HOME » NEWS » State » CONGRESS KNOWS ONLY TO CRITICIZE EVERYTHING THAT BJP DO SAYS NALIN KUMAR KATEEL MAK

ಬಿಜೆಪಿಯ ಎಲ್ಲವನ್ನೂ ಟೀಕೆ ಮಾಡುವುದೊಂದೆ ಕಾಂಗ್ರೆಸ್ ಜಾಯಮಾನ; ನಳಿನ್ ಕುಮಾರ್ ಕಟೀಲ್ ಕಿಡಿ

ರಾಷ್ಟ್ರೀಯ ಪಕ್ಷಕ್ಕೆ ಏನು ಗತಿಗೇಡು ಬಂದಿದೆ? ವಿಪಕ್ಷ ನಾಯಕರ ಆಯ್ಕೆಯೇ ಅವರಿಂದ ಸಾಧ್ಯವಾಗುತ್ತಿಲ್ಲ. ಇನ್ನೂ ನಮ್ಮ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ನಾವು ಹಾಲಿನ ಜೊತೆ ಸಕ್ಕರೆಯಂತೆ ಇದ್ದೇವೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

MAshok Kumar | news18-kannada
Updated:February 24, 2020, 6:36 PM IST
ಬಿಜೆಪಿಯ ಎಲ್ಲವನ್ನೂ ಟೀಕೆ ಮಾಡುವುದೊಂದೆ ಕಾಂಗ್ರೆಸ್ ಜಾಯಮಾನ; ನಳಿನ್ ಕುಮಾರ್ ಕಟೀಲ್ ಕಿಡಿ
ನಳಿನ್ ಕುಮಾರ್​ ಕಟೀಲ್​
  • Share this:
ಉಡುಪಿ (ಫೆಬ್ರವರಿ 24); ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯ ಕುರಿತು ವಿರೋಧ ಮಾಡಬೇಕಲ್ಲ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ವಿರೋಧಿಸುತ್ತಿವೆ. ಬಿಜೆಪಿ ಏನೇ ಮಾಡಿದರೂ ಅದನ್ನು ಟೀಕೆ ಮಾಡಲೇಬೇಕು ಎಂಬುದು ಕಾಂಗ್ರೆಸ್ ಜಾಯಮಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.

ಇಂದು ಉಡುಪಿಯಲ್ಲಿ ಮಾತನಾಡಿರುವ ಅವರು, “ಇಡೀ ಜಗತ್ತು ಭಾರತದ ಕಡೆಗೆ ತಿರುಗಿ ನೋಡುತ್ತಿದೆ. ಮೋದಿಯಿಂದಾಗಿ ಭಾರತದ ಹಿರಿಮೆ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ. ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯಿಂದಾಗಿ ಎರಡೂ ರಾಷ್ಟ್ರದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಭಾರತಕ್ಕೆ ಅಮೆರಿಕ ಎಲ್ಲಾ ವಿಚಾರದಲ್ಲೂ ನೆರವು ನೀಡಲಿದೆ.

ಆದರೆ, ಕಾಂಗ್ರೆಸ್ ವಿರೋಧಿಸಬೇಕಲ್ಲ ಎಂಬ ಕಾರಣಕ್ಕೆ ಎಲ್ಲವನ್ನೂ ವಿರೋಧಿಸುತ್ತಿದೆ. ಕಾಂಗ್ರೆಸ್​ ನಾಯಕರಿಗೆ ರಾಷ್ಟ್ರದ ಪರಿಕಲ್ಪನೆ ಇಲ್ಲ. ಇಡೀ ಪಕ್ಷ ಬೌದ್ಧಿಕ ದಿವಾಳಿತನ ಎದುರಿಸುತ್ತಿದೆ” ಎಂದು ಕಿಡಿಕಾರಿದ್ದಾರೆ.

ಬಿಜೆಪಿಯಲ್ಲಿ ಭಿನ್ನಮತ ಇದೆ ಎಂಬ ಸಿ.ಎಂ. ಇಬ್ರಾಹಿಂ ಟೀಕೆಗೆ ಆಕ್ರೋಶ ವ್ಯಕ್ತಪಡಿಸಿರುವ ನಳಿನ್ ಕುಮಾರ್ ಕಟೀಲ್, “ಸಿಎಂ ಇಬ್ರಾಹಿಂ ಅಂತೆ, ಯಾರ್ರಿ ಅವರು, ಆತ ಅವರ ಪಕ್ಷದ ಕುರಿತು ಮಾತನಾಡಲಿ. ಕಾಂಗ್ರೆಸ್​ಗೆ ಅಧ್ಯಕ್ಷರ ಆಯ್ಕೆ ಕುರಿತು ಚಿಂತೆ ಮಾಡಲಿ. ಸೋನಿಯಾ ಗಾಂಧಿಯೇ ಈವರೆಗೆ ಹಂಗಾಮಿಯಾಗಿದ್ದಾರೆ, ಇನ್ನೂ ರಾಜ್ಯದಲ್ಲೂ ಅಧ್ಯಕ್ಷರ ಆಯ್ಕೆ ಆಗಿಲ್ಲ. ಪಕ್ಷ ಉಳಿಸಿಕೊಳ್ಳುವುದರ ಕುರಿತು ಅವರು ಚಿಂತೆ ಮಾಡಲಿ.

ರಾಷ್ಟ್ರೀಯ ಪಕ್ಷಕ್ಕೆ ಏನು ಗತಿಗೇಡು ಬಂದಿದೆ? ವಿಪಕ್ಷ ನಾಯಕರ ಆಯ್ಕೆಯೇ ಅವರಿಂದ ಸಾಧ್ಯವಾಗುತ್ತಿಲ್ಲ. ಇನ್ನೂ ನಮ್ಮ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ನಾವು ಹಾಲಿನ ಜೊತೆ ಸಕ್ಕರೆಯಂತೆ ಇದ್ದೇವೆ” ಎಂದು ಉತ್ತರಿಸಿದ್ದಾರೆ.

(ವರದಿ- ಪರೀಕ್ಷಿತ್​ ಶೇಟ್)

ಇದನ್ನೂ ಓದಿ : ಸರ್ಕಾರದ ಭರವಸೆ ಹಿನ್ನೆಲೆ ಷರತ್ತಿನ ಮೇಲೆ ಧರಣಿ ಕೈಬಿಟ್ಟ ಕೊಪ್ಪ ಸಹಕಾರ ಸಾರಿಗೆ ನೌಕರರು
Youtube Video
First published: February 24, 2020, 6:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories