ಬಾಂಬೆ ಕಳ್ಳ, ಬಾಂಬೆ ಕಳ್ಳ..! ಕೆಆರ್​ ಪೇಟೆ ಅಭ್ಯರ್ಥಿಗೆ ಜನ ಕೊಟ್ಟ ಮರ್ಯಾದೆ ಹೀಗಿತ್ತು

ನಾರಾಯಣ ಗೌಡ ಮೆರವಣಿಗೆ ವೇಳೆ ಕಳ್ಳ ಕಳ್ಳ ಬಾಂಬೆ ಕಳ್ಳ ಎಂದು ಘೋಷಣೆ ಕೂಗಿದ್ದರಿಂದ ಕ್ಷೇತ್ರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.  ತಾಲೂಕು ಕಚೇರಿ ಒಳಗೆ ನಾರಾಯಣಗೌಡ ಘೇರಾವ್​ ಹಾಕಿದ್ದ ಜೆಡಿಎಸ್​ ಕಾರ್ಯಕರ್ತರು, ಬ್ಯಾರಿಕೇಡ್ ಮುರಿದು, ಒಳ ಪ್ರವೇಶಿಸಲು ಯತ್ನಿಸಿದರು. ಅಲ್ಲದೇ ನಾರಾಯಣ ಗೌಡರ ಮೇಲೆ ಜೆಡಿಎಸ್​ ಬಾವುಟ ತೂರಿ ಆಕ್ರೋಶ ವ್ಯಕ್ತಪಡಿಸಿದರು

Seema.R | news18-kannada
Updated:November 18, 2019, 4:39 PM IST
ಬಾಂಬೆ ಕಳ್ಳ, ಬಾಂಬೆ ಕಳ್ಳ..! ಕೆಆರ್​ ಪೇಟೆ ಅಭ್ಯರ್ಥಿಗೆ ಜನ ಕೊಟ್ಟ ಮರ್ಯಾದೆ ಹೀಗಿತ್ತು
ನಾಮಪತ್ರ ಸಲ್ಲಿಸುತ್ತಿರುವ ನಾರಾಯಣ ಗೌಡ
  • Share this:
ಮಂಡ್ಯ (ನ.18): ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇಂದು ಕೆಆರ್​ ಪೇಟೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ನಾರಾಯಣ ಗೌಡ, ಕಾಂಗ್ರೆಸ್​ ಅಭ್ಯರ್ಥಿಯಾಗಿ ಕೆಬಿ ಚಂದ್ರ ಶೇಖರ್​ ನಾಮಪತ್ರ ಸಲ್ಲಿಸಿದರು. 

ನಾಮಪತ್ರ ಸಲ್ಲಿಕೆ ವೇಳೆ ನಾರಾಯಣ ಗೌಡರಿಗೆ ಜೆಡಿಎಸ್​ ಕಾರ್ಯಕರ್ತರು ಘೇರಾವ್​ ಹಾಕಿ ಚಪ್ಪಲಿ ತೂರಿದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್​ ಮೆರವಣಿಗೆ ಮೂಲಕ ನಾರಾಯಣ ಗೌಡ ಶಕ್ತಿ ಪ್ರದರ್ಶಿಸಿದರು. ಈ ಮೆರವಣಿಗೆ ವೇಳೆ ಕೆಲವರು ಚಪ್ಪಲಿ ತೂರಿದ ಘಟನೆ ನಡೆದಿದೆ. ಘಟನೆಯಲ್ಲಿ ಸಚಿವ ಮಾಧು ಸ್ವಾಮಿ, ನಾರಾಯಣಗೌಡ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಆರೋಪಿಸಿದ್ದಾರೆ. ಇನ್ನು ಈ ವಿಷಯದ ಕುರಿತು ನಾರಾಯಣಗೌಡ  ಜಿಲ್ಲಾ ಎಸ್ಪಿ ಅವರಿಗೂ ತರಾಟೆ ತೆಗೆದುಕೊಂಡರು.

ಮುಖಾಮುಖಿಯಾದ ಕಾಂಗ್ರೆಸ್​-ಬಿಜೆಪಿ ಅಭ್ಯರ್ಥಿಗಳು:

ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಬಿಜೆಪಿ-ಕಾಂಗ್ರೆಸ್ ಮುಖಾಮುಖಿಯಾದರು. ಈ ವೇಳೆ ಸಚಿವರ ಕಾರಿನ ಎದುರೇ ಕಾಂಗ್ರೆಸ್​ ಕಾರ್ಯಕರ್ತರು ಪಟಾಕಿ ಸಿಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರ ಮುನ್ನೆಚ್ಚರಿಕೆಯಿಂದ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಅಹಿತಕರ ಘಟನೆ ಜರುಗದಂತೆ ಕ್ರಮವಹಿಸಿದರು.

'ಕಳ್ಳ ಕಳ್ಳ ಬಾಂಬೆ ಕಳ್ಳ':

ಅಷ್ಟೇ ಅಲ್ಲದೇ ಅವರ ಮೆರವಣಿಗೆ ವೇಳೆ 'ಕಳ್ಳ ಕಳ್ಳ ಬಾಂಬೆ ಕಳ್ಳ' ಎಂದು ಘೋಷಣೆ ಕೂಗಿದ್ದರಿಂದ ಕ್ಷೇತ್ರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ತಾಲೂಕು ಕಚೇರಿ ಒಳಗೆ ನಾರಾಯಣಗೌಡರಿಗೆ ಘೇರಾವ್​ ಹಾಕಿದ್ದ ಜೆಡಿಎಸ್​ ಕಾರ್ಯಕರ್ತರು, ಬ್ಯಾರಿಕೇಡ್ ಮುರಿದು, ಒಳ ಪ್ರವೇಶಿಸಲು ಯತ್ನಿಸಿದರು. ಅಲ್ಲದೇ ನಾರಾಯಣ ಗೌಡರ ಮೇಲೆ ಜೆಡಿಎಸ್​ ಬಾವುಟ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಉದ್ರಿಕ್ತರನ್ನು ಸಮಾಧಾನ ಮಾಡಲು ಹರಸಾಹಸ ನಡೆಸಿ, ಅವರನ್ನು ಎಸ್ಪಿ ಕಾರಿನಲ್ಲಿ ಕರೆದೊಯ್ದರು.

ನಾಮಪತ್ರ ಸಲ್ಲಿಕೆ ವೇಳೆ ಕೂಡ ಎಡವಟ್ಟು:ನಾಮಪತ್ರ ಸಲ್ಲಿಕೆ ಸಮಯ ಮೀರಿದ ಹಿನ್ನೆಲೆ ಅವರು ಕಚೇರಿಗೆ ಓಡೋಡಿ ಬಂದಿದ್ದಾರೆ. ಈ ವೇಳೆ ಅಧಿಕಾರಿಗಳಿ ಬಿ ಫಾರಂ ನೀಡದೇ ಎ ಫಾರಂ ನೀಡಿ ನಾಮಪತ್ರ ಸಲ್ಲಿಸಲು ಮುಂದಾದರು. ಬಿ ಫಾರಂ ನೀಡುವಂತೆ ಚುನಾವಣಾಧಿಕಾರಿಗಳು ಎಚ್ಚರಿಸಿದ ಬಳಿಕ ಆಪ್ತ ಸಹಾಯಕನ ಬಳಿ ತಡಕಾಡಿ ಐದು ನಿಮಿಷದ ಬಳಿಕ ಬಿ ಫಾರಂ ನೀಡಿದರು. ಇನ್ನು ಚುನಾವಣಾ ಪ್ರಮಾಣ ಪತ್ರ ಓದುವಾಗ ಕೂಡ ಬಡಬಡಾಯಿಸಿದರು. ಬಳಿಕ ಪತ್ನಿ ಹಾಗೂ ಚುನಾವಣಾಧಿಕಾರಗಳ ಸಹಾಯದಂತೆ ಅವರು ಹೇಳಿಕೊಟ್ಟಂತೆ ಪ್ರಮಾಣಪತ್ರ ಓದಿದರು.

ಗಲಾಟೆಗೆ ಅಧಿಕಾರಿಗಳೇ ಕಾರಣ:

ನಾಮಪತ್ರ ಸಲ್ಲಿಕೆ ವೇಳೆ ನಡೆದ ಗಲಾಟೆಗೆ ಚುನಾವಣಾ ಅಧಿಕಾರಿಗಳೇ ಕಾರಣ ಎಂದು  ಸಚಿವ ಮಾಧುಸ್ವಾಮಿ ಆರೋಪಿಸಿದ್ದಾರೆ. ಎರಡು-ಮೂರು ಪಕ್ಷಗಳಿದ್ದಾಗ ಸರಿಯಾಗಿ ಸಮಯ ಕೊಡಬೇಕು. ಅಧಿಕಾರಿಗಳಿಗೆ ಸ್ವಲ್ಪವೂ ಪ್ರಜ್ಞೆ ಇಲ್ಲ. ಅಧಿಕಾರಿಗಳಿಗೆ ಪ್ರಜ್ಞೆ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಯಾರೂ ಹಲ್ಲೆ ಮಾಡಿಲ್ಲ, ಹಲ್ಲೆಗೆ ಯತ್ನಿಸಿದ್ದರು. ಆಗ ನನ್ನನ್ನು ಕಾರ್ಯಕರ್ತರು ಕರೆದೊಯ್ದರು. ಸಹಿಸಿಕೊಂಡು ಹೋಗುವಷ್ಟು ರಣಹೇಡಿ ನಾನಲ್ಲ ಎಂದರು.

 
First published:November 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ