ಚಿತ್ರದುರ್ಗ(ಜು.03): ರಾಜ್ಯ , ದೇಶದಲ್ಲಿ ಕಾಂಗ್ರೆಸ್ ಪಕ್ಷ ICU ನಲ್ಲಿರುವ ಪರಿಸ್ಥಿತಿಗೆ ಬಂದಿದೆ, ದೇಶದ ಜನರು ಬಿಜೆಪಿ (BJP) ಪಕ್ಷವನ್ನ ಸ್ವೀಕರ ಮಾಡಿ, ಬಿಜೆಪಿ ನಮ್ಮ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ (Congress )ಅಧಿಕಾರಕ್ಕೆ ಬರಲು ನಾವು ಬಿಡಲ್ಲ, ಅವರನ್ನ ಸಿಎಂ ಆಗಲು ಬಿಡಲ್ಲ, ರಾಜ್ಯದಲ್ಲಿ ಇನ್ನೂ 20 ವರ್ಷ ಅಧಿಕಾರಕ್ಕೆ ಬಾರದ ಹಾಗೇ ನಮ್ಮ ಪಕ್ಷದ ಕಾರ್ಯಕರ್ತರು ನೋಡಿಕೊಳ್ಳುತ್ತಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಕಾಂಗ್ರೇಸ್ ನಾಯಕರ ಸಮೀಕ್ಷೆ ಕುರಿತ ಹೇಳಿಕೆ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕೋನಸಾಗರ ಗ್ರಾಮದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುತ್ತದೆ ಎಂಬ ಕಾಂಗ್ರೇಸ್ ನಾಯಕರ ಹೇಳಿಕೆ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ರಾಜ್ಯ , ದೇಶದಲ್ಲಿ ಕಾಂಗ್ರೆಸ್ ಪಕ್ಷ ICU ನಲ್ಲಿರುವ ಪರಿಸ್ಥಿತಿಗೆ ಬಂದಿದೆ, ದೇಶದ ಜನರು ಬಿಜೆಪಿ ಪಕ್ಷವನ್ನ ಸ್ವೀಕರ ಮಾಡಿ, ಬಿಜೆಪಿ ನಮ್ಮ ಪಕ್ಷ ಎಂದು ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾವು ಬಿಡಲ್ಲ ಕಾಂಗ್ರೆಸ್ ಪಕ್ಷದ ಸರ್ವೇಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ರಿಪೋರ್ಟ್ ನೀಡಲು ಸಾಧ್ಯನಾ,? ರಾಜ್ಯದ ಜನ ನಮ್ಮ ಕಡೆ ಇದ್ದಾರೆ ಎಂದು ತೋರಿಸಲು ಸರ್ವೆ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನೂ ರಾಹುಲ್ , ಸೋನಿಯಾ ಗಾಂಧಿಯವರನ್ ಎದರಿಸಲು ಇಡಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಕೈ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯುಪಿಎ ಸರ್ಕಾರ ಇದ್ದಾಗ ಪ್ರಧಾನಿ ಮೋದಿ, ಅಮಿತ್ ಷಾ ಅವರನ್ನು ಇಡಿ ವಿಚಾರಣೆ ಮಾಡಿದ್ದರು, ದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂವಿಧಾನಕ್ಕೆ ಅಪಮಾನ ಮಾಡುತ್ತಿದ್ದಾರೆ, ಕಾನೂನಿನ ಪ್ರಕಾರ ತಪ್ಪು ಮಾಡಿಲ್ಲ ಎಂದರೆ ಇಷ್ಟೋಂದು ರಾದ್ದಾಂತ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮೋದಿ ಹುಲಿ, ತೆಲಂಗಾಣ ಸಿಎಂ KCR ನರಿ ಎಂದ ಬಿಜೆಪಿ ಮುಖಂಡ!
ಇನ್ನೂ ಮಾಜಿ ಪ್ರಧಾನಿ ದೇವೆಗೌಡರು ಇನ್ನೇನು ನಾಲ್ಕು ಹೆಗಲಮೇಲೆ ಎಂಬ ಮಾಜಿ ಶಾಸಕKN ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಮ್ಮ ರಾಜ್ಯದ ಮಣ್ಣಿನ ಮಗ HDD, ರಾಜ್ಯಕ್ಕೆ ಹಿರಿಮೆ, ಮಾಜಿ ಪ್ರಧಾನಿಗಳ ಬಗ್ಗೆ ಯಾರೂ ಕೂಡಾ ಅಸಹ್ಯವಾಗಿ ಮಾತಾಡಬಾರದು, ಮಾಜಿ ಪ್ರಧಾನಿ ಗೌಡರನ್ನ ಗೌರವದಿಂದ ಕಾಣುತ್ತೇನೆ ಎಂದು ಹೇಳಿದ್ದಾರೆ.
ಇಮ್ನೂ ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರ 75 ವರ್ಷದ ಸಿದ್ದರಾಮೋತ್ಸವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾವು ಬಿಡಲ್ಲ, ಅವರನ್ನ ಸಿಎಂ ಆಗಲು ಬಿಡಲ್ಲ, ರಾಜ್ಯದಲ್ಲಿ ಇನ್ನೂ 20 ವರ್ಷ ಅಧಿಕಾರಕ್ಕೆ ಬಾರದ ಹಾಗೇ ನಮ್ಮ ಪಕ್ಷದ ಕಾರ್ಯಕರ್ತರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅವನು ಇನ್ನೆಷ್ಟು ದಿನ ಬದುಕಿರ್ತಾನೆ, ನಾವು ನೋಡ್ತೀವಿ: ಅನಿತಾ ಕುಮಾರಸ್ವಾಮಿ ಆಕ್ರೋಶ
ಇನ್ನೂ, ನಾನು ಎಂಥಹ ಪರಿಸ್ಥಿತಿಯಲ್ಲೂ ನಾನು ಕ್ಷೇತ್ರ ಬಿಡಲ್ಲ, ಮೊಳಕಾಲ್ಮೂರಿಂದಲೇ ಸ್ಪರ್ಧೆ ಮಾಡುವೆ, ಆರು ಬಾರಿ ಎಲೆಕ್ಷನ್ ಗೆದಿದ್ದೇನೆ, ಈ ಬಾರಿಯೂ ಇಲ್ಲೇ ನಿಲ್ಲುವೆ, ಕ್ಷೇತ್ರದಲ್ಲಿ ಎಲ್ಲರನ್ನೂ ಸಮಧಾನ ಮಾಡಲು ನಮ್ಮ ಕೈಯಲ್ಲಿ ಆಗಲ್ಲ, ನಮ್ಮ ಕೈಲಾದಷ್ಟು ಕೆಲಸ ನಾವು ಕ್ಷೇತ್ರದಲ್ಲಿ ಮಾಡಿದ್ದೇವೆ, ಮುಂದಿನ ಎಲೆಕ್ಷನ್ ನಲ್ಲಿ ಪೂರ್ಣ ಪ್ರಮಾಣದಿಂದ ನಮಗೆ ಅಧಿಕಾರ ನೀಡಲಿ, ನಾವು ಎಷ್ಟು ಕೆಲಸ ಮಾಡಿದ್ದೇವೆ ಎಂದು ಪಟ್ಟಿ ತೆಗೆದು ನೋಡಲಿ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ