ರಮೇಶ್​ ಕಾಂಗ್ರೆಸ್​ನಲ್ಲೇ ಇರಬೇಕು, ಹೈಕಮಾಂಡ್​ ನಾಯಕರು​​ ಮನವೊಲಿಸಲಿ; ಲಖನ್​ ಜಾರಕಿಹೊಳಿ

ಮುಂದಿನ ಲೋಕಸಭೆ ಚುನಾವಣೆ ಗೆಲುವಿಗೆ ರಮೇಶ್​ ಪಾತ್ರ ಮಹತ್ವದಾಗಿದೆ. ಸಚಿವ ಸ್ಥಾನದಿಂದ ಕೈಬಿಟ್ಟಿದ್ದರಿಂದ ಅಸಮಾಧಾನ ಸಹಜ. 25 ವರ್ಷದಿಂದ ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಮೇಶ್​ ಜಾರಕಿಹೊಳಿ- ಲಖನ್​ ಜಾರಕಿಹೊಳಿ

Latha CG | news18india
Updated:December 31, 2018, 5:09 PM IST
ರಮೇಶ್​ ಕಾಂಗ್ರೆಸ್​ನಲ್ಲೇ ಇರಬೇಕು, ಹೈಕಮಾಂಡ್​ ನಾಯಕರು​​ ಮನವೊಲಿಸಲಿ; ಲಖನ್​ ಜಾರಕಿಹೊಳಿ
ಲಖನ್​ ಜಾರಕಿಹೊಳಿ
  • Share this:
ಬೆಳಗಾವಿ,(ಡಿ.31): ರಮೇಶ್​ ಜಾರಕಿಹೊಳಿ ಕಾಂಗ್ರೆಸ್​ನಲ್ಲಿಯೇ ಇರಬೇಕೆಂಬುದು ನಮ್ಮ ಆಸೆ. ಕಾಂಗ್ರೆಸ್​ ನಾಯಕರು ರಮೇಶ್​ ಮನವೊಲಿಸಲಿ ಎಂದು ಲಖನ್​ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್​ನಲ್ಲಿ ಮಾತನಾಡಿದ ಅವರು, ನಾನು ಮತ್ತು ರಮೇಶ್​ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ನಮ್ಮ ಸಂಪರ್ಕಕ್ಕೂ ರಮೇಶ್​ ಜಾರಕಿಹೊಳಿ ಸಿಕ್ಕಿಲ್ಲ. ಹೈಕಮಾಂಡ್ ನಾಯಕರು ಮನವೊಲಿಸಬೇಕು. ಸತೀಶ್​ ಜಾರಕಿಹೊಳಿಗೆ ಮಾತ್ರ ಈ ಹೊಣೆ ಬೇಡ ಎಂದರು.

ಮುಂದಿನ ಲೋಕಸಭೆ ಚುನಾವಣೆ ಗೆಲುವಿಗೆ ರಮೇಶ್​ ಪಾತ್ರ ಮಹತ್ವದಾಗಿದೆ. ಸಚಿವ ಸ್ಥಾನದಿಂದ ಕೈಬಿಟ್ಟಿದ್ದರಿಂದ ಅಸಮಾಧಾನ ಸಹಜ. 25 ವರ್ಷದಿಂದ ಕಾಂಗ್ರೆಸ್​ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಮೇಶ್​ ಜಾರಕಿಹೊಳಿ. ಚಿಕ್ಕೋಡಿ, ಬೆಳಗಾವಿ ಲೋಕಸಭೆ ಗೆಲ್ಲಲು ರಮೇಶ್​ ಅನಿವಾರ್ಯ ಎಂದು ಹೇಳಿದರು.

ಇದನ್ನೂ ಓದಿ: ಬಿಎಸ್​ವೈ- ರಮೇಶ್​ ಜಾರಕಿಹೊಳಿ ದೆಹಲಿಗೆ ದೌಡು: ಆಪರೇಷನ್ ಕಮಲಕ್ಕೆ‌ ಅಣಿಯಾಗುತ್ತಿದೆಯಾ ಬಿಜೆಪಿ?

ನನ್ನ ಪ್ರಕಾರ ರಮೇಶ್​ ಜಾರಕಿಹೊಳಿ ದೆಹಲಿಯಲ್ಲಿ ಇರಬಹುದು. ಅವರು ಕಾಂಗ್ರೆಸ್​ನಲ್ಲಿ ಉಳಿಯಬೇಕು ಎಂಬುದು ನನ್ನ ಆಶಾಭಾವನೆ. ಹೈಕಮಾಂಡ್ ನಾಯಕರು ಸಮಾಧಾನಪಡಿಸಲಿ ಎಂದರು.

ಸಂಪುಟ ವಿಸ್ತರಣೆ ಬಳಿಕ ಕೈ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಸಚಿವ ಸ್ಥಾನದಿಂದ ಕೈಬಿಟ್ಟ ರಮೇಶ್​ ಜಾರಕಿಹೊಳಿ ಕಣ್ಮರೆಯಾಗಿದ್ದರು. ಇದೀಗ ಬಿಜೆಪಿ ನಾಯಕರು ದೆಹಲಿಯಲ್ಲಿ ಆಪರೇಷನ್​ ಕಮಲ ನಡೆಸುತ್ತಿದ್ದಾರೆ. ರಮೇಶ್​ ಶೀಘ್ರದಲ್ಲೇ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

First published:December 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading