ಲೋಕಸಭಾ ಫಲಿತಾಂಶದಂತೆ ಉಪಚುನಾವಣೆಯಲ್ಲಿಯೂ ಸೀಟು ಪಡೆಯಲು ಕಾಂಗ್ರೆಸ್​-ಜೆಡಿಎಸ್​ ಕಷ್ಟಪಡಲಿದೆ; ಈಶ್ವರಪ್ಪ

Karnataka By Elections Latest news: ಉಪಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಿಸಿ, ಅಧಿಕಾರದಲ್ಲಿ ಮುಂದುವರೆಯಲಿದೆ. ಬಿಜೆಪಿಗೆ ಪೂರ್ಣ ಬಹುಮತ ನೀಡಬೇಕೆಂಬುದು ಮತದಾರರ ಒಲವು. ಮುಂದಿನ ಮೂರುವರೆ ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರೆಯಲಿದೆ

Seema.R | news18-kannada
Updated:December 5, 2019, 2:30 PM IST
ಲೋಕಸಭಾ ಫಲಿತಾಂಶದಂತೆ ಉಪಚುನಾವಣೆಯಲ್ಲಿಯೂ ಸೀಟು ಪಡೆಯಲು ಕಾಂಗ್ರೆಸ್​-ಜೆಡಿಎಸ್​ ಕಷ್ಟಪಡಲಿದೆ; ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ
  • Share this:
ಶಿವಮೊಗ್ಗ (ಡಿ.05): ಲೋಕಸಭಾ ಚುನಾವಣಾ ಫಲಿತಾಂಶದಂತೆ ಈ ಉಪಚುನಾವಣೆ ಫಲಿತಾಂಶ ಕೂಡ ಬರಲಿದೆ. ಕಾಂಗ್ರೆಸ್​-ಜೆಡಿಎಸ್​ ಒಂದೊಂದು ಸೀಟು ಗೆಲ್ಲಲು ಕಷ್ಟಪಡಲಿದೆ ಎಂದು ಸಚಿವ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಿಸಿ, ಅಧಿಕಾರದಲ್ಲಿ ಮುಂದುವರೆಯಲಿದೆ. ಬಿಜೆಪಿಗೆ ಪೂರ್ಣ ಬಹುಮತ ನೀಡಬೇಕೆಂಬುದು ಮತದಾರರ ಒಲವು. ಮುಂದಿನ ಮೂರುವರೆ ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಉಪಚುನಾವಣೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ದಲಿತ ಸಿಎಂ ಮಾಡಲು ಮುಂದಾಗಿರುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಜಾತಿ ಹೆಸರು ಹೇಳದೇ ಇದ್ದರೆ, ಅವರಿಗೆ ತಿಂದಿರುವ ಅನ್ನ ಕರಗಲ್ಲ. ಖರ್ಗೆಯವರನ್ನು ದಲಿತ ಮುಖ್ಯಮಂತ್ರಿ ಎಂದು ಕರೆದು ಅವಮಾನ ಮಾಡಬೇಡಿ ಎಂದರು.

 

ಲಿಂಗಾಯತರ ಮುಖ್ಯಮಂತ್ರಿ, ಕುರುಬರ ಮುಖ್ಯಮಂತ್ರಿ, ದಲಿತ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಹೇಳುತ್ತಿರುವುದು ಅವರ ಸೃಷ್ಟಿ. ರಾಜ್ಯಕ್ಕೆ ಒಬ್ಬ ಮುಖ್ಯಮಂತ್ರಿಯಾಗಿರುತ್ತಾರೆ ಹೊರತು, ಜಾತಿಗೆ ಮುಖ್ಯಮಂತ್ರಿಯಾಗಿರಲ್ಲ. ಅದರಲ್ಲೂ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಖರ್ಗೆ  ಅವರ ಮೂಗಿಗೆ ತುಪ್ಪ ಹಚ್ಚಿ ನೀವೆ ಮುಖ್ಯಮಂತ್ರಿ ಎಂದು = ಹೇಳಲಾಗುತ್ತಿದೆ ಅಷ್ಟೇ  ಎಂದರು

ಉಪಚುನಾವಣೆ ಬಳಿಕ  ಕಾಂಗ್ರೆಸ್ ನವರು ವಿಪಕ್ಷ ಸ್ಥಾನ ಉಳಿಸಿಕೊಳ್ಳುತ್ತಾರಾ ಎಂಬುದು ಕೂಡ ನೋಡಬೇಕಿದೆ.ಖರ್ಗೆ ಮತ್ತು ಸಿದ್ಧರಾಮಯ್ಯ, ಯಾವ ರಾಜ್ಯಕ್ಕೆ ಸಿಎಂ ಎನ್ನುವುದು ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನವರು ಮುಖ್ಯಮಂತ್ರಿ ಸ್ಥಾನದ ಕನಸು ಕಾಣುವುದು ಬಿಡಬೇಕು ಎಂದು ಲೇವಡಿ ಮಾಡಿದರು.ಇದನ್ನು ಓದಿ: Karnataka ByPolls: ಹಿಂಬಾಗಿಲಿನಿಂದ ಸರ್ಕಾರ ರಚಿಸಿರುವ ಯಡಿಯೂರಪ್ಪಗೆ ಯಾವಾಗಲೂ ಜನ ಆಶೀರ್ವಾದಿಸಿಲ್ಲ; ಸಿದ್ದರಾಮಯ್ಯ

ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಗೆ ಭವಿಷ್ಯ ಇಲ್ಲ. ಫಲಿತಾಂಶದ ಬಳಿಕ ಇನ್ನಷ್ಟು ಶಾಸಕರು ಬಿಜೆಪಿಗೆ ಬರಲಿದ್ದಾರೆ. ಜೆಡಿಎಸ್ ನವರು ಅವರನ್ನು ಬಳಸಿಕೊಂಡು ಬಹುಮತ ಪಡೆದುಕೊಂಡು ಸರ್ಕಾರ ರಚನೆಯಾಗಲಿದೆ ಎಂದು ಕನಸು ಕಾಣುತ್ತಿದ್ದಾರೆ.
First published: December 5, 2019, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading