Bengaluru Flood: ಬೆಂಗಳೂರು ಪ್ರವಾಹಕ್ಕೆ ಕಾಂಗ್ರೆಸ್ ಕಾರಣ ಅಂದ್ರು ಸಚಿವ ಅಂಗಾರ; ಅರಣ್ಯ ಇಲಾಖೆ ಹುತಾತ್ಮರ ಪರಿಹಾರ ಮೊತ್ತ 50 ಲಕ್ಷಕ್ಕೇರಿಕೆ

ಚುನಾವಣೆ ಸೋಲು ನಮಗೆ ಹೊಸದಲ್ಲ. ಸಿದ್ದರಾಮೋತ್ಸವದಿಂದ ನಮಗೆ ಯಾವುದೇ ಭಯವಿಲ್ಲ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಸಚಿವ ಅಂಗಾರ ತಿರುಗೇಟು ನೀಡಿದರು.

ಬೆಂಗಳೂರು ಪ್ರವಾಹ

ಬೆಂಗಳೂರು ಪ್ರವಾಹ

  • Share this:
ಬೆಂಗಳೂರು ಪ್ರವಾಹ (Bengaluru Flood) ಪರಿಸ್ಥಿತಿಗೆ ಕಾಂಗ್ರೆಸ್ (Congress) ಕಾರಣ ಎಂದು ಚಾಮರಾಜನಗರದಲ್ಲಿ ಮೀನುಗಾರಿಕೆ ಸಚಿವ ಎಸ್ ಅಂಗಾರ (Minister S Angara) ಆರೋಪಿಸಿದ್ದಾರೆ. ಚರಂಡಿ, ಕೆರೆ ಒತ್ತುವರಿ ಮಾಡಿ ಕಟ್ಟಡ ಕಟ್ಟಲು ಅವಕಾಶ ಮಾಡಿಕೊಟ್ಟವರು ಯಾರು? ಅವರ ಪಾಪದ ಪರಿಣಾಮ ಜನರು ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಬೆಂಗಳೂರಿನ ಸಚಿವರು (Bengaluru Ministers) ನಾಪತ್ತೆಯಾಗಿಲ್ಲ. ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಆದರೆ ಎಲ್ಲಾ ಸ್ಥಳಕ್ಕೂ ಭೇಟಿ ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ (Former CM Sidddaramaiah) ಹತಾಶರಾಗಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಒಂದು ರೀತಿ, ಅಧಿಕಾರದಲ್ಲಿ ಇಲ್ಲದಾಗ ಒಂದು ರೀತಿ ಮಾತಾಡ್ತಾರೆ ಎಂದು ಜನಸ್ಪಂದನ (Jana Spandana Program) ಸಮಾವೇಶದ ಸಿದ್ದರಾಮಯ್ಯ ಅವರ ಟೀಕೆಗೆ ಮೀನುಗಾರಿಕೆ ಸಚಿವ ಎಸ್. ಅಂಗಾರ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಸೀನಿಯರ್ ಲೀಡರ್. ಮಾತನಾಡುವಾಗ ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳಬೇಕು. ಮೂರು ವರ್ಷದಲ್ಲಿ ನಮ್ಮ ಸರ್ಕಾರ ಮಾಡಿರುವ ಸಾಧನೆಯನ್ನ ಜನರಿಗೆ ತಿಳಿಸುವುದು ಜನಸ್ಪಂದನದ ಉದ್ದೇಶವಾಗಿತ್ತು. ಅಭಿವೃದ್ಧಿಗೆ ಈ ಸರ್ಕಾರ ಕೊಟ್ಟಷ್ಟು ಅನುದಾನವನ್ನು ಬೇರೆ ಯಾವ ಸರ್ಕಾರವೂ ಕೊಟ್ಟಿಲ್ಲ ಎಂದರು.

ಚುನಾವಣೆ ಸೋಲು ನಮಗೆ ಹೊಸದಲ್ಲ

ಸಿದ್ದರಾಮೋತ್ಸವದಿಂದ ನಮಗೆ ಭಯ ಆಗಿಲ್ಲ. ನಾವೇನು 30-40 ವರ್ಷ ಆಡಳಿತ ಮಾಡಿಲ್ಲ. ಕೇವಲ ಎಂಟು ವರ್ಷ ರಾಜ್ಯದಲ್ಲಿ ಆಡಳಿತ ಮಾಡಿದ್ದೇವೆ. ಚುನಾವಣೆ ಸೋಲು ನಮಗೆ ಹೊಸದಲ್ಲ. ಸಿದ್ದರಾಮೋತ್ಸವದಿಂದ ನಮಗೆ ಯಾವುದೇ ಭಯವಿಲ್ಲ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಸಚಿವ ಅಂಗಾರ ತಿರುಗೇಟು ನೀಡಿದರು.

ಅರಣ್ಯ ಇಲಾಖೆ ಹುತಾತ್ಮರ ಪರಿಹಾರದ ಮೊತ್ತ ಏರಿಕೆ

ಅರಣ್ಯ ಹುತಾತ್ಮ‌ರ ಕಾರ್ಯಕ್ರಮದಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು, ಅರಣ್ಯ ಇಲಾಖೆ ಹುತಾತ್ಮರಿಗೆ‌ 30 ಲಕ್ಷವಿದ್ದ  ಪರಿಹಾರ ಮೊತ್ತ 50 ಲಕ್ಷಕ್ಕೆ ಏರಿಕೆ ಮಾಡೋದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.

ಇದನ್ನೂ ಓದಿ:  Student Missing: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಿಗೂಢ ನಾಪತ್ತೆ; ಕ್ಯಾಂಪಸ್ ಒಳಗೆ ಬಂದ ಬಾಲಕ ಮಿಸ್ಸಿಂಗ್

ವಾತಾವರಣ ಇವತ್ತು ಬದಲಾಗುತ್ತಿದೆ, ನದಿಯಲ್ಲಿ ಪ್ರವಾಹ ಬರುತ್ತಿದೆ. ಮಳೆಯ ಸಮಯ ಪ್ರಮಾಣ ಬದಲಾಗಿದೆ. ನಿರಂತರವಾಗಿ ಮಳೆಯಾಗುತ್ತಿದೆ. ಪರಿಸರದಲ್ಲಿ ಅಸಮತೋಲನ ಆಗಿದೆ ಅದನ್ನು ನಾವು ಸರಿ ಮಾಡಬೇಕಿದೆ. ಇದು ಭವಿಷ್ಯದ ದೃಷ್ಟಿಯಿಂದ ಅಗತ್ಯ ಇದೆ. ಮುಂದಿನ ಜನರೇಷನ್ ಗೆ ನಾವು ಉತ್ತಮ ಪರಿಸರ ನೀಡದೇ ಇದ್ದರೆ ಅದು ನಾವು ಮಾಡುವ ಮೋಸವಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.

ಕೃಷಿಯಲ್ಲಿ ಹೊಸ ವಿಧಾನ ಬಳಕೆಗೆ  100 ಕೋಟಿ

ಮುಂದಿನ ‌ಪೀಳಿಗೆಯ ಹಕ್ಕನ್ನು ನಾವು ಕಸಿದುಕೊಂಡಂತಾಗುತ್ತದೆ. ಇಂಥ ರಕ್ಷಣೆಯ ಸಂದರ್ಭದಲ್ಲಿ ಅರಣ್ಯ ರಕ್ಷಕರು ಶೌರ್ಯ ತೋರಿದ್ದಾರೆ. ಆನೆಗಳ ಕಾಟ ಬಹಳ ದೊಡ್ಡ ಪ್ರಮಾಣದಲ್ಲಿ ಇದೆ. ಆನೆ ಹಾವಳಿಯಿಂದ ಪ್ರಾಣ ಹಾನಿಯಾಗಬಾರದು, ಕೃಷಿ ಜಮೀನಿನಲ್ಲಿ ಹೊಸ ವಿಧಾನ ಬಳಕೆ ಮಾಡಲು 100 ಕೋಟಿ ರೂ. ನೀಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ:  Chikkamagaluru: ಹಿಂದೂ ಮಹಾ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ; ಯುವಕರ ಜೊತೆ ಹೆಜ್ಜೆ ಹಾಕಿದ ಸಿ ಟಿ ರವಿ

Congress is reasons bengaluru flooded says minister s anagara mrq
ಉಮೇಶ್ ಕತ್ತಿ


ಈ ಸಂದರ್ಭದಲ್ಲಿ ಉಮೇಶ್ ಕತ್ತಿ ಇರಬೇಕಿತ್ತು

ಉಮೇಶ್ ಕತ್ತಿಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ಎನಿಮಲ್ ಫೆನ್ಸಿಂಗ್ ಬಗ್ಗೆ ಉಮೇಶ್ ಕತ್ತಿ ಬಹಳ ಆಸಕ್ತಿ ಹೊಂದಿದ್ದರು. ಅವರು ಅರಣ್ಯ ಮಂತ್ರಿಯಾದಾಗ ಎಲ್ಲ ಕಡೆಗಳಿಗೂ ಭೇಟಿ ನೀಡುವಂತೆ ಹೇಳಿದ್ದೆ. ಇತ್ತಿಚಿನ ದಿನಗಳಲ್ಲಿ ಎಲ್ಲಾ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರಿದ್ದರೆ ಅದು ಉಮೇಶ್ ಕತ್ತಿಯವರು ಮಾತ್ರ. ಅವರು ಇನ್ನಷ್ಟು ದಿನ ಅರಣ್ಯ ಸಚಿವರಾಗಿ ಇರಬೇಕಿತ್ತು ಅಕಾಲಿಕ ನಿಧನ ಆಗಬಾರದಿತ್ತು ಎಂದು ಸಿಎಂ ಹೇಳಿದರು.
Published by:Mahmadrafik K
First published: