ಕಾಂಗ್ರೆಸ್ ಪಕ್ಷ ಮುಳುಗುವ ಹಡಗು; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​ ಕುಮಾರ್​ ಕಟೀಲ್​​ ಗೇಲಿ​

ಕಾಂಗ್ರೆಸ್ ಮತಕ್ಕಾಗಿ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಜೈ ಎಂದವರು ಬೆಂಬಲಕ್ಕೆ ನಿಂತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ
ನಳಿನ್​ ಕುಮಾರ್ ಕಟೀಲ್.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್.

  • Share this:
ರಾಯಚೂರು (ಫೆ.20) : ಕರ್ನಾಟಕ ಕಾಂಗ್ರೆಸ್ ಪಕ್ಷ ಮುಳುಗುವ ಹಡಗಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ, ವಿರೋಧ ಪಕ್ಷ ನಾಯಕರನ್ನು ಆಯ್ಕೆ ಮಾಡಲು ಆಗಿಲ್ಲ. ಕಾಂಗ್ರೆಸ್ ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒಂದು ರಾಜ್ಯದಲ್ಲಿ ಪಕ್ಷದ ಪದಾಧಿಕಾರಿಗಳನ್ನು ನೇಮಿಸಲಾಗದವರು ದೇಶದ ಚುಕ್ಕಾಣಿ ಹಿಡಿಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್​​​ ಕುಮಾರ್​ಕಟೀಲ್​​​ ಪ್ರಶ್ನೆ ಮಾಡಿದ್ದಾರೆ. 

ಕಾಂಗ್ರೆಸ್ ಸ್ವಾತಂತ್ರ್ಯ ನಂತರ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮಾಡಿದೆ. ಕಾಂಗ್ರೆಸ್ ಅಳಿದು ಹೋಗುತ್ತಿದೆ. ಸಿದ್ದರಾಮಯ್ಯ ಸರಕಾರದ ಕಾಲದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆಯಾಗಿವೆ. ಗಣಪತಿ ಹತ್ಯೆ, ಡಿ ಕೆ ರವಿ ಸಾವಿನ ಸಂದರ್ಭದಲ್ಲಿ ಸಿದ್ದರಾಮಯ್ಯ ಕಣ್ಣಿನಲ್ಲಿ ಕಣ್ಣೀರು ಬರಲಿಲ್ಲ ಎಂದು ಹೇಳಿದರು.

ಅವರ ಅವಧಿಯಲ್ಲಿ 24 ಹಿಂದು ಕಾರ್ಯಕರ್ತರ ಹತ್ಯೆಯಾಯಿತು. ಸಿದ್ದರಾಮಯ್ಯ ಕಾಲದಲ್ಲಿ ಮರಳು ಮಾಫಿಯಾ ಇತ್ತು. ಅಧಿಕಾರ ಸಿಗದಿದ್ದಾಗ ಕಣ್ಣೀರು ಹಾಕಿದರು. 15 ಜನರು ಕಾಂಗ್ರೆಸ್ಸಿನ ಬಂದಾಗ ಕಣ್ಣೀರು ಹಾಕಿದರು. ನಾಡಿನ ಕಣ್ಣೀರೊರೆಸುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಾಡುತ್ತಿದ್ದಾರೆ ಎಂದರು.

ಪೌರತ್ವ ಕಾಯ್ದೆಯ ಮುಖಾಂತರ ಪರಿವರ್ತನೆ ಗಾಳಿ ಬೀಸುತ್ತಿದೆ. ಮಹಾತ್ಮಗಾಂಧಿ, ನೆಹರು ಹಾಗೂ ಇಂದಿರಾಗಾಂಧಿಯವರು ಕನಸು ಮಾಡಿದ್ದು ಬಿಜೆಪಿ ಕಾಂಗ್ರೆಸ್ ಅಲ್ಲ. ಸಿಎಎ ಯಾರಿಗೆ ಅನ್ಯಾಯವಾಗಿದೆ ಕಾಂಗ್ರೆಸ್ ಹೇಳಲಿ. ಈ ದೇಶದ ಒಬ್ಬರಿಗೂ ತೊಂದರೆ ನೀಡುವುದಿಲ್ಲ. ಈ ದೇಶದ ಮುಸ್ಲಿಂ ರಿಗೆ ಕಾಂಗ್ರೆಸ್ ಪಕ್ಷ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದು.

ಇದನ್ನೂ ಓದಿ :  ಸಿದ್ದರಾಮಯ್ಯ ಕಂಡ್ರೆ ಡಿಕೆಶಿಗೆ ಆಗಲ್ಲ, ಡಿಕೆಶಿ ಕಂಡ್ರೆ ಸಿದ್ದರಾಮಯ್ಯಗೆ ಆಗಲ್ಲ; ಸರ್ಕಾರ ಪ್ರಶ್ನಿಸಲು ವಿಪಕ್ಷ ನಾಯಕರೇ ಇಲ್ಲ‘; ನಳಿನ್​ ಕುಮಾರ್​​ ಕಟೀಲ್​​

ಕಾಂಗ್ರೆಸ್ ಮತಕ್ಕಾಗಿ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಜೈ ಎಂದವರು ಬೆಂಬಲಕ್ಕೆ ನಿಂತಿದ್ದಾರೆ. ಮಂಗಳೂರು ಘಟನೆ ಪೂರ್ವನಿಯೋಜಿತ ಘಟನೆ ನಡೆಸಿದ್ದು ಕಾಂಗ್ರೆಸ್ ,ಮುಂದಿನ ಪಂಚಾಯತ್ ಚುನಾವಣೆ ಶೇ 80 ರಷ್ಟು ಅಭ್ಯರ್ಥಿಗಳು ಬಿಜೆಪಿಯವರು ಗೆಲ್ಲಬೇಕು  ಎಂದರು.

 
First published: