HOME » NEWS » State » CONGRESS IS ANTI FARMER PARTY SAY BJP LEADERS ON THE ONGOING PROTEST DBDEL SNVS

BJP Anguish - ರೈತರ ಪ್ರತಿಭಟನೆಯಲ್ಲ, ಕಾಂಗ್ರೆಸ್ ಪ್ರತಿಭಟನೆ: ಬಿಜೆಪಿ ನಾಯಕರ ಆಕ್ರೋಶ

ಕಾಂಗ್ರೆಸ್ ಪಕ್ಷ ಎಲ್ಲದಕ್ಕೂ ವಿರೋಧ ಮಾಡುತ್ತದೆ. ರೈತರ ಪರವಾದ ಕಾನೂನುಗಳನ್ನೂ ಕಾಂಗ್ರೆಸ್ಸಿಗರು ವಿರೋಧಿಸುತ್ತಿದ್ದಾರೆ. ಇವರದ್ದು ರೈತ ವಿರೋಧಿ ಪಕ್ಷವಾಗಿದೆ ಎಂದು ಬಿಜೆಪಿ ಮುಖಂಡರಾದ ಸಿಟಿ ರವಿ, ಎಂಪಿ ರೇಣುಕಾಚಾರ್ಯ, ಜಗದೀಶ್ ಶೆಟ್ಟರ್ ಮೊದಲಾದವರು ಟೀಕಿಸಿದ್ದಾರೆ.

news18-kannada
Updated:January 20, 2021, 2:51 PM IST
BJP Anguish - ರೈತರ ಪ್ರತಿಭಟನೆಯಲ್ಲ, ಕಾಂಗ್ರೆಸ್ ಪ್ರತಿಭಟನೆ: ಬಿಜೆಪಿ ನಾಯಕರ ಆಕ್ರೋಶ
ಸಿ.ಟಿ. ರವಿ.
  • Share this:
ನವದೆಹಲಿ/ಬೆಂಗಳೂರು(ಜ. 20): ಕರ್ನಾಟಕವೂ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನ ಕಾಂಗ್ರೆಸ್ಸಿಗರ ಪ್ರತಿಭಟನೆ ಎಂದು ಬಿಜೆಪಿ ಮುಖಂಡರು ವ್ಯಾಖ್ಯಾನಿಸಿದ್ದಾರೆ. ದೆಹಲಿಯಲ್ಲಿ ನ್ಯೂಸ್18 ಜೊತೆ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕಾಂಗ್ರೆಸ್ ಪಕ್ಷಕ್ಕೆ ಪ್ರತಿಭಟನೆ ನಡೆಸುವ ಯಾವ ನೈತಿಕತೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ವಿರೋಧಿಸುತ್ತದೆ. ಭಾರತೀಯ ಸೇನೆಯಿಂದ ಸರ್ಜಿಲ್ ಸ್ಟ್ರೈಕ್ ಆದಾಗಲೂ ಅಪಸ್ವರ ಎತ್ತಿತ್ತು. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾಯ್ದೆ ರದ್ದು ಮಾಡ್ತೀನಿ ಎಂದು ಆಶ್ವಾಸನೆ ಕೊಡುತ್ತಿದ್ದ ಕಾಂಗ್ರೆಸ್ ಪಕ್ಷ ಈಗ ಇದಕ್ಕೆ ವಿರೋಧಿಸುತ್ತಿದೆ. ದಲ್ಲಾಳಿಗಳ ಒತ್ತಡಕ್ಕೆ ಮಣಿದು ಎಪಿಎಂಸಿ ಕಾನೂನು ಜಾರಿ ಮಾಡದೇ ಕೈಬಿಟ್ಟಿತ್ತು. ಮೋದಿ ಸರ್ಕಾರ ಈಗ ಅದನ್ನ ಜಾರಿಗೆ ತಂದಿದೆ. ಆದರೆ, ಕಾಂಗ್ರೆಸ್ ವಿರೋಧಿಸುತ್ತಿರುವುದು ವಿಪರ್ಯಾಸ. ಕಾಂಗ್ರೆಸ್ಸಿಗರಿಗೆ ಈಗ ಯಾವ ನೈತಿಕತೆಯೂ ಉಳಿದಿಲ್ಲ. ಅದು ದಲ್ಲಾಳಿಗಳ ಪರ ಇರುವ ಪಕ್ಷ ಎಂದು ಸಿ.ಟಿ. ರವಿ ಗುಡುಗಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಸ್ವಾತಂತ್ರ್ಯ ಕೊಟ್ಟಿದೆ. ರೈತರ ಆದಾಯ ದುಪ್ಪಟ್ಟು ಮಾಡಲು ಪ್ರಯತ್ನಿಸುತ್ತಿದೆ. ಕೇಂದ್ರದ ರೈತ ಕಾಯ್ದೆಗಳಿಂದ ಕೃಷಿ ಕ್ಷೇತ್ರಕ್ಕೆ ಬಂಡವಾಳ ಹರಿದುಬರಲು ಸಹಕಾರಿ ಆಗಲಿದೆ. ಕೃಷಿ ಕಾನೂನಿನಿಂದ ಯಾರಿಗೆ ನಷ್ಟ ಆಗುತ್ತದೆ ಎಂದು ಚರ್ಚೆ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಜ. 30ರಂದು ಸರ್ವ ಪಕ್ಷ ನಾಯಕರ ಸಭೆ ಕರೆದ ಪ್ರಧಾನಿ ಮೋದಿ

ಕೃಷಿ ಕಾನೂನು ವಿಚಾರದಲ್ಲಿ ಪ್ರತಿಭಟನಾನಿರತ ರೈತರ ಜೊತೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ. ಕಾನೂನಿನಲ್ಲಿ ತಿದ್ದುಪಡಿ ಮಾಡಲೂ ಒಪ್ಪಿಕೊಂಡಿದೆ. ಆದರೆ, ಪ್ರತಿಭಟನೆ ಮುನ್ನಡೆಸುತ್ತಿರುವವರು ಮೊಂಡು ವಾದ ಮುಂದಿಡುತ್ತಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಿದರೆ ಆ ಆಟ ನಡೆಯಲ್ಲ. ಎಲ್ಲದಕ್ಕೂ ವಿರೋಧ ಮಾಡುವುದು, ಭಯ ಹುಟ್ಟಿಸುವು ಅರಾಜಕತೆ ಸೃಷ್ಟಿಸುವುದು ಸರಿಯಲ್ಲ ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷ ರೈತ ವಿರೋಧಿ ಎಂದ ರೇಣುಕಾಚಾರ್ಯ:

ಇದೇ ವೇಳೆ ವರಿಷ್ಠರ ಭೇಟಿಗೆ ದೆಹಲಿಗೆ ಬಂದಿರುವ ಎಂ.ಪಿ. ರೇಣುಕಾಚಾರ್ಯ ಅವರು ನ್ಯೂಸ್18 ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮೊದಲಾದ ಮುಖಂಡರನ್ನು ರೈತರ ವಿರೋಧಿಗಳು ಎಂದು ಕುಟುಕಿದ್ದಾರೆ.

ಕರ್ನಾಟಕದಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇವರು ರೈತರ ವಿರೋಧಿಗಳು, ಹಿಂದೂ ವಿರೋಧಿಗಳು. ಇವರಿಗೆ ದೇಶದ ಕಾನೂನು ಬಗ್ಗೆ ಗೌರವ ಇಲ್ಲ. ನೆಪ ಮಾತ್ರಕ್ಕೆ ಹಸಿರು ಶಾಲು ಹಾಕಿದ್ದಾರೆ. ನಕಲಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್​ನ ಈ ಹೋರಾಟ ಸಂಪೂರ್ಣ ಫೇಕು. ಕಾಂಗ್ರೆಸ್​ಗೆ ಅಸ್ತಿತ್ವ ಇಲ್ಲದ ಕಾರಣ ಪ್ರತಿಭಟನೆ ಹಾದಿ ಹಿಡಿದಿದೆ. ರಾಹುಲ್ ಗಾಂಧಿ ನೀರಿನಿಂದ ಹೊರಬಂದ ಮೀನಿನಂತೆ ಆಡುತ್ತಿದ್ದಾರೆ ಎಂದು ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಜಾಥಾ

ಮೋದಿ ಸರ್ಕಾರ ರೈತರ ಪರವಾದ ಕಾನೂನುಗಳನ್ನ ಜಾರಿ ಮಾಡಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸರ್ಕಾರ ಕೂಡ ರೈತರ ಪರ ಹಲವು ಯೋಜನೆ ಜಾರಿ ತಂದಿದ್ದಅರೆ. ಆದರೆ, ರೈತ ಸಂಘಟನೆಗಳನ್ನ ದಲ್ಲಾಳಿಗಳು ದುರುಪಯೋಗಪಡಿಸಿಕೊಳ್ಳುತ್ತಿವೆ. ಕಾಂಗ್ರೆಸ್ ಕೂಡ ಅಧಿಕಾರಕ್ಕಾಗಿ ಈ ಪ್ರತಿಭಟನೆಗೆ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರಕ್ಕೆ ಕ್ಷಮೆ ಕೋರಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.

ಶೆಟ್ಟರ್ ಸಮರ್ಥನೆ:

ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರೂ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿದ್ಧಾರೆ. ಕಾಂಗ್ರೆಸ್ ಪಕ್ಷ ವಿರೋಧ ಪಕ್ಷವಾದ್ದರಿಂದ ವಿರೋಧ ಮಾಡುತ್ತಿದೆ ಅಷ್ಟೇ. ಆದರೆ, ಕೇಂದ್ರ ಸರ್ಕಾರ ರೈತರ ಪರವಾದ ಕಾನೂನು ರೂಪಿಸಿದೆ. ಎಪಿಎಂಸಿಯ ಕಟ್ಟುಪಾಡುಗಳಿಂದ ರೈತರನ್ನ ಬಂಧಮುಕ್ತಗೊಳಿಸಿದೆ. ರೈತರು ತಮ್ಮ ಬೆಳೆಯನ್ನ ಎಪಿಎಂಸಿಯಿಂದ ಹೊರಗೆ ಮಾರುವ ಸ್ವಾತಂತ್ರ್ಯ ಪಡೆದಿದ್ಧಾರೆ ಎಂದು ಸರ್ಕಾರದ ಕೃಷಿ ಕಾನೂನುಗಳನ್ನ ಜಗದೀಶ್ ಶೆಟ್ಟರ್ ಸಮರ್ಥಿಸಿಕೊಂಡಿದ್ದಾರೆ.

ವರದಿ: ಧರಣೀಶ್ ಬೂಕನಕೆರೆ
Published by: Vijayasarthy SN
First published: January 20, 2021, 1:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories