೇರ್ಪಡೆ ಬಗ್ಗೆ ಮರು ತನಿಖೆ ಆಗಬೇಕು ಎಂದು ಡಿಕೆ ಶಿವಕುಮಾರ್​ ಆಗ್ರಹಿಸಿದ್ದಾರೆ.


ಅಶ್ವತ್ಥ್​ ನಾರಾಯಣ ಅವರನ್ನ ಬಂಧಿಸಬೇಕು


ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಅಶ್ವತ್ಥ್​ ನಾರಾಯಣ ವಿರುದ್ಧ ಸಿದ್ದರಾಮಯ್ಯ ಆರೋಪದ ಸುರಿಮಳೆಗೈದಿದ್ದಾರೆ. ಅಶ್ವತ್ಥ್​ ನಾರಾಯಣ ಅವರನ್ನ ಬಂಧಿಸಬೇಕು. ಅಶ್ವತ್ಥ್​ ನಾರಾಯಣಗ್​ಗೆ ಚೆಕ್, ಲೆಟರ್ ಪ್ಯಾಡ್ ಯಾಕೆ ಹೋಯ್ತು. ಚಿಲುಮೆ ಕಚೇರಿಗೆ ಯಾಕೆ ಹೋಯ್ತು. ಸಿಎಂ  ಬಸವರಾಜ ಬೊಮ್ಮಾಯಿಗೆ ಇದು ಸಂಬಂಧವಿಲ್ವೇ? ಹಾಗಾದ್ರೆ ಬೆಂಗಳೂರು ಉಸ್ತುವಾರಿ ‌ಖಾತೆ ಯಾರ ಬಳಿಯಿದೆ ಎಂದು ಪ್ರಶ್ನಿಸಿದ್ರು.


ವೋಟರ್ ಸ್ಕ್ಯಾಮ್ ನಲ್ಲಿ ಬಿಜೆಪಿ ಸರ್ಕಾರ


ವೋಟರ್ ಸ್ಕ್ಯಾಮ್ ನಲ್ಲಿ ಬಿಜೆಪಿ ಸರ್ಕಾರ ಭಾಗಿಯಾಗಿದ್ದು, ನ್ಯಾಯಾಂಗ ತನಿಖೆಗೆ ವಹಿಸಿ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಡಬೇಕು. ಮುಂದೆ ಕಾನೂನೂ ಹೋರಾಟವನ್ನು ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ರು.


ಧಮ್ ತಾಕತ್ ಈಗ ಪ್ರದರ್ಶಿಸಲಿ


ಸಿಎಂ ಬಸವರಾಜ ಬೊಮ್ಮಾಯಿ ಅವರ ಧಮ್ ತಾಕತ್ ಈಗ ಪ್ರದರ್ಶಿಸಲಿ. ಧಮ್, ತಾಕತ್ ಇದ್ರೆ ನ್ಯಾಯಾಂಗ ತನಿಖೆಯನ್ನು ಸಿಎಂ ಮಾಡಲಿ. ನಾವು ಇಲ್ಲಿಗೆ ಬಿಡಲ್ಲ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗ್ತೇವೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.


ಅಶ್ವತ್ಥ್​ ನಾರಾಯಣ ವಿರುದ್ಧ ವಾಗ್ದಾಳಿ


ಅಶ್ವತ್ಥ್​ ನಾರಾಯಣ ವಿರುದ್ಧ ಕೆಪಿಸಿಸಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುವ ತಂತ್ರ ನಡೆಯುತ್ತಿದೆ. ಹಗರಣದ ಕಿಂಗ್​ಪಿನ್​ಗಳ ರಕ್ಷಣೆಗೆ ನಿಂತವರು ಯಾರು? ಚಿಲುಮೆಗೆ ಯಾರ ಒಲುಮೆ? ಎಂದು ಕೆಪಿಸಿಸಿ ಟ್ವೀಟ್ ಮಾಡಿ ಕಿಡಿಕಾರಿದೆ.


ಮತದಾರರ ಮಾಹಿತಿ ಕದ್ದ ಚಿಲುಮೆ ಸಂಸ್ಥೆಯ ಕೆಲಸಗಾರರನ್ನು ಬಂಧಿಸಿ ಕಣ್ಣೊರೆಸುತ್ತಾ ಕಿಂಗ್ ಪಿನ್‌ಗಳ ರಕ್ಷಣೆಗೆ ನೀತಿರುವವರು ಯಾರು? ಚಿಲುಮೆಗೆ ಯಾರ ಒಲುಮೆ? ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ಕ್ಯಾಷ್‌ಲ್ಲೇ ಅಭಿವೃದ್ಧಿಯಾದ ಸಚಿವರೇ? ಜನಕ್ರೋಶದಿಂದ ಖಾಲಿ ಕುರ್ಚಿ ದರ್ಶನ ಪಡೆಯುತ್ತಿರುವ ಬಿಜೆಪಿ ಮತದಾರರನ್ನೇ ಖಾಲಿ ಮಾಡಿಸುವ ಹುನ್ನಾರ ನಡೆಸಿದೆ.


ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯ


ಚಿಲುಮೆ ಸಂಸ್ಥೆಗೆ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿ ಕಡೆಯಿಂದ ಹಣ ಸಂದಾಯವಾಗಿದೆ. ಹಾಗೂ ಸಂಸ್ಥೆಯ ಮುಖ್ಯಸ್ಥನೊಂದಿಗೆ ಅಶ್ವಥ್ ನಾರಾಯಣ ಅವರ ಸಂಪರ್ಕವಿದೆ. ಬಿಜೆಪಿಯ ನಾಯಕರೊಂದಿಗೆ ಚಿಲುಮೆ ಸಂಸ್ಥೆಗೆ ನೇರ ಸಂಪರ್ಕವಿರುವುದು ಜಗಜ್ಜಾಹೀರು. ಹೀಗಿರುವಾಗ ಅದೇ ಸಂಸ್ಥೆಯ “ಉಚಿತ ಸೇವೆ”ಗೆ ಸರ್ಕಾರ ಒಪ್ಪಿಗೆ ಕೊಟ್ಟಿದ್ದೇಕೆ? ಎಂದು ಕೆಪಿಸಿಸಿ ಟ್ವೀಟ್ ಮೂಲಕ ಅಶ್ವತ್ಥ್​ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದೆ.

Published by:ಪಾವನ ಎಚ್ ಎಸ್
First published: