ಡಿಕೆಶಿ ಒಂದು ಕಡೆ, ಸಿದ್ದರಾಮಯ್ಯ ಒಂದು ಕಡೆ ಇದ್ದಾರೆ; ಕಾಂಗ್ರೆಸ್​ ಒಡೆದ ಮನೆಯಾಗಿದೆ; ಕೆ.ಎಸ್​.ಈಶ್ವರಪ್ಪ

ಡಿಕೆ ಶಿವಕುಮಾರ್​ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಮೆರವಣಿಗೆ ಮಾಡಿದ್ದು ನಾಚಿಕೆಗೇಡು. ಈ ಮೆರವಣಿಗೆ ನೋಡಿ ರಾಜ್ಯದ ಜನರು ಅಸಹ್ಯ ಪಡುತ್ತಿದ್ದಾರೆ ಎಂದು ಜರಿದರು. 

Latha CG | news18-kannada
Updated:October 28, 2019, 3:26 PM IST
ಡಿಕೆಶಿ ಒಂದು ಕಡೆ, ಸಿದ್ದರಾಮಯ್ಯ ಒಂದು ಕಡೆ ಇದ್ದಾರೆ; ಕಾಂಗ್ರೆಸ್​ ಒಡೆದ ಮನೆಯಾಗಿದೆ; ಕೆ.ಎಸ್​.ಈಶ್ವರಪ್ಪ
ಸಚಿವ ಕೆ ಎಸ್ ಈಶ್ವರಪ್ಪ
  • Share this:
ಶಿವಮೊಗ್ಗ(ಅ.28): ಮಾಜಿ ಸಚಿವ ಡಿ ಕೆ ಶಿವಕುಮಾರ್ ಒಂದು ಕಡೆ, ಮಾಜಿ ಸಿಎ ಸಿದ್ದರಾಮಯ್ಯ ಒಂದು ಕಡೆ ಇದ್ದಾರೆ. ಈಗ ಕಾಂಗ್ರೆಸ್​ ಒಡೆದ ಮನೆಯಾಗಿದೆ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಡಿಕೆ ಶಿವಕುಮಾರ್​ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಮೆರವಣಿಗೆ ಮಾಡಿದ್ದು ನಾಚಿಕೆಗೇಡು. ಈ ಮೆರವಣಿಗೆ ನೋಡಿ ರಾಜ್ಯದ ಜನರು ಅಸಹ್ಯ ಪಡುತ್ತಿದ್ದಾರೆ ಎಂದು ಜರಿದರು.

ಡಿಕೆಶಿ ಜೈಲಿನಲ್ಲಿದ್ದಾಗ ಅವರ ತಾಯಿ, ಪತ್ನಿ, ಮಗಳು ನೋಡಿ ನನಗೂ ನೋವು ಆಯ್ತು. ಡಿಕೆಶಿ ಅವರು ಏನಾದರೂ ಕ್ರೀಡೆಯಲ್ಲಿ ಪದಕ ಗೆದ್ದು ಬಂದ್ರಾ? ಪಾಕಿಸ್ತಾನದ ಮೇಲೆ ಯುದ್ದ ಗೆದ್ದು ಬಂದ್ರಾ?  ಮೆರವಣಿಗೆ ಮಾಡಲು. ಜೈಲಿನಲ್ಲಿ ಇದ್ದು ಹೊರಗೆ ಬಂದ ವ್ಯಕ್ತಿಗೆ‌ ಮೆರವಣಿಗೆ, ವಿಜಯೋತ್ಸವ ಮಾಡುತ್ತಿರುವುದು ನಾಚಿಕೆಗೇಡು. ಕಾಂಗ್ರೆಸ್​ನವರು ಇದನ್ನು ಉಗ್ರವಾಗಿ ಖಂಡಿಸಬೇಕಿತ್ತು ಎಂದು ಕಿಡಿಕಾರಿದರು.

ಎಂಟಿಬಿ ಪಾಲಿಗೆ ಕಂಟಕವಾದ ಶರತ್ ಬಚ್ಚೇಗೌಡ; ಕುತೂಹಲ ಮೂಡಿಸಿದ ಹೊಸಕೋಟೆ ವಿಧಾನಸಭಾ ಕ್ಷೇತ್ರ

ರಾಜ್ಯದ ಜನ ಕಾಂಗ್ರೆಸ್​ನ್ನು ಈಗಾಗಲೇ ಮೂಲೆಗುಂಪು ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್​ ನೆಲ ಕಚ್ಚುತ್ತದೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.

ಅನರ್ಹ ಶಾಸಕರ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುವುದು ಅವಶ್ಯಕತೆ ಇಲ್ಲ. ರೇಣುಕಾಚಾರ್ಯ ಒಂದು ಹೇಳುವುದು, ಸವದಿ ಒಂದು ಹೇಳುವುದು ಸರಿಯಲ್ಲ. ಇದನ್ನು ನಮ್ಮ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ. ಅನರ್ಹ ಶಾಸಕರ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ. ಅನರ್ಹ ಶಾಸಕರು ರಾಜೀನಾಮೆ ಕೊಟ್ಟು ಬರಲಿಲ್ಲ ಎಂದಿದ್ದರೆ, ನಮ್ಮ ಸರ್ಕಾರನೇ ಇರುತ್ತಿರಲಿಲ್ಲ. ಅನರ್ಹ ಶಾಸಕರು ಅವರು ಏನು ಅಪೇಕ್ಷೆ ಪಡುತ್ತಾರೋ ಅದನ್ನು ಬೆಂಬಲ ಮಾಡೋದು ನಮ್ಮ ಕರ್ತವ್ಯ ಎಂದು ಅನರ್ಹರ ಪರ ಬ್ಯಾಟಿಂಗ್​ ಮಾಡಿದರು.

ಮಹಾರಾಷ್ಟ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆ; ಬಿಜೆಪಿ-ಶಿವಸೇನೆ ನಾಯಕರಿಂದ ಪ್ರತ್ಯೇಕವಾಗಿ ರಾಜ್ಯಪಾಲರ ಭೇಟಿಟಿಪ್ಪು ಜಯಂತಿಯನ್ನು ಕಾಂಗ್ರೆಸ್ ನವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಟಿಪ್ಪು ಜಯಂತಿ ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಮೊದಲು ಬಿಡಲಿ. ಯಾವ ಮುಸಲ್ಮಾನರು ಟಿಪ್ಪು ಜಯಂತಿ ಮಾಡಿ ಅಂತ ಹೇಳಿರಲಿಲ್ಲ. ಯಾರಿಗೆ ಬೇಕೋ ಅವರು ಅವರವರ ಮನೆಯಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ. ಈಗ ಸಿ.ಎಂ. ಇಬ್ರಾಹಿಂ ಸಹ ಟಿಪ್ಪು ಜಯಂತಿ ಬೇಡ ಎನ್ನುತ್ತಿದ್ದಾರೆ. ಮೂರ್ತಿ ಪೂಜೆ ಆಗುತ್ತೆ ಬೇಡ ಎಂದು ಇಬ್ರಾಹಿಂ ಹೇಳಿದ್ದಾರೆ. ಸಿ.ಎಂ ಇಬ್ರಾಹಿಂಗೆ ಯಾರು ಈ ಬಗ್ಗೆ ಕೇಳಿದ್ದರೋ ಗೊತ್ತಿಲ್ಲ. ಸಿದ್ದರಾಮಯ್ಯ ಒಂದು ಬದುಕು ಮಾಡಿದ್ದರು. ಈಗ ಇಬ್ರಾಹಿಂ ಒಂದು ಬದುಕು ಮಾಡುತ್ತಿದ್ದಾರೆ. ಟಿಪ್ಪು ಹೆಸರಿನಲ್ಲಿ ಮುಸಲ್ಮಾನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ರಾಜಕೀಯ ದಾಳವಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

First published: October 28, 2019, 2:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading