ಡಿಕೆಶಿಯಿಂದ ಶ್ರೀರಾಮುಲುಗೆ ಡಿಸಿಎಂ ಆಫರ್​; ಸದನದಲ್ಲಿ ಇಬ್ಬರ ನಡುವೆ ನಡೆದ ಮಾತುಕತೆ ಬಯಲು

ಬಿಜೆಪಿ ಅಧಿಕಾರಕ್ಕೆ ಬಂದರೂ ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನದ ಪ್ರಮುಖ ಆಕಾಂಕ್ಷಿ. ನಿಮಗೆ ಈ ಸ್ಥಾನ ಸಿಗುವುದು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಹಕಾರ ನೀಡಿದರೆ ನಿಮಗೆ ಡಿಸಿಎಂ ಸ್ಥಾನ ನೀಡುತ್ತೇವೆ ಎಂದು ಶ್ರೀರಾಮುಲುಗೆ ಮೈತ್ರಿ ನಾಯಕ ಡಿ.ಕೆ. ಶಿವಕುಮಾರ್ ಆಮಿಷ ಒಡ್ಡಿದ್ದಾರೆ ಎಂಬ ಊಹಾಪೋಹಗಳು ಇದೀಗ ರೆಕ್ಕೆ ಬಿಚ್ಚಿಕೊಂಡಿವೆ.

MAshok Kumar | news18
Updated:July 18, 2019, 4:23 PM IST
ಡಿಕೆಶಿಯಿಂದ ಶ್ರೀರಾಮುಲುಗೆ ಡಿಸಿಎಂ ಆಫರ್​; ಸದನದಲ್ಲಿ ಇಬ್ಬರ ನಡುವೆ ನಡೆದ ಮಾತುಕತೆ ಬಯಲು
ಸದನದಲ್ಲಿ ವಿರಾಮದ ವೇಳೆ ಪರಸ್ಪರ ಚರ್ಚೆ ನಡೆಸಿದ ಶ್ರೀರಾಮುಲು, ಡಿ.ಕೆ. ಶಿವಕುಮಾರ್.
  • News18
  • Last Updated: July 18, 2019, 4:23 PM IST
  • Share this:
ಬೆಂಗಳೂರು (ಜುಲೈ.18); ಬಿಜೆಪಿ ಪಕ್ಷದ ಹಿರಿಯ ನಾಯಕ ಮಾಜಿ ಶಾಸಕ ಶ್ರೀರಾಮುಲು ಅವರಿಗೆ ಮೈತ್ರಿ ನಾಯಕ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಸ್ಥಾನದ ಆಫರ್ ಮಾಡಿದ್ರಾ? ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ ಇಂದಿನ ಸದನದಲ್ಲಿ ಈ ಇಬ್ಬರೂ ನಾಯಕರ ನಡುವಿನ ಮಾತುಕತೆ.

ಗುರುವಾರದ ಅಧಿವೇಶನದಲ್ಲಿ ಬಹುಮತ ಸಾಬೀತಿನ ಮೇಲೆ ಚರ್ಚೆ ಆರಂಭವಾಗಿತ್ತು. ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಆಡಳಿತ ಪಕ್ಷದ ಪ್ರಮುಖ ನಾಯಕರು ಮಾತನಾಡಿದ ನಂತರ ಸಭಾಧ್ಯಕ್ಷರಾದ ಕೆ.ಆರ್. ರಮೇಶ್ ಕುಮಾರ್ ಮಧ್ಯಾಹ್ನ 1.40ಕ್ಕೆ ಊಟದ ವಿರಾಮ ಘೋಷಿಸಿದ್ದರು. ಆದರೆ, ಈ ಸಮಯದಲ್ಲಿ ಸದನದಲ್ಲಿ ಶ್ರೀರಾಮುಲು ಹಾಗೂ ಡಿ.ಕೆ. ಶಿವಕುಮಾರ್​ ನಡುವಿನ  ಮಾತುಕತೆ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಊಟದ ವಿರಾಮ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ನಾಯಕ ಶ್ರೀರಾಮುಲು ಬಳಿ ಆಗಮಿಸಿದ ಡಿ.ಕೆ. ಶಿವಕುಮಾರ್ ಅವರ ಬಳಿ ದೀರ್ಘ ಚರ್ಚೆ ನಡೆಸಿದರು.

ಇದನ್ನೂ ಓದಿ ; Karnataka Political Crisis LIVE: ಕೈ ಶಾಸಕ ಶ್ರೀಮಂತ್ ಪಾಟೀಲ್​ ಕುಟುಂಬಸ್ಥರನ್ನು ಸಂಪರ್ಕಿಸುವಂತೆ ಗೃಹ ಇಲಾಖೆಗೆ ಸೂಚಿಸಿದ ಸ್ಪೀಕರ್

ಈ ಚರ್ಚೆಯ ವೇಳೆ ಡಿ.ಕೆ. ಶಿವಕುಮಾರ್, “ಬಿಜೆಪಿ ಅಧಿಕಾರಕ್ಕೆ ಬಂದರೂ ರಮೇಶ್ ಜಾರಕಿಹೊಳಿ ಡಿಸಿಎಂ ಸ್ಥಾನದ ಪ್ರಮುಖ ಆಕಾಂಕ್ಷಿ. ನಿಮಗೆ ಈ ಸ್ಥಾನ ಸಿಗುವುದು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಸಹಕಾರ ನೀಡಿದರೆ ನಿಮಗೆ ಡಿಸಿಎಂ ಸ್ಥಾನ ನೀಡುತ್ತೇವೆ” ಎಂದು ಶ್ರೀರಾಮುಲುಗೆ ಆಮಿಷ ಒಡ್ಡಿದ್ದಾರೆ ಎಂಬ ಊಹಾಪೋಹಗಳು ಇದೀಗ ರೆಕ್ಕೆ ಬಿಚ್ಚಿಕೊಂಡಿವೆ. ಈ ನಡುವೆ ಉಬಯ ಪಕ್ಷದ ನಾಯಕರು ಈ ಇಬ್ಬರ ನಡುವಿನ ಚರ್ಚೆಯನ್ನು ಕುತೂಹಲದಿಂದ ವೀಕ್ಷಿಸಿದರು.ಚರ್ಚೆಯ ನಂತರ ಇಬ್ಬರೂ ನಾಯಕರು ಪರಸ್ಪರ ನಗುತ್ತಲೇ ದೂರವಾದರು. ಆದರೂ, ಸಹ ಈ ಚರ್ಚೆ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯ ಯಾವುದೇ ತಿರುವನ್ನು ಪಡೆಯಬಹುದು ಎಂಬ ಸಾಧ್ಯತೆಯನ್ನು ಮುಂದಿಟ್ಟಿದೆ.ಇದನ್ನೂ ಓದಿ : ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾರಕ ಖಾಯಿಲೆ, ಇದನ್ನು ಹೋಗಲಾಡಿಸದೆ ಗಾಂಧಿ ಆತ್ಮಕ್ಕೆ ಶಾಂತಿ ಇಲ್ಲ; ಕಿಡಿಕಾರಿದ ಸಿದ್ದರಾಮಯ್ಯ!
First published: July 18, 2019, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading