ವಿಧಾನಸಭಾ ಉಪಚುನಾವಣೆಗೆ ದಿನಗಣನೆ; ಹುಣಸೂರಿನಲ್ಲಿ ಇಂದು ಮೂರೂ ಪಕ್ಷಗಳಿಂದ ಭರ್ಜರಿ ಪ್ರಚಾರ

ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಚ್. ವಿಶ್ವನಾಥ್ ಅವರೇ ಕಣಕ್ಕಿಳಿದಿದ್ದು, ಕಾಂಗ್ರೆಸ್​ನಿಂದ ಎಚ್​.ಪಿ.ಮಂಜುನಾಥ್ ಹಾಗೂ ಜೆಡಿಎಸ್​ನಿಂದ ಸೋಮಶೇಖರ್ ಅಭ್ಯರ್ಥಿಗಳಾಗಿದ್ದಾರೆ.

news18-kannada
Updated:November 23, 2019, 8:16 AM IST
ವಿಧಾನಸಭಾ ಉಪಚುನಾವಣೆಗೆ ದಿನಗಣನೆ; ಹುಣಸೂರಿನಲ್ಲಿ ಇಂದು ಮೂರೂ ಪಕ್ಷಗಳಿಂದ ಭರ್ಜರಿ ಪ್ರಚಾರ
ಎಚ್.ಪಿ.ಮಂಜುನಾಥ್, ಎಚ್.ವಿಶ್ವನಾಥ್ ಹಾಗೂ ಸೋಮಶೇಖರ್
  • Share this:
ಮೈಸೂರು (ನ. 23): ರಾಜ್ಯ ವಿಧಾನಸಭಾ ಉಪಚುನಾವಣೆಗೆ ಅಖಾಡ ಸಿದ್ಧವಾಗಿದ್ದು, ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಅನರ್ಹ ಶಾಸಕರಿಂದ ತೆರವಾಗಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ಡಿ. 5ರಂದು ಚುನಾವಣೆ ನಡೆಯಲಿದ್ದು, ಡಿ. 9ರಂದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ. ಬಿಜೆಪಿಯಿಂದ ಸ್ಪರ್ಧೆಗಿಳಿದಿರುವ ಅನರ್ಹ ಶಾಸಕರನ್ನು ಸೋಲಿಸಲೇಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಣ ತೊಟ್ಟಿವೆ. ತೀವ್ರ ಕುತೂಹಲ ಸೃಷ್ಟಿಸಿರುವ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮೂರೂ ಪಕ್ಷಗಳು ಪ್ರಚಾರ ನಡೆಸಲಿವೆ.

ಹುಣಸೂರು ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ನಿಂದ ಎಚ್.ವಿಶ್ವನಾಥ್ ಗೆದ್ದು ಶಾಸಕರಾಗಿದ್ದರು. ಆದರೆ, ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು, ರಾಜೀನಾಮೆ ನೀಡುವ ಮೂಲಕ ಸರ್ಕಾರ ಬೀಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ವಿಶ್ವನಾಥ್ ಅವರೇ ಕಣಕ್ಕಿಳಿದಿದ್ದು, ಕಾಂಗ್ರೆಸ್​ನಿಂದ ಎಚ್​.ಪಿ.ಮಂಜುನಾಥ್ ಹಾಗೂ ಜೆಡಿಎಸ್​ನಿಂದ ಸೋಮಶೇಖರ್ ಅಭ್ಯರ್ಥಿಗಳಾಗಿದ್ದಾರೆ.

ಹುಣಸೂರು ಪ್ರತ್ಯಕ್ಷ ವರದಿ | ತ್ರಿಕೋನ ಸ್ಪರ್ಧೆಯ ನಡುವೆ ಹ್ಯಾಟ್ರಿಕ್ ಕನಸು ಕಾಣುತ್ತಿರುವ ಕೈ ಅಭ್ಯರ್ಥಿ ಮಂಜುನಾಥ್

ಹುಣಸೂರು ಕ್ಷೇತ್ರದಲ್ಲಿ ಇಂದು ಭಾರೀ ಪ್ರಚಾರ ನಡೆಯಲಿದೆ. ಹುಣಸೂರಿನಲ್ಲಿ ಇಂದು ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಚ್​.ಪಿ. ಮಂಜುನಾಥ್ ಪರವಾಗಿ ಮಾಜಿ ಸಚಿವ ಯು.ಟಿ. ಖಾದರ್ ಇಂದು ಪ್ರಚಾರ ಮಾಡಲಿದ್ದಾರೆ. ಜೆಡಿಎಸ್​ ಅಭ್ಯರ್ಥಿ ಸೋಮಶೇಖರ್ ಪರವಾಗಿ ಹಾಸನ ಜೆಡಿಎಸ್​ ಸಂಸದ ಪ್ರಜ್ವಲ್ ರೇವಣ್ಣ ಮತ ಯಾಚಿಸಲಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿ ಎಚ್​. ವಿಶ್ವನಾಥ್​ ಇಂದು ಮತ ಯಾಚನೆ ಮಾಡಲಿದ್ದಾರೆ. ಮೂರೂ ಪಕ್ಷಗಳಿಂದ ಇಂದು ಭಾರೀ ಪ್ರಚಾರ ನಡೆಯಲಿದ್ದು, ಹುಣಸೂರು ಮತಕ್ಷೇತ್ರದಲ್ಲಿ ಮೂರೂ ಪಕ್ಷಗಳ ಕಾರ್ಯಕರ್ತರು ಪ್ರಚಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
First published: November 23, 2019, 8:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading