ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಂಪುಟ ಸರ್ಜರಿಗೆ ಮುಂದಾದ ಸಿದ್ದು-ಎಚ್​ಡಿಕೆ; ಅತೃಪ್ತರ ಸೆಳೆಯಲು ಮಂತ್ರಿ ಸ್ಥಾನದ ಆಫರ್?

ಪಕ್ಷದಲ್ಲಿರುವ ಬಂಡಾಯದ ಕುರಿತು ನಿನ್ನೆ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಸಂಪುಟ ಪುನರಾಚನೆಯ ದಾಳ ಉರುಳಿಸಲು ಮುಂದಾಗಿದ್ದಾರೆ.

Seema.R | news18
Updated:May 25, 2019, 12:34 PM IST
ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಂಪುಟ ಸರ್ಜರಿಗೆ ಮುಂದಾದ ಸಿದ್ದು-ಎಚ್​ಡಿಕೆ; ಅತೃಪ್ತರ ಸೆಳೆಯಲು ಮಂತ್ರಿ ಸ್ಥಾನದ ಆಫರ್?
ಸಿದ್ದರಾಮಯ್ಯ, ಕುಮಾರಸ್ವಾಮಿ
  • News18
  • Last Updated: May 25, 2019, 12:34 PM IST
  • Share this:
ಬೆಂಗಳೂರು (ಮೇ.25): ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಿಜೆಪಿ ಈಗಾಗಲೇ ಮೈತ್ರಿ ಸರ್ಕಾರಕ್ಕೆ ಗಡುವು ನೀಡಿದೆ. ಒಂದು ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿರುವ ಬಿಜೆಪಿಗೆ ಸೇರಲು ಈಗಾಗಲೇ ಅತೃಪ್ತರು ಸಿದ್ಧವಾಗಿದ್ದರೆ. ಆದರೆ, ಸರ್ಕಾರವನ್ನು ಹೇಗಾದರೂ ಉಳಿಸಿಕೊಳ್ಳಿ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸೂಚನೆ ಹಿನ್ನೆಲೆಯಲ್ಲಿ ಮೈತ್ರಿ ನಾಯಕರು ಹೊಸ ತಂತ್ರ ಹೂಡಲು ಸಿದ್ದವಾಗಿದ್ದಾರೆ.

ಮೈತ್ರಿ ಸರ್ಕಾರ ಸಂಪುಟ ರಚನೆಯಾದ ಬಳಿಕ  ಭಿನ್ನಮತ ಭುಗಿಲೆದ್ದಿತ್ತು. ಈ ನಡುವೆ ಆಪರೇಷನ್​ ಕಮಲ ನಡೆಸಲು ಹೋದ ಬಿಜೆಪಿ ಕೂಡ ತನ್ನ ಪ್ರಯತ್ನದಲ್ಲಿ ಆತುರ ಬಿದ್ದು ಎಡವಿತು. ಆದರೆ ಈಗ ದೇಶದಲ್ಲಿ ಮೋದಿ ಅಲೆ ಕಾಣುತ್ತಿದ್ದು, ಕಾಂಗ್ರೆಸ್​ ಅತೃಪ್ತರು ಬಿಜೆಪಿ ಸೇರಲು ಸಮಯಕ್ಕೆ ಕಾಯುತ್ತಿದ್ದಾರೆ.

ಈಗ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ದೋಸ್ತಿ ನಾಯಕರು, ಅಸಮಾಧಾನಿತ ಶಾಸಕರು ಪಕ್ಷ ತೊರೆಯದಂತೆ ಸಚಿವ ಸ್ಥಾನದ ಆಮಿಷ ನೀಡಲು ಸಜ್ಜಾಗಿದ್ದಾರೆ.

ಸಚಿವ ಸ್ಥಾನದ ಆಮಿಷ

ಪಕ್ಷದಲ್ಲಿರುವ ಬಂಡಾಯದ ಕುರಿತು ನಿನ್ನೆ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ಸಂಪುಟ ಪುನರಾಚನೆಯ ದಾಳ ಉರುಳಿಸಲು ಮುಂದಾಗಿದ್ದಾರೆ. ಸರ್ಕಾರದಲ್ಲಿ ಈಗಾಗಲೇ 10ಕ್ಕೂ ಹೆಚ್ಚು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ. ಈ ಅತೃಪ್ತರಲ್ಲಿ ಅರ್ಧಕ್ಕೂ ಹೆಚ್ಚಿನ ಜನರನ್ನು ತಮ್ಮ ಬಳಿಯೇ ಉಳಿಸಿಕೊಳ್ಳಬೇಕು ಎಂದರೆ ಅದು ಕೇವಲ ಸಂಪುಟ ರಚನೆಯಿಂದ ಮಾತ್ರ ಸಾಧ್ಯ ಎಂದು ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್​ನ ಇಬ್ಬರು ಹಾಗೂ ಕಾಂಗ್ರೆಸ್​ನ ಇಬ್ಬರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಸುವ ಬಗ್ಗೆ ಸಿದ್ದರಾಮಯ್ಯ ಗೃಹ ಕಚೇರಿಯಲ್ಲಿ ಚರ್ಚೆ ನಡೆದಿದೆ. ಈಗಾಗಲೇ ಜೆಡಿಎಸ್​ನಲ್ಲಿ ಎರಡು ಸ್ಥಾನ ಖಾಲಿ ಇದ್ದು, ಮತ್ತೆ ನಾಲ್ಕು ಸ್ಥಾನಕ್ಕೆ ರಾಜೀನಾಮೆ ಕೊಡಿಸಬೇಕು. ಆಗ 10 ಅತೃಪ್ತ ಶಾಸಕರಲ್ಲಿ ಆರು ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ. ಇದರಿಂದ ಅವರು ಪಕ್ಷದಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಆಪರೇಷನ್​ ಕಮಲ ತಪ್ಪಿಸಲು ಇದೊಂದೇ ಮಾರ್ಗ ಇರುವುದು ಎಂಬ ನಿರ್ಣಯವನ್ನು ದೋಸ್ತಿ ನಾಯಕರು ನಡೆಸಿದ್ದಾರೆ.

ಸರ್ಕಾರದಲ್ಲಿ ಕಾಂಗ್ರೆಸ್​ ಶಾಸಕರೇ ಹೆಚ್ಚು ಅತೃಪ್ತರಿದ್ದು, ಅವರನ್ನು ಸೆಳೆಯುವುದು ಈಗಿನ ಮುಖ್ಯ ಗುರಿ. ಇದಕ್ಕಾಗಿ ಬುಧವಾರ ನಡೆಯಲಿರುವ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿಯೇ ಅತೃಪ್ತ ನಾಯಕರಿಗೆ ಭರವಸೆ ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.ಇದನ್ನು ಓದಿ: ಸಿದ್ದು ಸಿಎಂ ಆಗದಿದ್ರೆ ನಾವು ಪಕ್ಷ ಬಿಡ್ತೇವೆ ಎನ್ನುತ್ತಿರುವ ಕೈ ಶಾಸಕರು; ಹೈ ಸ್ಪೀಡ್​ನಲ್ಲಿ ಆಪರೇಷನ್ ಕಮಲ!

ಇಂದು ಕಾಂಗ್ರೆಸ್​ ಕಾರ್ಯಕಾರಿಣಿ ಸಭೆಗಾಗಿ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಈ ವಿಚಾರ ಕುರಿತು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಹಾಗೂ ಕಾಂಗ್ರೆಸ್​ ಉಸ್ತುವಾರಿ ವೇಣುಗೋಪಾಲ್​ ಜೊತೆ ಚರ್ಚೆ ನಡೆಸುವ ಸಾಧ್ಯತೆ ಕೂಡ ಇದೆ. ರಾಹುಲ್​ ಆಜ್ಞೆ ಹಿನ್ನೆಲೆ ದೋಸ್ತಿ ನಾಯಕರು ಈ ನಿರ್ಧಾರಕ್ಕೆ ಬಂದಿದ್ದು, ಆಪರೇಷನ್​ ಕಮಲ ತಡೆಯಲು ಇದೊಂದೇ ಮಾರ್ಗ ರಾಜ್ಯದ ನಾಯಕರಿಗೆ ಕಂಡು ಬಂದಿದೆ. ಅಷ್ಟೇ ಅಲ್ಲದೇ. ಸಿದ್ದರಾಮಯ್ಯ ಅವರು ಇಂದು ತಮ್ಮ ಶಿಷ್ಯ, ಪಕ್ಷೇತರ ಶಾಸಕ ಶಂಕರ್ ಅವರನ್ನು ತಮ್ಮೊಂದಿಗೆ ದೆಹಲಿಗೆ ಕರೆದುಕೊಂಡು ಹೋಗುವ ಮೂಲಕ ಆಪರೇಷನ್​ ಕಮಲಗೆ ಕೌಂಟರ್​ ನೀಡಿದ್ದಾರೆ.

ಅತೃಪ್ತರ ಚಲನವಲನದ ಮೇಲೆ ಗಮನ

ಸರ್ಕಾರ ಉಳಿಸಿಕೊಳ್ಳಲು ಮುಂದಾಗಿರುವ ಸಿಎಂ ಕುಮಾರಸ್ವಾಮಿ, ಅತೃಪ್ತ ನಾಯಕರ ಚಲನವಲನದ ಮೇಲೆ ಗಮನಹರಿಸಲು ಮುಂದಾಗಿದ್ದಾರೆ.

ಬಿಜೆಪಿ ಜೊತೆ ಈಗಾಗಲೇ ಸಂಪರ್ಕ ಹೊಂದಿರುವ ಶಾಸಕರ ಮೇಲೆ ಕಣ್ಣಿಟಲು ಗುಪ್ತಚರ ಇಲಾಖೆಗೆ ಸಿಎಂ ಸೂಚನೆ ನೀಡಿದ್ದಾರೆ. ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ, ಕಂಪ್ಲಿ ಗಣೇಶ್,  ಪ್ರತಾಪ್​ ಗೌಡ ಪಾಟೀಲ್​, ಬಿಸಿ ಪಾಟೀಲ್, ನಾಗೇಂದ್ರ​ ಸೇರಿದಂತೆ ಅನೇಕರ ಮೇಲೆ ಈಗಾಗಲೇ ನಿಗಾ ವಹಿಸಲಾಗಿದೆ.

ಅಷ್ಟೇ ಅಲ್ಲದೇ ಅತೃಪ್ತರಿಗೆ ಸಿಎಂ ಕುಮಾರಸ್ವಾಮಿ ಕರೆ ಮಾಡಿ ಮನವೊಲಿಕೆ ಪ್ರಯತ್ನ ಕೂಡ ನಡೆದಿದೆ. ಸಿದ್ದರಾಮಯ್ಯ ಕೂಡ ಈ ಬಾರಿ ಅತೃಪ್ತರ ಮನವೊಲಿಕೆ ಸ್ವತಃ ಮುಂದಾಗುವುದಾಗಿ ತಿಳಿಸಿದ್ದು, ಶಾಸಕರಿಗೆ ಸಮಾಧಾನ ಮಾಡುವುದಾಗಿ ಸಿಎಂಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮೇ 29ರಂದು ನಡೆಯುವ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿಯೇ ಈ ಪ್ರಯತ್ನ ನಡೆಸಲಾಗುವುದು. ಅಗತ್ಯವಾದರೆ ನಿಮಗೂ ಸಭೆಗೆ ಆಹ್ವಾನ ನೀಡಲಾಗುವುದು ಎಂದು ಕುಮಾರಸ್ವಾಮಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

(ವರದಿ-ಚಿದಾನಂದ ಪಟೇಲ್​)

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'

First published: May 25, 2019, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading