• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Congress Protest: ಸೋನಿಯಾಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಹೋರಾಟ, ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಆಕ್ರೋಶ

Congress Protest: ಸೋನಿಯಾಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಹೋರಾಟ, ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ಆಕ್ರೋಶ

ಕೆಪಿಸಿಸಿ ಸತ್ಯಾಗ್ರಹ

ಕೆಪಿಸಿಸಿ ಸತ್ಯಾಗ್ರಹ

ಸೋನಿಯಾ ಗಾಂಧಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ (Bengaluru) ಕೆಪಿಸಿಸಿ (KPCC) ನಾಯಕರು ಸತ್ಯಾಗ್ರಹ ನಡೆಸಿದ್ದಾರೆ. ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ (Race Course Road) ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆಯ (Gandhi Statue) ಮುಂದೆ ಕಾಂಗ್ರೆಸ್ ಮುಖಂಡರು ಸತ್ಯಾಗ್ರಹ ನಡೆಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಗರಣ (National Herald Scam) ಸಂಬಂಧ ಎಐಸಿಸಿ ಅಧ್ಯಕ್ಷೆ (AICC President) ಸೋನಿಯಾ ಗಾಂಧಿ (Sonia Gandhi) ಅವರನ್ನು ಇಡಿ ವಿಚಾರಣೆ (ED Enquiry) ನಡೆಸಿರುವುದಕ್ಕೆ ಕಾಂಗ್ರೆಸ್ ನಾಯಕರು (Congress leaders) ಗರಂ ಆಗಿದ್ದಾರೆ. ಸೋನಿಯಾ ಗಾಂಧಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ (Bengaluru) ಕೆಪಿಸಿಸಿ (KPCC) ನಾಯಕರು ಸತ್ಯಾಗ್ರಹ ನಡೆಸಿದ್ದಾರೆ. ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ (Race Course Road) ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆಯ (Gandhi Statue) ಮುಂದೆ ಕಾಂಗ್ರೆಸ್ ಮುಖಂಡರು ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ವೇಳೆ ಬಿಜೆಪಿ ನಾಯಕರು (BJP Leaders) ಮತ್ತು ಕೇಂದ್ರ ಸರ್ಕಾರದ (Central Government) ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು.


ಸಿಟಿ ರವಿಗೆ ಡಿಕೆ ಶಿವಕುಮಾರ್ ತಿರುಗೇಟು


ಬಿಜೆಪಿ ನಾಯಕ ಸಿಟಿ ರವಿ, ಈವಾಗ ಪ್ರತಿಭಟನೆ ಮಾಡ್ತಿರೋರು ಜೈಲಿಗೆ ಹೋಗಿ ಬಂದವ್ರು ಅಂತ ಹೇಳಿಕೆ ನೀಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ಏಕವಚನದಲ್ಲೇ ವಾಗ್ದಾಳಿ ನಡೆಸಿದ್ರು. ಅವನು ಯಾವಾನಾದ್ರು ಏನಾದರೂ ಮಾತಾಡಿಕೊಳ್ಳಲಿ. ಮಹಾತ್ಮ ಗಾಂಧೀಜಿ ಜೈಲಿಗೆ ಹೋಗವ್ರೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಹೋಗವ್ರೆ, ನೆಹರೂ ಅವ್ರೂ ಹೋಗವ್ರೆ. ನಾವು ಏನು ಮಂಚಕ್ಕಾಗಿ ಜೈಲಿಗೆ ಹೋಗಿದ್ವಾ..? ಅಥವಾ ಇನ್ನೊಂದಕ್ಕೆ ಹೋಗಿದ್ವಾ..? ಎಂದು ತಿರುಗೇಟು ಕೊಟ್ಟಿದ್ದಾರೆ.


“ಕೇಂದ್ರ ಸರ್ಕಾರದಿಂದ ಇಡಿ, ಸಿಬಿಐ ದುರ್ಬಳಕೆ”


ಇನ್ನು ಈ ದೇಶದಲ್ಲಿ ಇಡಿ ಸಿಬಿಐಯನ್ನ ದುರ್ಬಳಕೆ ನಡೆಯುತ್ತಿದೆ ಅಂತ ಡಿಕೆಶಿ ಆರೋಪಿಸಿದ್ರು. ಸಾವಿರಾರು ವಿರೋಧ ಪಕ್ಷದ ನಾಯಕರ ಬಾಯಿಯನ್ನ ಮುಚ್ಚಲು ಕೇಂದ್ರ ಸರ್ಕಾರ ಹೊರಟಿದೆ. ಬಿಜೆಪಿಯವರ ಒಬ್ಬರ ಮೇಲೂ ಕ್ರಮ ಕೈಗೊಂಡಿಲ್ಲ, ಅವರ ಪಕ್ಷದ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ, ವಿಚಾರಣೆ ಸಹ ಮಾಡಿಲ್ಲ ಅಂತ ಆರೋಪಿಸಿದ್ರು.


ಇದನ್ನೂ ಓದಿ: Siddharamotsava: ಸಿದ್ಧರಾಮೋತ್ಸವ ಪೂರ್ವಭಾವಿ ಸಭೆಗೆ ಕೈ ಶಾಸಕ ಗೈರು! ಪ್ರಸಾದ್‌ ಅಬ್ಬಯ್ಯ ವಿರುದ್ಧ ಜಮೀರ್ ಗುಡುಗು


 “ಸೋನಿಯಾ ಗಾಂಧಿ ಜೊತೆ ಕಾಂಗ್ರೆಸ್ ಇದೆ”


ಸೋನಿಯಾ ಗಾಂಧಿಯವರು ಈಗ ವಿಚಾರಣೆ ಎದರಿಸುತ್ತಿದ್ದಾರೆ‌. ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ ಅಂತ ಭರವಸೆ ನೀಡಿದ್ರು. ನ್ಯಾಷನಲ್ ಹೆರಾಲ್ಡ್ ಅನ್ನು ಸೋನಿಯಾ ಗಾಂಧಿ ಸ್ವಂತ ಆಸ್ತಿ ಅಂತ  ಹೇಳಿಲ್ಲ. ನಮ್ಮ ನಾಯಕರಿಗೆ ಕಿರುಕುಳ ಕೊಟ್ಟು ಜೈಲಿಗೆ ಹಾಕಲಿ. ಆದರೆ ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಮಹಿಳೆಗೆ ಕಿರುಕುಳ ಕೊಡ್ತಿದ್ದಾರೆ‌. ಅವರು ಯಾವ ಆಸ್ತಿ ಮಾಡಿಕೊಂಡಿದ್ದಾರೆ? ಅಂತವ್ರಿಗೆ ಕಿರುಕುಳ ಕೊಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.


ಡ್ರಿಪ್ಸ್ ಹಾಕಿಕೊಂಡೇ ಬಂದ ಸಿದ್ದರಾಮಯ್ಯ


ಇನ್ನು ತೀವ್ರ ಜ್ವರದಿಂದ ಬಳಲುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಜ್ವರದ ನಡುವೆಯೇ ಪ್ರತಿಭಟನೆಗೆ ಆಗಮಿಸಿದ್ರು. ಸಿದ್ದರಾಮಯ್ಯ ಬರುವಾಗ ಎದ್ದು ನಿಂತು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ರು. ಈ ವೇಳೆ ಖುರ್ಚಿಯಿಂದ ಮೇಲೆ ಎದ್ದು ಡಿಕೆಶಿ ಅವ್ರು ಸಿದ್ದುರಾಮಯ್ಯರನ್ನು ಸ್ವಾಗತಿಸಿದ್ರು.


ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಹಿಳೆಯರ ಕಿರಿಕ್


ಕಾಂಗ್ರೆಸ್ ನ ಪ್ರತಿಭಟನೆ ಯಲ್ಲಿ ನಟಿ ಭಾವನಾಗೆ ತರಾಟೆ ತೆಗೆದುಕೊಂಡ ಘಟನೆ ನಡೆಯಿತು. ಡಿಕೆಶಿ ಚೇರ್ ಮೇಲೆ ಕುಳಿತುಕೊಳ್ಳಲು ಹೋಗಿದ್ದ ಭಾವನಾಗೆ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ತರಾಟೆ ತೆಗೆದುಕೊಂಡ್ರು. ನೀವು ಬಿಜೆಪಿಯಲ್ಲಿದ್ರಿ ತಾನೇ..? ಇವಾಗ ಇಲ್ಲಿಗೆ ಬಂದು ಅಧ್ಯಕ್ಷರ ಪಕ್ಕದಲ್ಲಿ ಕೂರೋಕೆ ಹೋಗ್ತಿದ್ಸೀರಲ್ಲ ಎಂದು ತರಾಟೆ ತೆಗೆದುಕೊಂಡ್ರು. ಕೈ ಕಾರ್ಯಕರ್ತೆಯ ತರಾಟೆಯಿಂದ ಭಾವನಾ ಗಲಿಬಿಲಿಗೊಂಡರು.


ಇದನ್ನೂ ಓದಿ: CRZ ವಿಸ್ತರಣೆಯಿಂದ ಕರಾವಳಿ ಪ್ರದೇಶದ ಅಭಿವೃದ್ಧಿ; ಸಿಎಂ ಬೊಮ್ಮಾಯಿ ಭರವಸೆ


ದೆಹಲಿಯಲ್ಲಿ ಸಂಸದ ಡಿಕೆ ಸುರೇಶ್ ಬಂಧನ


ಸೋನಿಯಾ ಗಾಂಧಿ ಇಡಿ ವಿಚಾರಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಪ್ರತಿಭಟನೆ ನಡೆಸಿದ್ರು. ಕೇಂದ್ರ ಸರ್ಕಾರದಿಂದ ತನಿಖಾ ಸಂಸ್ಥೆಗಳ ದುರುಪಯೋಗ ಎಂದು ಪ್ರತಿಭಟನಾಕಾರರು ಆರೋಪಿಸಿದ್ರು. ಪ್ರತಿಭಟನೆ ವೇಳೆ ಸಂಸದ ಡಿ.ಕೆ. ಸುರೇಶ್ ಅವರನ್ನು ಪೊಲೀಸರು ಬಂಧಿಸಿದ್ರು.

top videos
    First published: