ಕಾಂಗ್ರೆಸ್ ಅಭ್ಯರ್ಥಿ ಯಾರು? ಕೆಪಿಸಿಸಿ ಅಧ್ಯಕ್ಷರಿಗೇ ಪ್ರಶ್ನೆ ಮಾಡಿ ತಬ್ಬಿಬ್ಬುಗೊಳಿಸಿದ ಕೈ ಕಾರ್ಯಕರ್ತ..!

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಷಣ ಮಾಡುವ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಕೈ ಕಾರ್ಯಕರ್ತ ಪ್ರಶ್ನಿಸಿ ತಬ್ಬಿಬ್ಬುಗೊಳಿಸಿದರು. ಇದುವರೆಗೂ ಹೊಸಪೇಟೆ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ಮಾಡಿಲ್ಲ. ಅವರು ಹೊಸಪೇಟೆ ನಗರಕ್ಕೆ ಮಾತ್ರ ಕೈ ಅಭ್ಯರ್ಥಿಯಾ ಎಂದು ಪ್ರಶ್ನಿಸಿದರು.

news18-kannada
Updated:November 30, 2019, 4:57 PM IST
ಕಾಂಗ್ರೆಸ್ ಅಭ್ಯರ್ಥಿ ಯಾರು? ಕೆಪಿಸಿಸಿ ಅಧ್ಯಕ್ಷರಿಗೇ ಪ್ರಶ್ನೆ ಮಾಡಿ ತಬ್ಬಿಬ್ಬುಗೊಳಿಸಿದ ಕೈ ಕಾರ್ಯಕರ್ತ..!
ಬೈಕ್ ರ‍್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​​​
  • Share this:
ಬಳ್ಳಾರಿ (ನ.30): ರಾಜ್ಯದಲ್ಲಿ‌ ನಡೆಯುತ್ತಿರುವ ಉಪ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪಕ್ಷಗಳ ಮತಬೇಟೆ ಶುರುವಾಗಿದೆ. ವಿಜಯನಗರ ಕ್ಷೇತ್ರದಲ್ಲಿಂದು ಬಿಜೆಪಿ ದಲಿತ ವರ್ಗಗಳ ಸಮಾವೇಶ ಮಾಡಿದರೆ, ಕಾಂಗ್ರೆಸ್ ಮುಸ್ಲಿಂ ಮತದಾರರನ್ನು ಓಲೈಸಲು ಸಮಾವೇಶ ಮಾಡಿತ್ತು. ಇನ್ನು ಅಖಾಡಕ್ಕೆ ಬಿಜೆಪಿ ಉಸ್ತುವಾರಿ ಡಿಸಿಎಂ ಗೋವಿಂದ ಕಾರಜೋಳ ಇಳಿದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫೀಲ್ಡಿಗಿಳಿದಿದ್ದರು.

ಮತದಾರರನ್ನು ಸೆಳೆಯಲು ಇಂದು ಬಿಜೆಪಿ ದಲಿತ ವರ್ಗಗಳ ಸಮಾವೇಶ ಮಾಡಿದರೆ,‌ ಕಾಂಗ್ರೆಸ್ ಮುಸ್ಲಿಂ ಸಮುದಾಯದ ಕಾರ್ಯಕ್ರಮ ಆಯೋಜಿಸಿತ್ತು. ಬಿಜೆಪಿ ಪಕ್ಷ ಹೊಸಪೇಟೆಯ ಆನಂದ್ ಸಿಂಗ್ ಕಚೇರಿಯಲ್ಲಿ ಎಸ್ ಸಿ ಸಮುದಾಯದ ಮತ ಸೆಳೆಯಲು ಸಭೆ ಆಯೋಜಿಸಿತ್ತು. ಚುನಾವಣಾ ಉಸ್ತುವಾರಿ ಡಿಸಿಎಂ ಗೋವಿಂದ ಕಾರಜೋಳ ಸಮಾವೇಶ ಭಾಗಿಯಾಗಿ ಕಾಂಗ್ರೆಸ್ ಓಟ್ ಬ್ಯಾಂಕ್ ಆಗಿದ್ದ ದಲಿತ ಸಮುದಾಯ ಬಿಜೆಪಿ ಪಕ್ಷಕ್ಕೆ ಬಂದಿದೆ. ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ದೀಪ ಹಚ್ಚಲು ನಾಯಕರು ಇರುವುದಿಲ್ಲ ಎಂದೇಳಿದ ಅವರು, ಈಗಾಗಲೇ ಬಿಜೆಪಿ ಜೆಡಿಎಸ್ ಮದುವೆ ಮಾಡಿಕೊಂಡು ಸೋಡಾ ಚೀಟಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದಾರೆ. ಹೋರಿಗೆ ನರಿ ತಿನ್ನುವ ಆಸೆಯಿದೆ ಎಂದು ನರಿ ಮತ್ತು ಹೋರಿ ಕತೆ ಹೇಳಿದರು.

ಇನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರವಾಗಿ ಖುದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕಣಕ್ಕಿಳಿದಿದ್ದರು. ಬೈಕ್ ರ‍್ಯಾಲಿ ಮೂಲಕ‌ ನಗರಕ್ಕಾಗಮಿಸಿ ದಲಿತ ಸಮುದಾಯದ ಪ್ರದೇಶದಲ್ಲಿ ಮುನಿಯಪ್ಪ ಜೊತೆ ಪ್ರಚಾರ ಮಾಡಿದರು. ಆನಂತರ ಮುಸ್ಲಿಂ ಸಮುದಾಯ ಸೆಳೆಯಲು ಅಲ್ಪಸಂಖ್ಯಾತರ ಸಮಾವೇಶದಲ್ಲಿ ಕೈ ನಾಯಕರು ಭಾಗಿಯಾಗಿ ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದರು.

ಶಾಸಕ ರಮೇಶ್ ಕುಮಾರ್ ಉರ್ದುವಿನಲ್ಲಿ ಮಾತನಾಡಿ ಅನರ್ಹರೆಂದು ಸುಪ್ರಿಂ ಕೋರ್ಟ್ ಹೇಳಿದ್ದು ಅವರನ್ನು ಜನರು ಸೋಲಿಸುವ ಮೂಲಕ ಜನತಾ ನ್ಯಾಯಾಲಯ ತಲೆ ಎತ್ತಬೇಕು ಎಂದು ಹೇಳಿದರು. ಇನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಷಣ ಮಾಡುವ ಮಧ್ಯೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂದು ಕೈ ಕಾರ್ಯಕರ್ತ ಪ್ರಶ್ನಿಸಿ ತಬ್ಬಿಬ್ಬುಗೊಳಿಸಿದರು. ಇದುವರೆಗೂ ಹೊಸಪೇಟೆ ಗ್ರಾಮಾಂತರ ಪ್ರದೇಶದಲ್ಲಿ ಪ್ರಚಾರ ಮಾಡಿಲ್ಲ. ಅವರು ಹೊಸಪೇಟೆ ನಗರಕ್ಕೆ ಮಾತ್ರ ಕೈ ಅಭ್ಯರ್ಥಿಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ನಾನೇನು ಮಲಗಿ ಮುಖ್ಯಮಂತ್ರಿಯಾಗಿಲ್ಲ - ದಿನಕ್ಕೆ 20 ಗಂಟೆ ಕೆಲಸ ಮಾಡಿ ಸಿಎಂ ಆಗಿದ್ದೇನೆ ; ಕುಮಾರಸ್ವಾಮಿ 

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​​ ಸಮಾಧಾನಪಡಿಸುವ ಯತ್ನ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ವಿರುದ್ದ ಹರಿಹಾಯ್ದ, ಮುಂದೆ ಸರಕಾರ ಬಂದಲ್ಲಿ ಸಿಎಂ ಯಾರೆಂಬುದು ತೀರ್ಮಾನಿಸಲಾಗುವುದು . ಜೆಡಿಎಸ್ ಪಕ್ಷದ ಅಭ್ಯರ್ಥಿ ಎನ್ ಎಂ ನಬೀ ಸಹ ತಾವೇನು ಕಡಿಮೆಯಿಲ್ಲವೆಂಬಂತೆ ಕ್ಷೇತ್ರದಾದ್ಯಂತ ಪ್ರಚಾರ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ವಿಜಯನಗರ ರಣಕಣದಲ್ಲಿ ಜಯದ ಮಾಲೆಗೆ ಅಭ್ಯರ್ಥಿಗಳು ಮತಬೇಟೆ ಮುಂದುವರೆಸಿದ್ದಾರೆ
 
First published: November 30, 2019, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading