ಇಂದು ಕೆ.ಆರ್​.ಪೇಟೆ ಅಖಾಡಕ್ಕೆ ಮೂರು ಪಕ್ಷಗಳ ನಾಯಕರು ಎಂಟ್ರಿ; ಒಕ್ಕಲಿಗರ ಮತಬೇಟೆಗೆ ರಣತಂತ್ರ

ಬಿಜೆಪಿ ಪಕ್ಷದ ಪರವಾಗಿ ಕೇಂದ್ರ ಸಚಿವ ಸದಾನಂದಗೌಡ ಅಖಾಡಕ್ಕೆ ಇಳಿಯಲಿದ್ದಾರೆ.  ಸಿ.ಪಿ.ಯೋಗೇಶ್ವರ್​ ಹಾಗೂ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಪ್ರಚಾರ ನಡೆಸಲಿದ್ದಾರೆ.

Latha CG | news18-kannada
Updated:November 27, 2019, 8:45 AM IST
ಇಂದು ಕೆ.ಆರ್​.ಪೇಟೆ ಅಖಾಡಕ್ಕೆ ಮೂರು ಪಕ್ಷಗಳ ನಾಯಕರು ಎಂಟ್ರಿ; ಒಕ್ಕಲಿಗರ ಮತಬೇಟೆಗೆ ರಣತಂತ್ರ
ಹೆಚ್​.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್
  • Share this:
ಮಂಡ್ಯ(ನ.27): ಇಂದು ಮೂರು ಪಕ್ಷಗಳು ಕೆ.ಆರ್.ಪೇಟೆಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿವೆ. ಹೀಗಾಗಿ ಕೆ.ಆರ್.ಪೇಟೆ ಉಪಚುನಾವಣೆ ಅಖಾಡ ರಂಗೇರಲಿದೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಒಕ್ಕಲಿಗ ನಾಯಕರು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಜೆಡಿಎಸ್​ ಪಕ್ಷದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅಖಾಡಕ್ಕಿಳಿಯಲು ಸಜ್ಜಾಗಿದ್ಧಾರೆ. ಕೆ.ಆರ್​.ಪೇಟೆ ತಾಲೂಕಿನ ಹಲವೆಡೆ ರೋಡ್​ ಶೋ ನಡೆಸಲಿದ್ಧಾರೆ. ಬಳಿಕ ಕಿಕ್ಕೇರಿಯಲ್ಲಿ ಸಭೆ ನಡೆಸಲಿದ್ದು, ಮತಯಾಚನೆ ಮಾಡಲಿದ್ದಾರೆ.

ಇನ್ನು, ಕಾಂಗ್ರೆಸ್​​ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅಖಾಡಕ್ಕಿಳಿಯಲಿದ್ದಾರೆ. ಇಷ್ಟೇ ಅಲ್ಲದೇ, ಸಂಜೆ ವೇಳೆಗೆ ಮಾಜಿ ಸಚಿವ ಡಿಕೆ ಶಿವಕುಮಾರ್​ ಕೆ.ಆರ್​.ಪೇಟೆಗೆ ಆಗಮಿಸಿ ಮತಪ್ರಚಾರ ಮಾಡಲಿದ್ದಾರೆ. ಮಹಿಳಾ ಮತದಾರರ ಪರವಾಗಿ ಮಾಜಿ ಸಚಿವೆ ಉಮಾಶ್ರೀ ಕೂಡ ಮತಯಾಚನೆ ಮಾಡಲಿದ್ದಾರೆ.

ನಿತ್ಯಾನಂದನಿಗೆ ಹೊಸ ಸಂಕಷ್ಟ; ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಯುವತಿಯ ಕೇಸ್​ ಸಿಬಿಐಗೆ?

ಬಿಜೆಪಿ ಪಕ್ಷದ ಪರವಾಗಿ ಕೇಂದ್ರ ಸಚಿವ ಸದಾನಂದಗೌಡ ಅಖಾಡಕ್ಕೆ ಇಳಿಯಲಿದ್ದಾರೆ.  ಸಿ.ಪಿ.ಯೋಗೇಶ್ವರ್​ ಹಾಗೂ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಪ್ರಚಾರ ನಡೆಸಲಿದ್ದಾರೆ.

ಒಕ್ಕಲಿಗರ ಮತ ಬೇಟೆಗೆ ಮೂರು ಪಕ್ಷಗಳು ಅಖಾಡಕ್ಕಿಳಿಯಲಿವೆ. ಒಕ್ಕಲಿಗರ ಕೋಟೆ ಭೇದಿಸಲು ಒಕ್ಕಲಿಗ ಕಲಿಗಳು ರಣತಂತ್ರ ಹೆಣೆದಿದ್ದಾರೆ.  ಒಂದೇ ದಿನ ಮೂರು ಪಕ್ಷಗಳ ಪ್ರಮುಖ ಒಕ್ಕಲಿಗ ನಾಯಕರು ಅಖಾಡಕ್ಕೆ ಎಂಟ್ರಿ ಕೊಡಲಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಪ್ರತ್ಯೇಕವಾಗಿ ತಾಲೂಕಿನ ಹಲವು ಹೋಬಳಿ ಕೇಂದ್ರಗಳಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಮಾಡಿದ್ದುಣ್ಣೋ ಮಹರಾಯ; ಸಿಎಂ ಸ್ಥಾನದಿಂದ ಕೆಳಗಿಳಿದ ಫಡ್ನವೀಸ್​ ಕಾಲೆಳೆದ ಎಚ್​.ಡಿ. ಕುಮಾರಸ್ವಾಮಿ
First published: November 27, 2019, 8:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading