ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕುದುರೆಯೇ ಇಲ್ಲ, ಜೆಡಿಎಸ್ ಕುದುರೆ ಸದ್ಯಕ್ಕೆ ಕ್ಷೇತ್ರದಲ್ಲಿ ಕಾಣುತ್ತಿಲ್ಲ : ಸಿಪಿವೈ ಬೆಂಬಲಿಗರು
ಚನ್ನಪಟ್ಟಣದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಭಾರೀ ವಾಕ್ಸಮರ ನಡೆಯುತ್ತಿದೆ. ಈ ವಾಕ್ಸಮರ ಇಂದು ನಾಳೆಗೆ ನಿಲ್ಲುವ ಲಕ್ಷಣ ಗೋಚರವಾಗುತ್ತಿಲ್ಲ.
news18-kannada Updated:July 28, 2020, 3:20 PM IST

ಚನ್ನಪಟ್ಟಣದಲ್ಲಿ nಡೆದ ಸುದ್ದಿಗೋಷ್ಠಿ
- News18 Kannada
- Last Updated: July 28, 2020, 3:20 PM IST
ಚನ್ನಪಟ್ಟಣ (ಜು.28): ಸದ್ಯ ಚನ್ನಪಟ್ಟಣದಲ್ಲಿ ಕುದುರೆಯ ವಿಚಾರ ಭಾರೀ ಚರ್ಚೆಯಲ್ಲಿದೆ. ರಿಟೈರ್ಡ್ ಕುದುರೆ, ಕುಂಟು ಕುದುರೆ, ಸತ್ತ ಕುದುರೆ, ಕಾಣೆಯಾದ ಕುದುರೆ ಹೀಗೆ ಹಲವು ಕುದುರೆಗಳ ಹೆಸರು ಕೇಳಿ ಬರುತ್ತಿದೆ. ಹಾಗಂತ ಇದು ಅಸಲಿ ಕುದುರೆಗಳ ವಿಚಾರ ಅಲ್ಲವೇ ಅಲ್ಲ. ಇವೆಲ್ಲವೂ ರಾಜಕೀಯ ಕುದುರೆಗಳ ವಿಚಾರ.
ಚನ್ನಪಟ್ಟಣದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಭಾರೀ ವಾಕ್ಸಮರ ನಡೆಯುತ್ತಿದೆ. ಬಿಜೆಪಿ MLC ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರು ರಿಟೈರ್ಡ್ ಕುದುರೆ ಎಂದಿದ್ದರು. ಈ ವಿಚಾರದ ಬಗ್ಗೆ ಬಹಳ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಯೋಗೇಶ್ವರ್ ಹೇಳಿಕೆಗೆ ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿ ಯೋಗೇಶ್ವರ್ ಸತ್ತ ಕುದುರೆ, ಕುಂಟು ಕುದುರೆ ಎಂದು ಲೇವಡಿ ಮಾಡಿದ್ದರು. ಇದಕ್ಕೆ ತಿರುಗೇಟು ನೀಡುವ ಉದ್ದೇಶದಿಂಧ ಇಂದು ಬಿಜೆಪಿ ಕಾರ್ಯಕರ್ತರು ಚನ್ನಪಟ್ಟಣದ ಯೋಗೇಶ್ವರ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ‘ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕುದುರೆಯೇ ಇಲ್ಲ. ಪ್ರತಿ ಬಾರಿಯ ಚುನಾವಣೆಯಲ್ಲಿ ಬೇರೆ ಊರಿನ ಕುದುರೆಗಳನ್ನ ಕರೆದುಕೊಂಡು ಬರ್ತಾರೆ. ಈ ಕ್ಷೇತ್ರದ ಸ್ವಂತ ಕುದುರೆ ಎಲ್ಲಿದೆ?,” ಎಂದು ಕಿಚಾಯಿಸಿದರು. “ಜೆಡಿಎಸ್ ಕುದುರೆಯಂತು ಸದ್ಯಕ್ಕೆ ಕ್ಷೇತ್ರದ ಕಡೆಗೆ ಬರುತ್ತಿಲ್ಲ,” ಎಂದು ಹೇಳುವ ಮೂಲಕ ಡಿಕೆಶಿ – ಎಚ್ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಕಳೆದ ಎರಡು ವರ್ಷದಿಂದ ಚನ್ನಪಟ್ಟಣದ ಬಿಜೆಪಿ ಕುದುರೆ ಯೋಗೇಶ್ವರ್ ಯಾಕೆ ಕಾಣಲಿಲ್ಲ? ಅಧಿಕಾರ ಬಂದ ತಕ್ಷಣ ಈ ಕುದುರೆ ಪ್ರತ್ಯಕ್ಷವಾಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಪಿವೈ ಬೆಂಬಲಿಗರು, “ಇಷ್ಟು ದಿನಗಳ ಕಾಲ ನಮ್ಮ ಕುದುರೆಗೆ ಅಧಿಕಾರ ಇರಲಿಲ್ಲ. ಹಾಗಾಗಿ ಜನರೆದುರು ಬಂದಿರಲಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಕುದುರೆಯ ಸವಾರಿಯನ್ನ ನೀವೆ ನೋಡಿ,” ಎನ್ನುವ ಮೂಲಕ ಯೋಗೇಶ್ವರ್ ಇನ್ನು ಮುಂದೆ ಚನ್ನಪಟ್ಟಣದಲ್ಲಿ ಚಟುವಟಿಕೆಯಿಂದ ಇರುತ್ತಾರೆ ಎಂಬುದನ್ನು ಬಿಜೆಪಿ ಕಾರ್ಯಕರ್ತರು ಪರೋಕ್ಷವಾಗಿ ತಿಳಿಸಿದ್ದಾರೆ.
ಈ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಕುದುರೆಗಳು ಭವಿಷ್ಯದಲ್ಲಿ ಚನ್ನಪಟ್ಟಣ ಕ್ಷೇತ್ರದ ಕಡೆಗೆ ಹೇಗೆ ಸವಾರಿ ಮಾಡಲಿವೆ ಎಂಬುದರ ಮೇಲೆ ಮುಂದಿನ ರಾಜಕೀಯ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ.
ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಯೋಗೇಶ್ವರ್ ಬೆಂಬಲಿಗರಾದ ಆನಂದಸ್ವಾಮಿ, ಲಿಂಗಪ್ಪ, ಶಿವಲಿಂಗಯ್ಯ, ಮಲವೇಗೌಡ, ಕೆ.ಟಿ.ಜಯರಾಮು, ಶಿವಕುಮಾರ್, ರವೀಶ್, ಹರೂರು ರಾಜಣ್ಣ ಸೇರಿದಂತೆ ಹಲವರು ಇದ್ದರು.
ಚನ್ನಪಟ್ಟಣದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಭಾರೀ ವಾಕ್ಸಮರ ನಡೆಯುತ್ತಿದೆ. ಬಿಜೆಪಿ MLC ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಬ್ಬರು ರಿಟೈರ್ಡ್ ಕುದುರೆ ಎಂದಿದ್ದರು. ಈ ವಿಚಾರದ ಬಗ್ಗೆ ಬಹಳ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಯೋಗೇಶ್ವರ್ ಹೇಳಿಕೆಗೆ ಜೆಡಿಎಸ್ - ಕಾಂಗ್ರೆಸ್ ಕಾರ್ಯಕರ್ತರು ಸುದ್ದಿಗೋಷ್ಠಿ ನಡೆಸಿ ಯೋಗೇಶ್ವರ್ ಸತ್ತ ಕುದುರೆ, ಕುಂಟು ಕುದುರೆ ಎಂದು ಲೇವಡಿ ಮಾಡಿದ್ದರು.